janadhvani

Kannada Online News Paper

KCF

ಯುಪಿಯ ಅಯ್ಯೂಬ್ ಖಾನ್ ತ್ವಾಯಿಫ್ ನಲ್ಲಿ ನಿಧನ: ದಫನ ಕಾರ್ಯಕ್ಕೆ ನೆರವಾದ ಕೆಸಿಎಫ್

ಉತ್ತರಪ್ರದೇಶದ ಪ್ರತಾಪ್ ಗರಿನ ಅಯ್ಯೂಬ್ ಖಾನ್ ರವರು ಸೌದಿ ಅರೇಬಿಯಾದ ತ್ವಾಯಿಫ್ ನಲ್ಲಿ ಡಿಸೆಂಬರ್ 20ರಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಕಳೆದ ಒಂದು ತಿಂಗಳ ಕಾಲ ತಲೆಯ ನರದ ತೊಂದರೆಯಿಂದ ಆಸ್ಪತ್ರೆಯಲ್ಲಿದ್ದ ಅವರಿಗೆ ಒಂದು ಶಸ್ತ್ರಚಿಕಿತ್ಸೆಯೂ ನಡೆದಿತ್ತು. ನಿಧನರಾದ ಸಂದರ್ಭದಲ್ಲಿ ಅಯ್ಯೂಬ್ ಖಾನ್ ರವರ ಸಹೋದರ ಇಸ್ತಿಕ್ಕಾರ್ ಅಹ್ಮದ್ ರವರು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ತ್ವಾಯಿಫ್ ಸೆಕ್ಟರ್ ಅಧ್ಯಕ್ಷರಾದ ಇಖ್ಬಾಲ್ ಮದನಿ ರವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅದರಂತೆ ಇಖ್ಬಾಲ್ ಮದನಿಯವರು ಮದೀನಾ ಕೆಸಿಎಫ್ ಕಾರ್ಯಕರ್ತನಾದ ರಝ್ಝಾಕ್ ಉಳ್ಳಾಲರವರನ್ನು ಸಂಪರ್ಕಿಸಿ ಅವರ ಸಹಕಾರದೊಂದಿಗೆ ಅಂತ್ಯಸಂಸ್ಕಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು.

ಭಾರತದ ರಾಯಭಾರಿ ಕಛೇರಿ, ತ್ವಾಯಿಫ್ ಪೋಲಿಸ್ ಠಾಣೆ ಹಾಗೂ ಆಸ್ಪತ್ರೆಯಿಂದ ಬೇಕಾದ ಕಾಗದಗಳು ಸಿಕ್ಕಿದ ನಂತರ ಕೆಸಿಎಫ್ ಕಾರ್ಯಕರ್ತರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರಕ್ಕೆ ಬೇಕಾದ ವ್ಯವಸ್ಥೆಗಳನ್ನು‌ ಮಾಡಿ ಡಿಸೆಂಬರ್ 22ರಂದು ಅಸರ್ ನಮಾಝಿನ ಬಳಿಕ ತ್ವಾಯಿಫ್ ನಲ್ಲಿರುವ ಅಬ್ಬಾಸಿಯ್ಯಾ ದಫನ ಭೂಮಿಯಲ್ಲಿ ಮಯ್ಯತ್ ದಫನ ಮಾಡಲಾಯಿತು.

ಅಂತ್ಯಸಂಸ್ಕಾರದ ಸಮಯದಲ್ಲಿ ಅಯ್ಯೂಬ್ ಖಾನ್ ರವರ ಸಹೋದರ ಇಸ್ತಿಕ್ಕಾರ್ ಅಹ್ಮದ್, ಊರಿನವರಾದ ಬಶೀರ್ ಅಹ್ಮದ್, ಖಲೀಲ್ ಹನೀಫ್ ಹಾಗೂ ಕುಟುಂಬದವರು ಸೇರಿದ್ದರು.

error: Content is protected !! Not allowed copy content from janadhvani.com