janadhvani

Kannada Online News Paper

ಶೈಖುನಾ ಬೇಕಲ್ ಉಸ್ತಾದರ ಅಗಲಿಕೆ, ಪ್ರಬುದ್ಧ ನಾಯಕತ್ವ ವೊಂದು ಅಸ್ತಮಿಸಿತು

ಮಂಗಳೂರು: ರಾಜ್ಯ ಸುನ್ನಿ ಉಲಮಾ ಒಕ್ಕೂಟದ ಅಧ್ಯಕ್ಷರೂ, ಜಾಮಿಯಾ ಸ ಅದಿಯಾ ಶರೀಅತ್ ಕಾಲೇಜಿನ ಪ್ರಾಂಶುಪಾಲರೂ, ಪ್ರಗಲ್ಭ ವಿದ್ವಾಂಸರೂ, ನಮ್ಮೆಲ್ಲರ ಆತ್ಮೀಯ ಗುರುಗಳೂ ಅಗಿರುವ ಖಾಝಿ ಶೈಖುನಾ ಬೇಕಲ್ ಉಸ್ತಾದರ ಅಗಲಿಕೆಯು ಅಗಾಧ ದುಃಖವನ್ನು ತಂದಿದೆ.
ಜೀವನದ ಸರ್ವ ಸಮಯವನ್ನು ದೀನಿಗಾಗಿ ವಿನಿಯೋಗಿಸಿ, ಸಮುದಾಯಕ್ಕಾಗಿಯೇ ನಮ್ಮ ನಡುವೆ ಜೀವಿಸಿದ್ದ ಮಹಾನ್ ಗುರುಗಳಾಗಿದ್ದರು..

ಸುನ್ನಿ ಆಶಯ, ಆದರ್ಶಗಳ ಸಂರಕ್ಷಣೆಗೆ ಉಸ್ತಾದರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನುಗ್ಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಜ್ಲಿಸ್ ಇಶಾಅತಿಸ್ಸುನ್ನಃ ಬೇಕಲ್ ಇದರ ಅಧ್ಯಕ್ಷರಾದ ಎ.ಎಂ. ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರ್ ಹೇಳಿದರು.

ಅವರು ಮಜ್ಲಿಸ್ ಇಶಾಅತಿಸ್ಸುನ್ನಃ ಬೇಕಲ್ ಇದರ ವತಿಯಿಂದ ಉಸ್ತಾದರ ನಿವಾಸದಲ್ಲಿ ನಡೆಸಿದ ಅನುಸ್ಮರಣಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
*ಮರ್ಹೂಮ್ ಶೈಖುನಾ ಬೇಕಲ್ ಉಸ್ತಾದರ ಸುಪುತ್ರ ಪಿ.ಎಂ.ಅಬ್ದುಲ್ ಜಲೀಲ್ ಮೋಂಟುಗೋಳಿ ಸಭೆಯನ್ನು ಉದ್ಘಾಟಿಸಿದರು.

ಮಜ್ಲಿಸ್ ಕಾರ್ಯದರ್ಶಿ ಎ.ಎಂ.ಇಸ್ಮಾಯಿಲ್ ಸ ಅದಿ ಉರುಮಣೆ ಸ್ವಾಗತಿಸಿದರು.
*ಜಂ-ಇಯ್ಯತುಲ್ ಉಲಮಾದ ಪ್ರ.ಕಾರ್ಯದರ್ಶಿ ಮುಹ್ ಯ್ಯುದ್ದೀನ್ ಖಾಮಿಲ್ ಸಖಾಫಿ ತೋಕೆ, ಪುತ್ತೂರು ತಾಲ್ಲೂಕು ಅಧ್ಯಕ್ಷ ಅಬ್ದುಲ್ ಸತ್ತಾರ್ ಸಖಾಫಿ, ಎಸ್.ಇ.ಡಿ.ಸಿ ರಾಜ್ಯಧ್ಯಕ್ಷ ಕೆ.ಕೆ.ಎಂ‌.ಖಾಮಿಲ್ ಸಖಾಫಿ, ಬೇಕಲ್ ಉಸ್ತಾದರ ಶಷ್ಹಂದಿರುಗಳಾದ ಅಬುಲ್ ಬುಶ್ರ ಅಬ್ದುರ್ರಹ್ಮಾನ್ ಫೈಝಿ ಸಂಪ್ಯ, ಅಬ್ಬಾಸ್ ಫೈಝಿ ಜಾಲ್ಸೂರ್, ಸಯ್ಯಿದ್ ಜಹ್ ಫರ್ ಸ್ವಾದಿಕ್ ತಂಙಲ್, ರಶಾದಿ, ಪಿ.ಎಸ್. ಇಬ್ರಾಹಿಂ ಮದನಿ ತುರ್ಕಳಿಕೆ, ಅಬ್ದುಲ್ ಮಜೀದ್ ಸಅದಿ, ಉಸ್ತಾದರ ಖಾದಿಮ್ ಇಸ್ಹಾಕ್ ಬಾ-ಹಸನಿ ಆತೂರ್ ಮೊದಲಾದವರು ಉಸ್ತಾದರನ್ನು ನೆನೆದು ಅನುಭವಗಳನ್ನು ಸಭೆಗೆ ತಿಳಿಸಿದಾಗ ನೆರೆದಿದ್ದ ಶಿಷ್ಯಂದಿರನೇಕರು ಗದ್ಗದಿತರಾದರು.

ಉಸ್ತಾದರ ನೆನಪಿಗಾಗಿ ಎಲ್ಲಾ ವಿವರಳನ್ನೊಳಗೊಂಡ ಸೈಟ್ ಆರಂಭಿಸಲು, ನಲ್ವತ್ತು ದಿವಸಗಳ ಕಾಲ ಸಮಾಧಿ ಬಳಿ ಕುರ್ ಆನ್ ಪಾರಾಯಣಗೈಯ್ಯಲು ಹಾಗೂ ಉಸ್ತಾದರ ನೈಜ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಸಭೆಯು ತೀರ್ಮಾನಿಸಲಾಯಿತು.

ಸಯ್ಯಿದ್ ನಾಸಿರ್ ತಂಙಲ್ ಉದ್ಯಾವರ, ಸಯ್ಯಿದ್ ಅಶ್ರಫ್ ತಂಙಲ್ ಕುಂಬೋಲ್ ಪ್ರಾರ್ಥನೆಗೆ ನೇತೃತ್ವ ನೀಡಿದರು.

ವೇದಿಕೆಯಲ್ಲಿ ತೋಟಾಲ್ ಸಅದಿ, ಅಲವಿ ಸಖಾಫಿ ಸಕಲೇಶಪುರ, ಡಿ.ಎಚ್. ಸಅದಿ, ವಿ.ಎ. ಸಖಾಫಿ, ಡಿ.ಎಸ್. ಮದನಿ, ಕಲ್ಲಡ್ಕ ಮದನಿ, ಸಿರಾಜುದ್ದೀನ್ ಮದನಿ, ಹಮೀದ್ ಮದನಿ ಪಡಿಕ್ಕಲ್, ಶರೀಫ್ ಮದನಿ ಕಳ್ನಾಡ್ , ಕಾಸಿಂ ನಈಮಿ ಕಿನ್ನಿಂಗಾರ್, ಪಲ್ಲಂಗೋಡು ಇಬ್ರಾಹಿಂ ನಈಮಿ,ಮೊದಲಾದ ಶಿಷ್ಯಂದಿರು ಹಾಗೂ ಉಸ್ತಾದರ ಅಭಿಮಾನಿಗಳು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

✍️ವರದಿ. ಡಿ.ಎ.ಅಬ್ಬಾಸ್. ಪಡಿಕ್ಕಲ್.

error: Content is protected !! Not allowed copy content from janadhvani.com