janadhvani

Kannada Online News Paper

ಹಿಮೋಸ್ ಗ್ರೂಪಿನ ನಾಲ್ಕನೇ ವಾರ್ಷಿಕೋತ್ಸವ ಆಚರಣೆ

ಮೂರ್ನಾಡು ಹಿದಾಯತ್ತುಲ್ ಇಸ್ಲಾಂ ಮದರಸದ ಪೂರ್ವ ವಿದ್ಯಾರ್ಥಿ ಸಂಘಟನೆಯಾದ ಹಿಮೋಸ್ ಗ್ರೂಪಿನ ವತಿಯಿಂದ ಗ್ರೂಪಿನ ನಾಲ್ಕನೇ ವಾರ್ಷಿಕೋತ್ಸವ ಮತ್ತು ದೇಶದ 74 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ದಿನಾಂಕ 27,ಮತ್ತು 28, ರಂದು ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತ್ತು.

ಶರಫು, ಪಿ.ಎ ರವರ ಖುರ್ಆನ್ ಪಾರಾಯಣದೊಂದಿಗೆ ಆರಂಭಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೂಪಿನ ಚೀಫ್ ಅಡ್ಮಿನ್, ಇಸ್ಮಾಯಿಲ್ ಜೆ.ಹೆಚ್ ರವರು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಬ್ದುಲ್ ರೌಫ್ ಬೆಂಗಳೂರು ನೆರವೇರಿಸಿದರು.

ನಾವು ಸ್ವತಂತ್ರರು ಆದರೂ ಅತಂತ್ರರು ಎಂಬ ವಿಷಯದಲ್ಲಿ ಮುನೀರ್ ಫೈಜಿ ಮತ್ತು ಸ್ವಾತಂತ್ರ್ಯ ಹೋರಾಟದ ನಿಜ ರೂಪ ಎಂಬ ವಿಷಯದಲ್ಲಿ ಮುನೀರ್ ಮಾಸ್ಟರ್ ವಿಷಯ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೂರ್ನಾಡು ಮುಸ್ಲಿಂ ಜಮಾಅತ್ತ್ ಅಧ್ಯಕ್ಷ ಮಜೀದ್ ಕೆ.ಎ, ಜಿಲ್ಲೆಯ ಯುವ ಜನತಾದಳದ ಕಾರ್ಯದರ್ಶಿ ಜಾಸಿರ್,ಗ್ರಾಮಪಂಚಾಯಿತಿ ಸದಸ್ಯ ಸಾದಿಕ್,ಶೇಕ್ ಅಹ್ಮದ್ (ಕೊಡಗು ಟೈಲರ್ಸ್ ಯೂನಿಯನ್ ಅಧ್ಯಕ್ಷರು,) ಮಾಜಿ ಚೀಫ್ ಅಡ್ಮಿನ್ ಇಸ್ಹಾಕ್ ಹಾಜಿ ಸಭೆಯನ್ನು ಕುರಿತು ಮಾತನಾಡಿದರು.

ಹಿಮೋಸ್ ಗ್ರೂಪಿನ ಸದಸ್ಯರ ಮಕ್ಕಳಿಗಾಗಿ ಆಯೋಜಿಸಿದ ಚಿನ್ನರಲೋಕ ಎಂಬ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾಸಿರ್ ಪಿ.ಎಸ್ ಮತ್ತು ಸರ್ವ ಸದಸ್ಯರಿಗಾಗಿ ನಡೆಸಿದ ರಸಪ್ರಶ್ನೆ ಕಾರ್ಯಕ್ರಮವನ್ನು ಮುನೀರ್ ಮಾಸ್ಟರ್ ರವರು ಆಕರ್ಷಣೀಯವಾಗಿ ನಡೆಸಿಕೊಟ್ಟರು. ಹಿಮೋಸ್ ಗ್ರೂಪಿನ ಮುಖ್ಯಸ್ಥರಾದ ಹುಸೈನ್ ಪಿ.ಎ, ಅಬ್ದುರಹಿಮ್ (ಕಬಡಕೇರಿ),ಮಾಮಿ (ಕಣ್ಣೂರು), ಹನೀಫ್ (ಕುಶಾಲನಗರ), ಮೊದಲಾದವರು ಮಾತನಾಡಿದರು.

ಸಭೆಯ ಮೊದಲಿಗೆ ಇರ್ಫಾನ್(ಬೆಂಗಳೂರು) ಸ್ವಾಗತಿಸಿ ಕೊನೆಯಲ್ಲಿ ಸತ್ತಾರ್ ಪಿ.ಐ. ವಂದಿಸಿದರು. ಕಾರ್ಯಕ್ರಮವನ್ನು ನಝೀರ್ ಕೆ.ಹೆಚ್ ನಿರೂಪಿಸಿದರು.

ವರದಿ KHN

error: Content is protected !! Not allowed copy content from janadhvani.com