ಕಳಸ: ಕರ್ನಾಟಕ ರಾಜ್ಯ SSF ಸಂಸೆ ಶಾಖೆಯ ಮಹಾಸಭೆಯು SSF ಸಂಸೆ ಯೂನಿಟ್ ಅಧ್ಯಕ್ಷರಾದ ಅರ್ಸಲ್ ಕೆ.ಪಿ ಯವರ ಅಧ್ಯಕ್ಷತೆಯಲ್ಲಿ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಜರಗಿತು.
ಸಂಸೆ ರಹ್ಮಾನಿಯ ಜುಮಾ ಮಸೀದಿ ಖತೀಬ್ ಉಸ್ತಾದ್ ಜುರೈಜ್ ಸಅದಿ ಕಾಸರಗೋಡು ಮಾತಾಡಿ ಸಂಘಟನೆಗೆ ನಮ್ಮ ನೇತಾರರು ತ್ಯಾಗ ಮಾಡಿದ ಕಾರ್ಯಾಚರಣೆಯ ಬಗ್ಗೆ ವಿವರಿಸಿ, ಉತ್ತಮ ರೀತಿಯಲ್ಲಿ ಸಂಘಟನೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕರೆ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ನೂತನ ಸಮಿತಿಯನ್ನು ರಚಿಸಲಾಯಿತು ಅಧ್ಯಕ್ಷರು: ಹನೀಫ್ ಎಂ.ಎಸ್, ಪ್ರಧಾನ ಕಾರ್ಯದರ್ಶಿ ಹಾರಿಸ್ ಕೆ.ಪಿ, ಕೋಶಾಧಿಕಾರಿ ಕಬೀರ್ S Y, ಉಪಾಧ್ಯಕ್ಷರುಗಳಾಗಿ ನವಾಝ್ ಎ.ಎಸ್, ಸಿರಾಜ್, ಜೊತೆ ಕಾರ್ಯದರ್ಶಿಯಾಗಿ ಮುಹ್ಸಿನ್, ಮೀಡಿಯಾ ಕಾರ್ಯದರ್ಶಿಯಾಗಿ ಜಾಬಿರ್ S Y ಹಾಗೂ ಕಾರ್ಯಕಾರಿ ಸದಸ್ಯರುಗಳಾಗಿ ಫಯಾಝ್,
ಆಬಿದ್, ಹುಸೈನ್, ಹಫೀಳ್, ಅರ್ಸಲ್ ರವರನ್ನು ಆಯ್ಕೆಗೊಳಿಸಲಾಯಿತು
ಕಾರ್ಯಕ್ರಮವನ್ನು ಜಾಬಿರ್ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಹಾರಿಸ್ ಧನ್ಯವಾದ ಸಲ್ಲಿಸಿದರು.