janadhvani

Kannada Online News Paper

“ತನಾಫುಸ್ 2020” ರಾಜ್ಯ ಮಟ್ಟದ ಸ್ಪರ್ಧಾ ಕಾರ್ಯಕ್ರಮಕ್ಕೆ ಪ್ರೌಢ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಯೂನಿಟ್ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ದರ್ಸ್ ಹಾಗೂ ದಅ್‌ವಾ ವಿದ್ಯಾರ್ಥಿಗಳಾದ ಮುತ‌ಅಲ್ಲಿಮರಿಗೆ ವಿಶೇಷವಾಗಿ ಆನ್ಲೈನ್ ನಲ್ಲಿ ನಡೆಸುತ್ತಿರುವ ಸ್ಪರ್ಧಾ ಕಾರ್ಯಕ್ರಮಗಳಿಗೆ ಆಗಸ್ಟ್ 28 ರಂದು ಪ್ರೌಢ ಚಾಲನೆ ನೀಡಲಾಯಿತು. ಝೂಮ್ ಅಪ್ಲಿಕೇಶನ್‌ನಲ್ಲಿ ನಡೆಯುವ ಕಾರ್ಯಕ್ರಮಗಳು ಎಸ್ಸೆಸ್ಸೆಫ್ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ https://t.co/G3D2x6xEJw ನೇರವಾಗಿ ಪ್ರಸಾರವಾಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಸ್ಸಯ್ಯಿದ್ ಉಮರ್ ಅಸ್ಸಖಾಫ್ ಮದನಿ ವಹಿಸಿದರು. ಅಸ್ಸಯ್ಯಿದ್ ಅಲವಿ ಅಲ್ ಬುಖಾರಿ ಕರ್ಕಿ ತಂಙಳ್ ದುಆಃ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷರಾದ ಬಹು|| ಶೌಕತ್ ನ‌ಈಮಿ ಕಾಶ್ಮೀರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಆಗಸ್ಟ್ 28, 29, 30 ದಿನಾಂಕಗಳಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧಾ ಕಾರ್ಯಕ್ರಮದ ಬಗ್ಗೆ ರಾಜ್ಯ ದಅ್‌ವಾ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸೆಸ್ಸೆಫ್ ಕರ್ನಾಟಕ ಇದರ ಮಾಜಿ ಅಧ್ಯಕ್ಷರಾದ ಹಫೀಲ್ ಸ‌ಅದಿ ಕೊಳಕೇರಿ ಹಾಗು ಕೆ.ಸಿ.ಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಡಿ‌ಪಿ ಯೂಸುಫ್ ಸಖಾಫಿ ಬೈತಾರ್ ಸಂದೇಶ ಭಾಷಣವನ್ನು ಮಾಡಿದರು.

ಕರ್ಣಾಟಕ ಮುಸ್ಲಿಂ ಜಮಾ ಅತ್ ನಾಯಕ ಕೆ ಎಚ್ ಇಸ್ಮಾಯಿಲ್ ಸ ಅದಿ ಕಿನ್ಯ ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಅಡ್ವೊಕೇಟ್ ಇಲ್ಯಾಸ್ ನಾವುಂದ, ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ಮೂಡ್ಗೋಪಾಡಿ, ರಾಜ್ಯ ಸಮಿತಿ ಸದಸ್ಯರಾದ ಅಡ್ವೊಕೇಟ್ ಶಾಕಿರ್ ಹಾಜಿ ಪುತ್ತೂರು, ಆರಿಫ್ ಸ‌ಅದಿ ಭಟ್ಕಳ್, ಹಕೀಮ್ ಬೆಂಗಳೂರು ಉಪಸ್ಥಿತರಿದ್ದರು.

ಮುಹಮ್ಮದ್ ಸಫ್ವಾನ್ ಚಿಕ್ಕಮಗಳೂರು ಕಾರ್ಯಕ್ರಮ ನಿರೂಪಿಸಿದರು, ಮುಬಶ್ಶಿರ್ ಅಹ್ಸನಿ ಕೊಂಡಂಗೇರಿ ಸ್ವಾಗತಿಸಿ, ನವಾಝ್ ಭಟ್ಕಳ್ ವಂದಿಸಿದರು.

error: Content is protected !! Not allowed copy content from janadhvani.com