janadhvani

Kannada Online News Paper

ರಾಜ್ಯದ ಮುಸ್ಲಿಮರ ರಾಜಕೀಯ ಅವಸ್ಥೆ ಶೋಚನೀಯವಾಗಿದೆ- ಶಾಫಿ ಸಅದಿ

ಚಿಕ್ಕಮಗಳೂರು: ನವಂಬರ್ 3ರಂದು ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಮಟ್ಟದ ಸಮಿತಿಗಳ ರಚನಾ ಸಮಾವೇಶ ನಗರದ ಸಹರಾ ಕನ್ವೆ ನ್ಷನ್ ಹಾಲ್ ನಲ್ಲಿ ಜಿಲ್ಲಾ ಅಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಮುಸ್ಲಿಂ ಜಮಾತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ವಕ್ಫ್ ಮಂಡಳಿ ಸದಸ್ಯರು ಆದ ಮೌಲಾನ ಶಾಫಿ ಸಅದಿ ರವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಮುಸ್ಲಿಂ ರಾಜಕೀಯ ನಾಯಕರ ಕೊರತೆ ಇದ್ದು ಈ ದುರ್ಬಲತೆಗೆ ವಿಷಾದವನ್ನು ವ್ಯಕ್ತಪಡಿಸಿದರು.

ಮುಸ್ಲಿಮರು ಎಲ್ಲ ರಂಗದಲ್ಲೂ ಶೈಕ್ಷಣಿಕವಾಗಿ, ರಾಜಕೀಯವಾಗಿ ಬಹಳ ಹಿಂದುಳಿದಿದ್ದಾರೆ ಈ ಹಿಂದೆ ಲೋಕಸಭೆ ಮತ್ತು ರಾಜ್ಯಸಭೆ ಯಲ್ಲಿ ಅನೇಕ ಮುಸ್ಲಿಂ ನಾಯಕರು ಸೇವೆ ಸಲ್ಲಿಸಿದ್ದು ರಾಜಕೀಯದಲ್ಲಿ ಮುತವರ್ಜಿಯನ್ನು ವಹಿಸಿದ್ದರ ಕಾರಣ ಅಂದು ವಿಧಾನಸಭೆಯಿಂದ ಸಂಸತ್ ಭವನದಲ್ಲೂ ಸಹ ಮುಸ್ಲಿಮರ ಪರ ಧ್ವನಿ ಗೋಚರಿಸುತ್ತಿತ್ತು.

ಇಂದಿನ ಬೆಳವಣಿಗೆಯಲ್ಲಿ ಇದೀಗ ಬೆರಳೆಣಕೆಯಷ್ಟು ಮುಸ್ಲಿಂ ನಾಯಕರು ಇದ್ದು ಸಮುದಾಯದಲ್ಲಿ ರಾಜಕೀಯ ನಾಯಕರ ಕೊರತೆ ಉಂಟಾಗಿರುತ್ತದೆ. ಇದಕ್ಕೆ ನಮ್ಮಲ್ಲಿನ ವೈಯುಕ್ತಿಕ ದ್ವೇಷಗಳ ಅಂಬಾರೆ ಕಾರಣವಾಗಿದೆ ಹಾಗು ಇಂದಿನ ರಾಜಕೀಯ ಬೆಳವಣಿಗೆಯಲ್ಲಿ ಗ್ರಾಮ ಪಂಚಾಯತಿಯಿಂದ ಹಿಡಿದು ಲೋಕಸಭೆ, ಮತ್ತು ರಾಜ್ಯಸಭೆ ವರೆಗೂ ಮುಸ್ಲಿಮರ ರಾಜಕೀಯ ಪ್ರವೇಶ ಅತ್ಯವಶ್ಯಕ.

ಮುಸ್ಲಿಂ ಪ್ರಾಮಾಣಿಕ ನಾಯಕರನ್ನು ಗುರುತಿಸಿ ಸಮುದಾಯದವರ ಹಿತದೃಷಿಯನ್ನು ಕಾಪಾಡಲು ಸಾಂವಿಧಾನಿಕ ವಾಗಿ ಮುಸ್ಲಿಮರ ಎಳಿಗೆಗಾಗಿ ರಾಜಕೀಯ ಪ್ರವೃತ್ತಿಯನ್ನು ಬಲಿಷ್ಟ ಗಳಿಸಲು ಸದೃಢಗೊಳಿಸಲು ಪ್ರತಿಯೊಂದು ಸಂಘಸಂಸ್ಥೆಗಳು ಮುಂದಾಗಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರು ಮುಂದಿನ ಹದಿನೈದು ದಿನಗಳ ಅವಧಿಯಲ್ಲಿ ಜಿಲ್ಲಾದ್ಯಂತ ಪ್ರತಿ ತಾಲ್ಲೂಕುವಾರು,ಹೋಬಳಿ,ಗ್ರಾಮ, ಹಾಗು ಬೂತ್ ಮಟ್ಟದಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಸಮಿತಿಗಳನ್ನು ರಚಿಲಾಗುವುದು ಎಂದು ಘೋಷಣೆ ಮಾಡಿದರು ಈ ಸಮಾರಂಭದಲ್ಲಿ ಜಿಲ್ಲಾದ್ಯಂತ ಸುನ್ನಿ ಮಸೀದಿಗಳ ಪದಾಧಿಕಾರಿಗಳು ವಿವಿಧ ಸುನ್ನಿ ಸಂಘಟನೆಗಳ ಪದಾಧಿಕಾರಿಗಳು ಮುಸ್ಲಿಂ ಮುಖಂಡರು ಉಲೇಮಾ, ಉಮಾರ, ಗಳ ಜೊತೆಗೆ ರಾಜ್ಯ ಸಮಿತಿಯ ಸದಸ್ಯ ಯೂಸುಫ್ ಹಾಜಿ, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ ಎಂ ನಾಸಿರ್, ಝಾಕಿರ್ ಹುಸೈನ್, ಶಬ್ಬೀರ್ ಅಹಮದ್, ಆರಿಫ್ ಅಲಿ ಖಾನ್, ಮುನೀರ್ ಅಹ್ಮದ್ ಇನ್ನಿತರೆ ಮುಖಂಡರು ಉಪ್ಥಿತರಿದ್ದರು ಎಂದು ಜಿಲ್ಲಾ ಸಮಿತಿ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com