janadhvani

Kannada Online News Paper

ಕೆಸಿಎಫ್ ಖಮೀಷ್ ಮುಶೈತ್: ನೂತನ ಬಲದ್ ಹಾಗೂ ಅಬಹ ಯುನಿಟ್ ಗಳು ಅಸ್ತಿತ್ವಕ್ಕೆ

ಜಿದ್ದಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಖಮೀಸ್ ಮುಶೈತ್ ಸೆಕ್ಟರ್ ಅಧೀನದಲ್ಲಿ ನೂತನ ಬಲದ್ ಹಾಗೂ ಅಬಹ ಯೂನಿಟ್ ನ ರಚನೆಗಳು ಇತ್ತೀಚೆಗೆ ನಡೆಯಿತು.

ರಶೀದ್ ತೋಟಲ್ ರವರ ನಿವಾಸದಲ್ಲಿ ಬಲದ್ ಯೂನಿಟ್ ಹಾಗೂ ಆದಿಲ್ ಮೂಡುಬಿದ್ರಿ ನಿವಾಸದಲ್ಲಿ ಅಬಹ ಯೂನಿಟ್ ನ ರಚನೆ ಕಾರ್ಯಕ್ರಮದಲ್ಲಿ ಖಮೀಸ್ ಮುಶೈತ್ ಸೆಕ್ಟರ್ ಅಧ್ಯಕ್ಷರು ಅಬ್ದುಲ್ ರಝಾಕ್ ಬನ್ನೂರ್ ರವರು ಅಧ್ಯಕ್ಷತೆ ವಹಿಸಿ ಸಂಘಟನೆಯ ಮಹತ್ವದ ಬಗ್ಗೆ ವಿವರಿಸಿದರು. ನಂತರ ಯೂನಿಟ್ ಸಮಿತಿಗಳನ್ನು ರಚಿಸಿ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.

ಬಲದ್ ಯೂನಿಟ್ ನ ನೂತನ ಸಾರಥಿಗಳು:
ಅಧ್ಯಕ್ಷರು: ನಿಸಾರುದ್ದೀನ್ ಕೆಸಿರೋಡ್.
ಪ್ರಧಾನ ಕಾರ್ಯದರ್ಶಿ: ಜಾಸೀರ್ ಸಾಮಾಣಿಗೆ
ಕೋಶಾಧಿಕಾರಿ: ಅಬೂಬಕ್ಕರ್ ಪುರಸರಕಟ್ಟೆ.
ಉಪಾಧ್ಯಕ್ಷರಾಗಿ: ಇಸ್ಮಾಯಿಲ್ ಬೊಳಿಯಾರ್, ನಾಸಿರ್ ತೋಟಲ್. ಜೊತೆ ಕಾರ್ಯದರ್ಶಿಯಾಗಿ ಅಮೀನ್ ಬೇಂಗರೆ ಹಾಗೂ ಕಾರ್ಯಕಾರಿ ಸದಸ್ಯರಾಗಿ ಇಲ್ಯಾಸ್ ಗುರುಪುರ, ರಶೀದ್ ತೋಟಲ್ ಎಂಬವರನ್ನು ಆಯ್ಕೆ ಮಾಡಲಾಯಿತು.

ಕೆಸಿಎಫ್ ಅಬಹ ಯೂನಿಟ್ ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಸ್ವದಕತುಲ್ಲಾ ಕುಶಾಲನಗರ.
ಪ್ರಧಾನ ಕಾರ್ಯದರ್ಶಿ: ಹೈದರ್ ಮಂಜೆಶ್ವರ.
ಕೋಶಾಧಿಕಾರಿ: ಅರ್ಷದ್ ಉಜಿರೆ. ಉಪಾಧ್ಯಕ್ಷರಾಗಿ ಸಫ್ವಾನ್ ಬೆಳ್ತಂಗಡಿ, ಮುಖ್ತಾರ್ ಬೆಳ್ತಂಗಡಿ. ಜೊತೆ ಕಾರ್ಯದರ್ಶಿಗಳಾಗಿ ಆಸಿಫ್ ವಿಟ್ಲ, ರಮ್ಸಿಲ್ ವಿಟ್ಲ ಹಾಲು ಹಾಗೂ ಕಾರ್ಯಕಾರಿ ಸದಸ್ಯರಾಗಿ ನಿಯಾಝ್ ವೇಣೂರು, ಆದಿಲ್ ಮೂಡಬಿದ್ರೆ, ಝಹೀರ್ ಕೊಡಗು ಎಂಬವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ಅಬ್ದುಲ್ ರಝಾಕ್ ವಿಟ್ಲ, ಸಂಘಟನಾ ವಿಭಾಗದ ಕಾರ್ಯದರ್ಶಿ ಅಬೂಬಕರ್ ಪುರುಷರಕಟ್ಟೆ, ಸಾಂತ್ವನ ಇಲಾಖೆಯ ಅಧ್ಯಕ್ಷರಾದ ರಶೀದ್ ತೋಟಲ್, ಪ್ರಕಾಶನ ಇಲಾಖೆಯ ಕಾರ್ಯದರ್ಶಿ ಅಝೀಝ್ ಸಾಮಾಣಿಗೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com