janadhvani

Kannada Online News Paper

ದಾರುಲ್ ಮುಸ್ತಫಾದಲ್ಲಿ ಬೇಕಲ್ ಉಸ್ತಾದ್ ಅನುಸ್ಮರಣೆ ಹಾಗೂ ಖಾಝಿ ಝೈನುಲ್ ಉಲಮಾರಿಗೆ ಸನ್ಮಾನ

ಬಂಟ್ವಾಳ, ಅ17: ಇತ್ತೀಚಿಗೆ ಅಗಲಿದ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಅವರ ಅನುಸ್ಮರಣೆ ಹಾಗೂ ನೂತನ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ರಿಗೆ ಸನ್ಮಾನ ಕಾರ್ಯಕ್ರಮ ನಚ್ಚಬೆಟ್ಟು ದಾರುಲ್ ಮುಸ್ತಫಾ ಮೋರಲ್ ಅಕಾಡಮಿಯಲ್ಲಿ ಶನಿವಾರ ನಡೆಯಿತು.

ಅನುಸ್ಮರಣಾ ಕಾರ್ಯಕ್ರಮಕ್ಕೆ ಅಸ್ಸಯ್ಯಿದ್ ಸಾದಾತ್ ತಂಙಳ್ ಕರುವೇಲ್ ಪ್ರಾರ್ಥನೆ ಮೂಲಕ ಚಾಲನೆ ನೀಡಿದರು. ನೂತನ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಾರುಲ್ ಮುಸ್ತಫಾ ಸಂಸ್ಥೆಯ ಸ್ಥಾಪಕ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಭಾಷಣ ಮಾಡಿದರು.

ಬಳಿಕ ನೂತನ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ನ ಸಹಾಯಕ ಖಾಝಿ ಅಬ್ದುರ್ರಹ್ಮಾನ್ ಮದನಿ ಮೂಳೂರು ಹಾಗೂ ದಾರುಲ್ ಮುಸ್ತಫ ಮೊರಲ್ ಅಕಾಡೆಮಿ ಉಳ್ಳಾಲ ಝೋನ್ ಕಮಿಟಿ ಅಧ್ಯಕ್ಷ ಹನೀಫ್ ಹಾಜಿ ಅವರನ್ನು ಸನ್ಮಾನ ಮಾಡಲಾಯಿತು.ದಾರುಲ್ ಮುಸ್ತಫಾ ವತಿಯಿಂದ ಇಸ್ಲಾಮಿಕ್ ಕರ್ಮಶಾಸ್ತ್ರದ ಅಧಿಕೃತ ಗ್ರಂಥ ತುಹ್ಫತುಲ್ ಮುಹ್ತಾಜ್ ಆನ್‌ಲೈನ್ ಕೋರ್ಸ್ ಅನ್ನು ಕರ್ನಾಟಕದ ಸುಮಾರು 70 ರಷ್ಟು ಯುವ ವಿದ್ವಾಂಸರಿಗೆ ಪ್ರತಿನಿತ್ಯ ನಡೆಸುತ್ತಿದ್ದು, ಆ ತರಗತಿಯೂ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಬೇಕಲ ಉಸ್ತಾದರ ಪುತ್ರ ಅಬ್ದುಲ್ ಜಲೀಲ್ ಮೋಂಟುಗೋಳಿ, ಮೂಳೂರು ಅಬ್ದುರ್ರಹ್ಮಾನ್ ಮದನಿ ಮಾತನಾಡಿದರು. ನೆಚ್ಚಬೆಟ್ಟು ಜುಮಾ ಮಸೀದಿ ಅದ್ಯಕ್ಷ ಅಬ್ದುರ್ರಹ್ಮಾನ್ ಗಡಿಯಾರ, ಅಬೂಬಕರ್ ಹಾಜಿ ಕೆಮ್ಮಣ್ , ಬಾವ ಹಾಜೀ ಮೂಳೂರು ಹಾಗೂ ಇತರರು ಪಾಲ್ಗೊಂಡಿದ್ದರು.

ರಶೀದ್ ಸಖಾಫಿ ಗಡಿಯಾರ್ ಸ್ವಾಗತಿಸಿ, ದಾರುಲ್ ಮುಸ್ತಫಾ ಜನರಲ್ ಮ್ಯಾನೇಜರ್ ಮಹ್‌ರೂಫ್ ಆತೂರು ಧನ್ಯವಾದ ಸಮರ್ಪಿಸಿದರು.

error: Content is protected !! Not allowed copy content from janadhvani.com