janadhvani

Kannada Online News Paper

AIMDF ಚಿಕ್ಕಮಗಳೂರು: ವೆಂಟಿಲೇಟರ್ ವ್ಯವಸ್ಥೆ ಒಳಗೊಂಡ ಆಂಬುಲೆನ್ಸ್ ಲೋಕಾರ್ಪಣೆ

ಚಿಕ್ಕಮಗಳೂರು: ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಪೋರಂ ವತಿಯಿಂದ ವೆಂಟಿಲೇಟರ್ ವ್ಯವಸ್ಥೆ ಒಳಗೊಂಡ ಆಂಬುಲೆನ್ಸ್ ವಾಹನವನ್ನು ಚಿಕ್ಕಮಗಳೂರಿನಲ್ಲಿ ಬಡವರ ಸೇವೆಗೆ ಸಮಾಜಕ್ಕೆ ಅರ್ಪಿಸಲಾಯಿತು.

ಸದಾ ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ AIMDF ಕರ್ನಾಟಕ ರಾಜ್ಯಾಧ್ಯಕ್ಷರಾದ ಜನಾಬ್ ನಸೀರ್ ಅಹ್ಮದ್ ಅವರು ಸಫೀನಾ ಫೌಂಡೇಶನ್ ಸಹಯೋಗದೊಂದಿಗೆ ವೆಂಟಿಲೇಟರ್ ಒಳಗೊಂಡ ಐಸಿಯು ಆಂಬುಲೆನ್ಸ್ ವಾಹನವನ್ನು ಸಮಾಜಕ್ಕೆ ಸೇವಾರ್ಪಣೆ ಮಾಡಲಾಯಿತು.

AIMDF ಸಂಸ್ಥಾಪಕ ಅಧ್ಯಕ್ಷ ಜನಾಬ್ ಶಕೀಲ್ ಹಸನ್ ಅವರ ಘನ ಉಪಸ್ಥಿತಿಯಲ್ಲಿ ಹಾಗೂ ಜನಾಬ್ ನಸೀರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಸರ್ಜನ್ ಮೇಡಂ ಕಮಲಾ ಅವರ ಜೊತೆ ಜಿಲ್ಲೆಯ ಹಲವು ನಾಯಕರು ಭಾಗವಹಿಸಿದ್ದರು. ಹಲವಾರು ವರ್ಷಗಳಿಂದ ಐಸಿಯು ಆಂಬುಲೆನ್ಸ್ ಇಲ್ಲದೆ ಸಂಕಷ್ಟದಲ್ಲಿದ್ದ ಚಿಕ್ಕಮಗಳೂರು ಜನತೆ ಬೆಂಗಳೂರು ಅಥವಾ ಮಂಗಳೂರಿನ ಆಸ್ಪತ್ರೆಗೆ ಸಾಮಾನ್ಯ ಆಂಬುಲೆನ್ಸಲ್ಲಿ‌ ಬರೋಬ್ಬರಿ ರೂಪಾಯಿ ನಲ್ವತ್ತು ಸಾವಿರದಷ್ಟು ನೀಡಬೇಕಾದ ಪರಿಸ್ಥಿತಿಯಲ್ಲಿದ್ದು , ಇದನ್ನು ಮನಗಂಡು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಚಿಕ್ಕಮಗಳೂರು ಜನತೆಗೆ ಈ ಆಂಬುಲೆನ್ಸ್ ಮೂಲಕ ಆಶ್ವಾಸನೆ ನೀಡಿದೆ.

ಆಂಬುಲೆನ್ಸ್ ಲೋಕಾರ್ಪಣೆ ಸಂಧರ್ಭದಲ್ಲಿ AIMDF ಸಂಸ್ಥಾಪಕ ಸದಸ್ಯರಾದ ಅಬ್ದುಲ್ ರಹೀಮ್, ಅಬೂಬಕರ್ ಸಜಿಪ , ಅಮ್ಜದ್ ತುಮಕೂರು, ನಝೀರ್ ಅಹ್ಮದ್ ಮುಲ್ಲಾ , ಶೌಕತ್ ಅಲಿ ಬಂಕಾಪುರ ಖಲಂದರ್ ತುರ್ಛಘಟ್ಟ ಖಾಸೀಂ ಪಟೇಲ್ ಜೇವರ್ಗಿ, ರಾಜ್ಯ ಐಟಿ ಸೆಲ್ ಮುಖ್ಯಸ್ಥರಾದ ಮುಹಮ್ಮದ್ ದಾನಿಶ್ , ತಮಿಳುನಾಡು ರಾಜ್ಯ ಉಸ್ತುವಾರಿಯಾಗಿರುವ ಜನಾಬ್ ಬಿಲಾಲ್ ನತ್ತಾರ್ , ಕರ್ನಾಟಕ ರಾಜ್ಯ ಸಹ ಸಂಚಾಲಕರಾದ ಹಾರೀಸ್ ಹೆಮ್ಮಾಡಿ , ರಾಜ್ಯ ಐಟಿ ಸೆಲ್ ಕಾರ್ಡಿನೇಟರ್ ಮೆಹಬೂಬ್ ದಖನಿ , ಉಡುಪಿ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಸಲ್ಮಾನ್ , ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಆಸಿಫ್ ಚೊಕ್ಕಬೆಟ್ಟು , ಮುಫ್ತಿ ತೌಖೀರದ ಸಾಬ್ , ಮುಫ್ತಿ ಅಸ್ಗರ್ ಸಾಬ್ , ಮೌಲಾನಾ ಅಸ್ಗರ್ ಸಾಬ್ , ನಿವೃತ್ತ ಪೊಲೀಸ್ ಅಧಿಕಾರಿ ಶಬೀರ್ ಅಹ್ಮದ್ , ಉದ್ಯಮಿ ಅಕ್ಮಲ್ ಸಿಎನ್
ಹಾಗೂ ಆಂಬುಲೆನ್ಸ್ ಸಾರಥಿ ಜೀಶಾನ್ ಜೊತೆಗಿದ್ದರು.

error: Content is protected !! Not allowed copy content from janadhvani.com