janadhvani

Kannada Online News Paper

ಜಾಮಿಯಾ ಕಂಝುಲ್ ಇಮಾನ್ ಚಿಕ್ಕಮಗಳೂರು: ಗಣರಾಜ್ಯೋತ್ಸವ ಆಚರಣೆ

ಚಿಕ್ಕಮಗಳೂರು: ನಗರದ ಪ್ರತಿಷ್ಠಿತ ಸುನ್ನಿ ಸಂಸ್ಥೆ ಜಾಮಿಯಾ ಕಂಝುಲ್ ಇಮಾನ್ ನಲ್ಲಿ 72 ನೇ ಗಣರಾಜ್ಯೋತ್ಸವ ಆಚರಿಸಲಾಯಿತು ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ದ್ವಜರೋಹಣವನ್ನು ನೆರವೇರಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಹೆಚ್.ಹೆಚ್. ದೇವರಾಜ್ ರವರು ಮುಖ್ಯ ಭಾಷಣಕರರಾಗಿ ಮಾತನಾಡಿ ಈ ದಿನದ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ದೆಹಲಿಯಲ್ಲಿ ನಡೆಯುತ್ತಿರುವ ಸುಮಾರು ಒಂದು ಕೋಟಿ ಇಪ್ಪತೈದು ಲಕ್ಷ ರೈತರು ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಅವಶ್ಯಕತೆ ಮುಖ್ಯವಾಗಿದೆ ಹಾಗೂ ದೇಶದ ರೈತರಿಗೆ ನಾವು ನೈತಿಕ ಶಕ್ತಿಯನ್ನು ತುಂಬುವ ಕೆಲಸ ಮಾಡುವ ಮೂಲಕ ರೈತರ ಚಳುವಳಿಗೆ ಯಶಸ್ವಿ ಪ್ರದರ್ಶನ ನೀಡಬೇಕಾಗಿ ಕರೆ ನೀಡಿದರು ಮತ್ತು ಜಿಲ್ಲಾ ಟಿಪ್ಪು ಸುಲ್ತಾನ್ ಮಹಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಜಂಶಿದ್ ಖಾನ್ ರವರು ಡಾಕ್ಟರ್ ಬಿ. ಆರ್. ಅಂಬೇಡ್ಕರ್ ರವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ವಿವರಿಸಿದರು.

ಈ ಸಮಾರಂಭದಲ್ಲಿ ಮೌಲಾನ ಅಬ್ದುಲ್ ಘನಿ, ಮೌಲಾನ ಜುಲ್ಫಿಕರ್, ಮೌಲಾನ ಇರ್ಷಾದ್ ರಜಾ, ಚಿಕ್ಕಮಗಳೂರು ಜಿಲ್ಲಾ ಖಾಝಿ ಮುಫ್ತಿ ಅನ್ವರ್ ಹುಸೈನ್, ಸಂಸ್ಥೆಯ ಕೋಶಾಧಿಕಾರಿ ಅಖ್ತರ್ ಹುಸೈನ್, ಆರಿಫ್ ಅಲಿ ಖಾನ್ ರಜ್ವಿ ವಾಸೀಂ ಅಹಮದ್ ಅಂಜುಮನ್ ಏ ಇಸ್ಲಾಮಿ ಮುಖ್ಯಸ್ಥ ತನ್ವೀರ್ ಅಹಮದ್ ಹಾಗು ಇನ್ನಿತರ ವಿವಿಧ ಸುನ್ನಿ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು
ಎಂದು ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com