janadhvani

Kannada Online News Paper

ಯುಜಿಸಿ ಆದೇಶದಂತೆಯೇ ಪದವಿ ಪರೀಕ್ಷೆ ನಡೆಯಲಿದೆ- ಸುಪ್ರೀಂ ಕೋರ್ಟ್

ನವದೆಹಲಿ, ಆ.28: ಪರೀಕ್ಷೆಯಿಲ್ಲದೇ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇಂದು ಸೆಪ್ಟೆಂಬರ್ 30ನೇ ತಾರೀಕಿನೊಳಗೆ ನಡೆಸಬೇಕಾದ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾಡಿತು. ಈಗ ಇದರ ಕುರಿತು ವಿಚಾರಣೆ ಮಾಡಿ ತೀರ್ಪು ನೀಡಿರುವ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಹೀಗೆ ತಿಳಿಸಿದೆ.

ಯುಜಿಸಿ ಆದೇಶದಂತೆಯೇ ಅಂತಿಮ ವರ್ಷದ ವಿದ್ಯಾರ್ಥಿಗಳ ಪದವಿ ಪರೀಕ್ಷೆ ನಡೆಯಲಿದೆ. ಯಾವುದೇ ರಾಜ್ಯಕ್ಕೂ ಯುಜಿಸಿ ಆದೇಶವನ್ನು ಮೀರಿ ಅಂತಿಮ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಿ ಉತ್ತೀರ್ಣಗೊಳಿಸುವ ಅಧಿಕಾರವಿಲ್ಲ. ಪದವಿ ಪರೀಕ್ಷೆ ಮುಂದೂಡುವ ವಿಚಾರದಲ್ಲಿ ಸಂಬಂಧಪಟ್ಟ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ(ಎಸ್‌ಡಿಎಂಎ) ನಿರ್ಧಾರವೇ ಮೇಲುಗೈ ಸಾಧಿಸುತ್ತದೆ ಎಂದು ಕೋರ್ಟ್ ಹೇಳಿದೆ.

ಇನ್ನು, ಪದವಿ ಪರೀಕ್ಷೆಗಳನ್ನು ನಡೆಸಲು ಸೆಪ್ಟೆಂಬರ್ 30ರ ಗಡುವೇ ಅಂತಿಮವಲ್ಲ. ಬದಲಿಗೆ ಸೆಪ್ಟೆಂಬರ್ 30ರ ಗಡುವನ್ನು ವಿಸ್ತರಿಸಲು ರಾಜ್ಯಗಳು ಯುಜಿಸಿಯನ್ನು ಸಂಪರ್ಕಿಸಬಹುದು ಎಂದು ತೀರ್ಪು ನೀಡಿದೆ

error: Content is protected !! Not allowed copy content from janadhvani.com