ಚಿಕ್ಕಮಗಳೂರು: ಕರ್ನಾಟಕ ಮುಸ್ಲಿಂ ಜಮಾತ್ ಚಿಕ್ಕಮಗಳೂರು ಜಿಲ್ಲೆ ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ರವರು ಇಂದು ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಇವರ ನಿಧನಕ್ಕೆ ಕರ್ನಾಟಕ ಮುಸ್ಲಿಂ ಜಮಾತ್ ಚಿಕ್ಕಮಗಳೂರು ಜಿಲ್ಲೆ ಜಿಲ್ಲಾಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ಹಾಗು ಕಾರ್ಯದರ್ಶಿ ಅಲ್ ಹಜ್ ಫೈರೋಜ್ ಅಹಮದ್ ರಜ್ವೀ ರವರು ಅತೀವ ಸಂತಾಪ ಸೂಚಿಸಿದ್ದಾರೆ.
ಉಸ್ತಾದ್ ರವರು ಅಹಲೆ ಸುನ್ನತ್ ವಲ್ ಜಮಾತ್ ಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಸತತವಾಗಿ ಹಲವಾರು ವರ್ಷಗಳಿಂದ ವಿವಿಧ ಸುನ್ನಿ ಸಂಘ ಸಂಸ್ಥೆಗಳ ಮುಖಂಡರಾಗಿ ಕಾರ್ಯ ನಿರ್ವಹಿಸಿ ಸೇವೆ ಸಲ್ಲಿಸಿದರು. ಇವರ ಮರಣದಿಂದ ಸುನ್ನತ್ ಜಮಾತ್ ಗೆ ತುಂಬಲಾರದ ನಷ್ಟ ಉಂಟಾಗಿದೆ. ಮರ್ಹುಂ ಉಸ್ತಾದರ ಸೇವೆಯು ಸದಾ ನೆನಪಸಿಕೊಳ್ಳುವ ಜೊತೆಗೆ ಅಲ್ಲಾಹನು ಉಸ್ತಾದರ ಸೇವೆಯ ಕಾಣಿಕೆಯಾಗಿ ಸ್ವೀಕರಿಸಿ ಜನ್ನತುಲ್ ಫೀರ್ದೌಸ್ ಕರುಣಿಸಲಿ.
ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಕರ್ನಾಟಕ ಮುಸ್ಲಿಂ ಜಮಾತ್ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಮತ್ತು ಅಪಾರ ಕಾರ್ಯಕರ್ತರು ಆಶಿಸುತ್ತಾರೆ ಅಲ್ಲಾಹನು ಉಸ್ತಾದರ ಕುಟುಂಬ ವರ್ಗದವರಿಗೆ ನೆಮ್ಮದಿಯನ್ನು ಕರುಣಿಸಲಿ ಎಂದು ಕಾರ್ಯದರ್ಶಿ ಅಲ್ ಹಜ್ ಫೈರೋಜ್ ಅಹಮದ್ ರಜ್ವೀ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಚಿಕ್ಕಮಗಳೂರು ಸಲಾಂ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ
ಚಿಕ್ಕಮಗಳೂರು: ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಿಗೆ ಸನ್ಮಾನ
ಚಿಕ್ಕಮಗಳೂರು: ಜಾಮಿಯಾ ಕಂಝುಲ್ ಈಮಾನ್ ನಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ ಸಮಾರಂಭ
ಚಿಕ್ಕಮಗಳೂರು ಜಿಲ್ಲಾ ವಕ್ಫ್ ಮಂಡಳಿ- ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ
ಪ್ರವಾದಿ ನಿಂದನೆ- ತಪ್ಪಿತಸ್ಥರ ಶೀಘ್ರ ಬಂಧನಕ್ಕೆ ಚಿಕ್ಕಮಗಳೂರು ಮುಸ್ಲಿಂ ಜಮಾಅತ್ ಒತ್ತಾಯ
ಬಜರಂಗದಳ ಪುಂಡಾಟಿಕೆ : ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ
ಜಾಮಿಯಾ ಕಂಝುಲ್ ಈಮಾನ್ ನಲ್ಲಿ ಗಣರಾಜ್ಯೋತ್ಸವ
ಚಿಕ್ಕಮಗಳೂರು ನಗರ ಸಭೆ ಚುನಾವಣೆ: ಮೊದಲ ಹಂತದ SDPI ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಚಿಕ್ಕಮಗಳೂರು: ಜಾಮಿಯಾ ಕಂಜುಲ್ ಇಮಾನ್ ನಿಂದ ಸ್ವಾತಂತ್ರ್ಯ ದಿನಾಚರಣೆ
ಜಾಮಿಯಾ ಕಂಝುಲ್ ಇಮಾನ್ ಚಿಕ್ಕಮಗಳೂರು: ಗಣರಾಜ್ಯೋತ್ಸವ ಆಚರಣೆ