ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯಿಂದ ಸೆಪ್ಟೆಂಬರ್ 28ರಂದು ರಾತ್ರಿ ಝೋಮ್ ಮೂಲಕ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮ ನಡೆಸಲಾಯಿತು.
ಸಯ್ಯಿದ್ ಹಬೀಬುಲ್ಲಾಹ್ ಪೂಕೋಯ ಮದನಿ ಪೆರುವಾಯಿ ತಂಙಳ್ ರವರ ದುಆದೊಂದಿಗೆ ಆರಂಭಗೊಂಡ ಕಾರ್ಯಕ್ರದಮ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ಉಸ್ತಾದರು ವಹಿಸಿದರು.
ಕೆಸಿಎಫ್ ಸಂಘಟನೆಯ ಬಗ್ಗೆ ಬೇಕಲ್ ಉಸ್ತಾದರು ಹೆಮ್ಮೆ ಪಡುತ್ತಿದ್ದರು. ಹಲವಾರು ಸಭೆ ಸಮಾರಂಭಗಳಲ್ಲಿ ಕೆಸಿಎಫ್ ಕಾರ್ಯಕರ್ತರ ಸಕ್ರೀಯತೆ ಹಾಗೂ ಶಿಸ್ತಿನ ಕಾರ್ಯಾಚರಣೆಯನ್ನು ಹಾಡಿ ಹೊಗಳುತ್ತಿದ್ದರು ಎಂದು ಜಾಮಿಯ ಸಅದಿಯ್ಯಾ ಅರಬಿಯ್ಯಾ ಕಾಸರಗೋಡು ಇದರ ಮುದರ್ರಿಸರಾದ ಹುಸೈನ್ ಸಅದಿ ಕೆ ಸಿ ರೋಡ್ ಉಸ್ತಾದರು ಅನುಸ್ಮರಣಾ ಭಾಷಣದಲ್ಲಿ ಹೇಳಿದರು.
ಸದ್ರಿ ಕಾರ್ಯಕ್ರಮದಲ್ಲಿ “ಪ್ರವಾದಿ ಹಾದಿಯಲ್ಲಿ ಗೆಲುವಿದೆ” ಎಂಬ ಅಭಿಯಾನವನ್ನು ಸಯ್ಯಿದ್ ಹಬೀಬುಲ್ಲಾಹ್ ಪೂಕೋಯ ಮದನಿ ಪೆರುವಾಯಿ ತಂಙಳ್ ರವರು ಘೋಷಣೆ ಮಾಡಿದರು. ಬೇಕಲ್ ಉಸ್ತಾದರ ಖಾದಿಮ್ ಆಗಿ ಸೇವೆ ಸಲ್ಲಿಸಲು ಭಾಗ್ಯ ದೊರೆತ ಇಸಾಕ್ ಬಾಅಹಸನಿ ಉಸ್ತಾದರು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಸ್ತಾದರೊಂದಿಗಿನ ಅವರ ಅನುಭವಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಖಮರುದ್ದೀನ್ ಗೂಡಿನಬಳಿ, ಇಹ್’ಸಾನ್ ಇಲಾಖೆಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ರೈಸ್ಕೋ, ಪ್ರಕಾಶನ ಇಲಾಖೆಯ ಕಾರ್ಯದರ್ಶಿ ನಝೀರ್ ಹಾಜಿ ಕಾಶಿಪಟ್ನ, ರಾಷ್ಟ್ರೀಯ ಸಮಿತಿ ನೇತಾರರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಅಬ್ದುಲ್ ಸಲಾಂ ಎಣ್ಮೂರುರವರು ಕಾರ್ಯಕ್ರಮ ನಿರೂಪಿಸಿದರು. ಸಿದ್ದೀಕ್ ಸಖಾಫಿ ಪೆರುವಾಯಿ ಉಸ್ತಾದರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ ಧನ್ಯವಾದ ಹೇಳಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್