janadhvani

Kannada Online News Paper

SჄS ಕೆಸಿರೋಡ್ ಸೆಂಟರ್ ದಅವ ಸಮಿತಿಯಿಂದ ಅಲ್ ಉಸ್ರತುತ್ತಯ್ಯಿಬ ಮಾಹಿತಿ ಸಭೆ

SჄS ಕೆಸಿರೋಡ್ ಸೆಂಟರ್ ದಅವ ಸಮಿತಿ ವತಿಯಿಂದ ಅಲ್ ಉಸ್ರತುತ್ತಯ್ಯಿಬ ಕಾರ್ಯಕ್ರಮದ ಮಾಹಿತಿ ಸಭೆಯು ದಿನಾಂಕ 25/8/2020 ಮಂಗಳವಾರ ರಾತ್ರಿ 8:30ಕ್ಕೆ
ನಡೆಯಿತು.

SჄS ದಕ್ಷಿಣ ಕನ್ನಡ ಜಿಲ್ಲೆಯ
ವತಿಯಿಂದ ಬ್ರಾಂಚ್ ವ್ಯಾಪ್ತಿಯ ಮನೆಗಳಲ್ಲಿ ತಿಂಗಳಿಗೊಮ್ಮೆ ನಡೆಸುವ ಅಲ್ ಉಸ್ರತುತ್ತಯ್ಯಿಬ
ಸಂತುಷ್ಟ ಕುಟುಂಬ ಎಂಬ ಕಾರ್ಯಕ್ರಮದ ಅನುಷ್ಠಾನದ ಕುರಿತ ಸಭೆಯು kcnagara sys,ssf ಕಚೇರಿಯಲ್ಲಿ ಜರಗಿತ್ತು.

ತಿಳಿದುಕೊಳ್ಳಲೇಬೇಕಾದ ನಿರ್ದಿಷ್ಟ ವಿಷಯಗಳ ಮಾಹಿತಿಯನ್ನೊಳಗೊಂಡ ಅಲ್ ಉಸ್ರತುತ್ತಯ್ಯಿಬ
ಪ್ರತಿಯೊಂದು ಮನೆ ಮಂದಿ ನಿಗದಿತ ಸಮಯದಲ್ಲಿ ಸೇರಿಕೊಂಡು ನಡೆಸಬೇಕಾದ ಕಾರ್ಯಕ್ರಮ ಇದಾಗಿದೆ.ಇದರೊಂದಿಗೆ ಪ್ರತಿ ಮನೆಗಳ‌ ಮೂಲಕ ಸುನ್ನತ್ ಜಮಾಅತ್ ನ ಆದರ್ಶಗಳನ್ನು ಪ್ರಚಾರಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ

ಕಾರ್ಯಕ್ರಮದಲ್ಲಿ SჄS ಸೆಂಟರ್ ಉಪಾಧ್ಯಕ್ಷ ಹಂಝ ಅಜ್ಜಿನಡ್ಕ,ಜನರಲ್ ಸೆಕ್ರೆಟರಿ KM ಫಾರೂಕ್,ಇಸಾಬ ಕಾರ್ಯದರ್ಶಿ BH ಇಸ್ಮಾಯಿಲ್, ದಅವಾ ಸೆಕ್ರೆಟರಿ ಮುಸ್ತಫಾ ಝುಹರಿ , ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ತಲಪಾಡಿ event/management ಸೆಕ್ರೆಟರಿ ಇಕ್ಬಾಲ್ Kcnagar ಹಾಗೂ ಸೆಂಟರ್ನ ಪ್ರತೀ ಬ್ರಾಂಚ್ ಉಸ್ತುವಾರಿಗಳು ಮತ್ತು ದ ಅವಾ ಕಾರ್ಯದರ್ಶಿಗಳು ಭಾಗವಹಿಸಿದರು.

error: Content is protected !! Not allowed copy content from janadhvani.com