janadhvani

Kannada Online News Paper

ಮಾಧ್ಯಮ ಸ್ವಾತಂತ್ರ್ಯದ ದಮನ ಖಂಡನೀಯ : ಎಸ್ಸೆಸ್ಸೆಫ್

ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದೇಶದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮ ಸ್ವಾತಂತ್ರ್ಯವನ್ನು ಧಮನಿಸಲು ಹೊರಟಿರುವ ಫ್ಯಾಸಿಸ್ಟ್ ನಿಲುವು ಖಂಡನೀಯವಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ತಿಳಿಸಿದರು.

ಮಾಧ್ಯಮಗಳು ತಮ್ಮ ಕೈಗೊಂಬೆಗಳಾಗಿ ಇರಬೇಕು, ತಮ್ಮ ಅಣತಿಯಂತೆ ವರ್ತಿಸಬೇಕು ಎನ್ನುವ ಆಳುವವರ ಮನೋಭಾವ ದೇಶಕ್ಕೂ ರಾಜ್ಯಕ್ಕೂ ಮಾರಕವಾಗಿದೆ. ಒಂದು ಮಾಧ್ಯಮದ ಮೇಲೆ ಅನ್ಯಾಯವಾಗಿ ದೌರ್ಜನ್ಯ ನಡೆಯುವಾಗ ಇತರ ಮಾಧ್ಯಮಗಳು ಮೌನಕ್ಕೆ ಶರಣಾಗಿರುವುದು ಕೂಡ ಅವರ ಭ್ರಷ್ಟತೆಗೆ ಸ್ಪಷ್ಟ ಸಾಕ್ಷಿಯಾಗಿದೆ. ಇದರ ವಿರುದ್ಧ ಪ್ರಜ್ಞಾವಂತ ಜನತೆ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರು ಅಭಿಪ್ರಾಯ ಪಟ್ಟರು.

error: Content is protected !! Not allowed copy content from janadhvani.com