ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ವಾರ್ಷಿಕ ಕೌನ್ಸಿಲ್ ( ಮಹಾಸಭೆ) ದಿನಾಂಕ 22/12/20 ರಂದು ರಾತ್ರಿ 8 ಘಂಟೆಗೆ ತಾಜುಲ್ ಉಲಮಾ ಮದ್ರಸ ಸತ್ತಿಕ್ಕಲ್ ನಲ್ಲಿ ನಡೆಯಿತು.
ಸೆಕ್ಟರ್ ಉಪಾಧ್ಯಕ್ಷರಾದ ಸಯ್ಯಿದ್ ಸಾಬಿತ್ ತಂಙಳ್ ರವರ ದುವಾ ಹಾಗೂ ಉದ್ಘಾಟನೆಯೊಂದಿಗೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಕಲಂದರ್ ಪಾಟ್ರಕೋಡಿಯವರು ಸ್ವಾಗತ ಹಾಗೂ ವಾರ್ಷಿಕ ವರದಿ ವಾಚಿಸಿದರು. ಸೆಕ್ಟರ್ ಕೋಶಾಧಿಕಾರಿ ಸಿದ್ದೀಕ್ ಪೆರ್ನೆ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಸ್ವಾದಿಕ್ ಮು ಈನಿ ಗಡಿಯಾರ್ ಅಧ್ಯಕ್ಷತೆ ವಹಿಸಿದ್ದರು.

ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ನಿಂದ ಚುನಾವಣಾ ವೀಕ್ಷಕರಾಗಿ ಆಗಮಿಸಿದ ಹಮೀದ್ ಸಖಾಫಿ ಹಾಗೂ ಮಜೀದ್ ಕಬಕ ರವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಹಮೀದ್ ಸಖಾಫಿ ಉಸ್ತಾದರು ಸಂಘಟನಾ ತರಗತಿ ನಡೆಸಿದರು. ಬಳಿಕ ಹಳೆ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರು: ಸಯ್ಯಿದ್ ಸಾಬಿತ್ ಸಖಾಫಿ ಅಲ್ ಮು ಈನಿ ತಂಙಳ್ ಪಾಟ್ರಕೋಡಿ
ಪ್ರಧಾನ ಕಾರ್ಯದರ್ಶಿ: ನೌಫಲ್ ಸತ್ತಿಕ್ಕಲ್
ಕೋಶಾಧಿಕಾರಿ: ಅನ್ಸಾರ್ ಸತ್ತಿಕ್ಕಲ್
ಉಪಾಧ್ಯಕ್ಷರುಗಳು: ಜಾಬಿರ್ ಸ ಅದಿ ಗಡಿಯಾರ್,ಹಾರಿಸ್ ಕೆಮ್ಮಣ್
ಜೊತೆ ಕಾರ್ಯದರ್ಶಿಗಳು: ಸಾಬಿತ್ ಪಾಟ್ರಕೋಡಿ, ಅಝೀಝ್ ಸತ್ತಿಕ್ಕಲ್
ಕ್ಯಾಂಪಸ್ ಕಾರ್ಯದರ್ಶಿ: ಜಾಬಿರ್ ಸೂರಿಕುಮೇರ್
ಕಾರ್ಯಾಕಾರಿ ಸಮಿತಿ:
1)ಹಾಫಿಳ್ ತೌಸೀಫ್ ಅಸ್ ಅದಿ ಕೆಮ್ಮಣ್
2)ಸ್ವಾದಿಕ್ ಮು ಈನಿ ಗಡಿಯಾರ್
3)ಕಲಂದರ್ ಪಾಟ್ರಕೋಡಿ
4)ಸಿದ್ದೀಕ್ ಪೆರ್ನೆ
5)ಹಫೀಝ್ ಪೆರ್ನೆ
6)ಉಸೈದ್ ಮುಸ್ಲಿಯಾರ್ ಸೂರ್ಯ
7)ನವಾಝ್ ಸೂರ್ಯ
8)ಮುಸ್ತಫಾ ಬುಡೋಳಿ
9)ಸಿನಾನ್ ಬುಡೋಳಿ
10) ಮುಬಶ್ಶಿರ್ ಮುಸ್ಲಿಯಾರ್ ಸೂರಿಕುಮೇರ್
11)ಮುಹಮ್ಮದ್ ಅಲಿ ಶೇರ ಬರಿಮಾರ್
12)ಲತೀಫ್ ಸ ಅದಿ ನೇರಳಕಟ್ಟೆ
13)ಮಿಕ್ ದಾದ್ ನೇರಳಕಟ್ಟೆ
14)ಶಂಸುದ್ದೀನ್ ಶೇರ ಬರಿಮಾರ್
ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಕೋಶಾಧಿಕಾರಿಯಾಗಿ ಕಾರ್ಯಾಚರಿಸಿ ಇದೀಗ ಎಸ್ ವೈ ಎಸ್ ಗೆ ಪಾದಾರ್ಪಣೆ ಮಾಡಿದ ಕಲಂದರ್ ಬುಡೋಳಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಳಿಕ ನೂತನ ಸಮಿತಿಗೆ ಕಡತಗಳನ್ನು ಹಸ್ತಾಂತರಿಸಲಾಯಿತು. ನೂತನ ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಪ್ರಧಾನ ಕಾರ್ಯದರ್ಶಿಯವರು ಧನ್ಯವಾದಗಳನ್ನು ಅರ್ಪಿಸಿ ಮೂರು ಸ್ವಲಾತಿನೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ