janadhvani

Kannada Online News Paper

ಚಿಕ್ಕಮಗಳೂರು ಸಲಾಂ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಚಿಕ್ಕಮಗಳೂರು ಜಿಲ್ಲೆಯ ಪ್ರತಿಷ್ಠಿತ ಸುನ್ನಿ ಸಂಸ್ಥೆಯಾದ ಜಾಮಿಯಾ ಅರೇಬಿಯಾ ಕಂಜುಲ್ ಇಮಾನ್ (ಸಲಾಂ ಮಸೀದಿ) ಯಲ್ಲಿ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಶಾಹಿದ್ ರಜ್ವಿ ರವರ ನೇತೃತ್ವದಲ್ಲಿ ರಂಜಾನ್ ತಿಂಗಳ ಅಂತ್ಯದಲ್ಲಿ ದಿನಾಂಕ 08/04/2023 ರ ಸೋಮವಾರ ರಾತ್ರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಜ್ವಿ ರವರು ಅಂದು ರಂಜಾನ್ ತಿಂಗಳ 29 ನೆಯ ವಿಶೇಷ ರಾತ್ರಿಯಾಗಿದ್ದು ಪಾಲ್ಗೊಳ್ಳುವ ಸಮುದಾಯದ ಭಕ್ತಾಧಿಗಳಿಗೆ ರಾತ್ರಿಯಿಡೀ ಪ್ರಾರ್ಥನೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಅಂದು ಅತ್ಯುನ್ನತ ಉಲಮಾ ಮತ್ತು ಧರ್ಮಗುರುಗಳು ಆಗಮಿಸುತ್ತಿದ್ದಾರೆ ಹಾಗು ಪ್ರಾರ್ಥನಾ ಸಮಯದಲ್ಲಿ ಮಳೆಗಾಗಿ ವಿಶೇಶ ದುಆ ಮಾಡಲಾಗುವುದು ನಂತರ ಉಪವಾಸ ಕೈಗೊಳ್ಳುವುದಕ್ಕಾಗಿ ಬೆಳಗಿನ ಜಾವ 3:00 ಗಂಟೆಗೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದರೊಂದಿಗೆ ಈ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಧಾರ್ಮಿಕ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಮಸೀದಿಗಳ ಇಮಾಮರು,ಪದಾಧಿಕಾರಿಗಳು,
ಪಾಲ್ಗೊಳ್ಳಲಿದ್ದಾರೆ ಎಂದು ಫೈರೋಜ್ ಅಹಮದ್ ರಜ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com