janadhvani

Kannada Online News Paper

ಕುಂಬ್ರ ಮರ್ಕಝ್: ‘ಬಹರೈನ್ ಭವನ್’ ಗೆ ಶಿಲಾನ್ಯಾಸ ಮತ್ತು ಗಣ್ಯರ ಸಮಾವೇಶ

ಪುತ್ತೂರು ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಆಡಳಿತ ಸೌಧ, ‘ಬಹರೈನ್ ಭವನ್‌’ನ ಶಿಲಾನ್ಯಾಸ ಕಾರ್ಯಕ್ರಮವನ್ನು ಕುಂಬ್ರ ಮರ್ಕಝ್‌ನಲ್ಲಿ ‌ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಮದನಿ‌ಅಲ್ ಹಾದಿ ತಂಙಳ್ ನಿರ್ವಹಿಸಿದರು. ಬಹರೈನ್ ಮರ್ಕಝುಲ್ ಹುದಾ ಸಮಿತಿಯ ಪ್ರಾಯೋಜಕತ್ವದಲ್ಲಿ ನಿರ್ಮಾಣವಾಗಲಿರುವ ಸದರಿ ಕಟ್ಟಡದಲ್ಲಿ ಸಂಸ್ಥೆಯ ಆಡಳಿತಾತ್ಮಕ ಕಚೇರಿಗಳು ಕಾರ್ಯ ನಿರ್ವಹಿಸಲಿವೆ.

ಸಂಸ್ಥೆಯ ಇಪ್ಪತ್ತನೆಯ ವಾರ್ಷಿಕ “ಮಾರ್ಕ್ -20” ಯ ಅಂಗವಾಗಿ ನಡೆದ “ಎಮಿನೆಂಟ್ಸ್ ಮೀಟ್” ನಲ್ಲಿ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಿ, ಕರ್ನಾಟಕ ಮುಸ್ಲಿಂ ಜಮಾಅತ್‌ನ ಪುತ್ತೂರು ತಾಲೂಕು ಘಟಕಾಧ್ಯಕ್ಷ ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿ ಉದ್ಘಾಟಿಸಿದರು.

ಅನಿವಾಸಿ ಉದ್ಯಮಿಗಳಾದ ಜಮಾಲುದ್ದೀನ್ ಮುಲ್ಕಿ, ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಬಶೀರ್ ಇಂದ್ರಾಜೆ, ಪುತ್ತೂರು ಎಪಿಎಂಸಿ‌ ಸದಸ್ಯರಾದ ಶುಕೂರ್ ಹಾಜಿ, ಬಹರೈನ್ ಮರ್ಕಝುಲ್ ಹುದಾ ಸಮಿತಿ ಪ್ರತಿನಿಧಿಗಳಾದ ಬಶೀರ್ ಕಾರ್ಲೆ, ಸಯ್ಯಿದ್ ಇರ್ದೆ, ಯು.ಎ.ಇ‌ ಪ್ರತಿನಿಧಿಗಳಾದ ಕಲಂದರ್ ಕಬಕ, ಅಬ್ದುಲ್ ರಝಾಖ್ ಬುಸ್ತಾನಿ, ಗಣ್ಯರಾದ ಹಸೈನಾರ್ ಹಾಜಿ‌ ಕೊಡಿಪ್ಪಾಡಿ,ಆದಂ ಹಾಜಿ ಪಡೀಲ್,ಇಸ್ಮಾಯಿಲ್ ಹಾಜಿ , ಶರೀಅತ್ ಕಾಲೇಜ್ ಉಪ ಪ್ರಾಂಶುಪಾಲ ಜಲೀಲ್ ಸಖಾಫಿ ಜಾಲ್ಸೂರು, ಅಬ್ದುಲ್ ಕರೀಂ ಕಾವೇರಿ, ಅಬ್ದುಲ್ ಲತೀಫ್ ಹಾಜಿ ಕೆಮ್ಮಾಯಿ, ಮರ್ಕಝ್ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸಾಲ್ಮರ ಹಂಝ ಹಾಜಿ, ಖಾಸಿಂ ಹಾಜಿ ಮಿತ್ತೂರು, ಮೊಯ್ದೀನ್ ಹಾಜಿ ಸುಳ್ಯ,ಸದಸ್ಯರಾದ ಬದ್ರುದ್ದೀನ್ ಹಾಜಿ,ಆಶಿಕುದ್ದೀನ್, ಇಖ್ಬಾಲ್ ಬಪ್ಪಳಿಗೆ,ಪದವಿ ಕಾಲೇಜ್ ಪ್ರಾಂಶುಪಾಲ ಮನ್ಸೂರ್ ಕಡಬ, ಯು.ಎ.ಇ. ಸಮಿತಿಯ ಸಂಚಾಲಕ ಸಿದ್ದೀಕ್ ಮುಸ್ಲಿಯಾರ್ ಉಪಸ್ಥಿತರಿದ್ದರು

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ ಮಂಡಿಸಿದರು. ಶರೀಅತ್ ಕಾಲೇಜ್ ಪ್ರಿನ್ಸಿಪಾಲ್ ವಳವೂರು‌ ಮುಹಮ್ಮದ್ ಸ‌ಅದಿ ಪ್ರಾರ್ಥನೆ ನಿರ್ವಹಿಸಿದರು.ಮೆನೇಜರ್ ಬಿಕೆ ರಶೀದ್ ಸಂಪ್ಯ ಅತಿಥಿಗಳನ್ನು ಸ್ವಾಗತಿಸಿದರು.

error: Content is protected !! Not allowed copy content from janadhvani.com