janadhvani

Kannada Online News Paper

ಅನ್‌ಲಾಕ್‌-4: ಸಭೆ, ಸಮಾರಂಭಗಳಲ್ಲಿ 100 ಮಂದಿಗೆ ಅವಕಾಶ

ಹೊಸದಿಲ್ಲಿ: ಕೇಂದ್ರ ಸರಕಾರ ಶನಿವಾರ ಅನ್‌ಲಾಕ್‌-4 ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಸೆಪ್ಟೆಂಬರ್‌ 1 ರಿಂದ 30ರವರೆಗೆ ಇದು ಅನ್ವಯವಾಗಲಿದೆ.ಕಂಟೈನ್‌ಮೆಂಟ್‌ ಝೋನ್‌ನ ಹೊರಗೆ ಮತ್ತಷ್ಟು ಚಟುವಟಿಕೆಗಳಿಗೆ ಕೇಂದ್ರ ಸರಕಾರ ಅನ್‌ಲಾಕ್‌-4ರ ಅಡಿಯಲ್ಲಿ ಅವಕಾಶ ನೀಡಿದೆ. ಪ್ರಮುಖವಾಗಿ ಹಂತ ಹಂತವಾಗಿ ಮೆಟ್ರೋ ರೈಲು ಸೇವೆ ಆರಂಭಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ.

ಅನ್‌ಲಾಕ್ – 04 ಮಾರ್ಗಸೂಚಿ: ಏನುಂಟು? ಏನಿಲ್ಲ?

  • ಶಾಲೆ ಕಾಲೇಜುಗಳನ್ನು ತೆರೆಯಲು ಮಾರ್ಗಸೂಚಿಯಲ್ಲಿ ಅವಕಾಶ.
  • ಶೇಕಡಾ 50% ಭೋಧಕ ಮತ್ತು ಭೋದಕೇತರ ಸಿಬ್ಬಂದಿಗಳನ್ನು ಬಳಸಿಕೊಂಡು ತರಗತಿಗಳನ್ನು ನಡೆಸಬಹುದು.
  • 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗೆ ಭೇಟಿ ನೀಡಬಹುದು.
  • ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗೆ ಭೇಟಿ ನೀಡಬಹುದು.
  • ಕಂಟೈನ್ಮೆಂಟ್ ಝೋನ್ ಹೊರೆತಾದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
  • ಕೌಶಲ್ಯ ಅಥಾವ ಉದ್ಯೋಗ ತರಬೇತಿಗಳಿಗೆ ಅನುಮತಿ.
  • 1 ರಿಂದ 9ರ ವರೆಗಿನ ಶಾಲೆಗಳಿಗೆ ಸೆಪ್ಟೆಂಬರ್ 30 ವರೆಗೂ ನಿರ್ಬಂಧ.
  • ಆನ್‌ಲೈನ್ ತರಗತಿಗಳನ್ನು ಮುಂದುವರಿಸಬಹುದು.
  • ಸಂಶೋಧನೆ ( ಪಿಎಚ್ ಡಿ ) ತಾಂತ್ರಿಕ ಮತ್ತು ವೃತ್ತಿಪರ ಸ್ನಾತಕೋತ್ತರ ಕೋರ್ಸ್ ಗಳು ನಡೆಸಲು ಒಪ್ಪಿಗೆ.
  • ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ.
  • ಸೆಪ್ಟೆಂಬರ್ 07 ರಿಂದ ಮೆಟ್ರೋ ಸಂಚಾರ ಆರಂಭ.
  • ಅಂತರರಾಜ್ಯ ಮತ್ತು ರಾಜ್ಯದೊಳಿಗೆ ಸಂಚಾರಿಸಲು ಮುಕ್ತ ಅವಕಾಶ.
  • ಇನ್ನು ಮುಂದೆ ಯಾವುದೇ ಇ ಪಾಸ್ ಗಳ ಅವಶ್ಯಕತೆ ಇಲ್ಲ

ಏನೇನು ಇರುವುದಿಲ್ಲ?

  • ಸಿನಿಮಾ ಹಾಲ್, ಈಜುಕೊಳಗಳಿಗೆ ಅವಕಾಶ ಇಲ್ಲ.
  • ಮನೋರಂಜನಾ ಪಾರ್ಕ್ ಗಳಿಗೆ ಅವಕಾಶ ಇಲ್ಲ.
  • ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ ಇಲ್ಲ,
  • ಕೇವಲ ಒಂದೇ ಭಾರತ್ ಮಿಷನ್ ಅಡಿಯಲ್ಲಿ ಮಾತ್ರ ಅವಕಾಶ
  • ಸೆಪ್ಟೆಂಬರ್ 30 ವರೆಗೂ ಕಂಟೈನ್ಮೆಂಟ್ ಝೋನ್ ಗಳಲ್ಲಿ ಲಾಕ್‌ಡೌನ್ ವಿಸ್ತರಣೆ ಮೂಲಭೂತ ಅವಶ್ಯಕತೆಗಳಿಗೆ ಮಾತ್ರ ಅವಕಾಶ.
  • ಕಂಟೈನ್ಮೆಂಟ್ ಝೋನ್ ಹೊರೆತಾದ ಪ್ರದೇಶದಲ್ಲಿ ರಾಜ್ಯಸರ್ಕಾರ ಲಾಕ್‌ಡೌನ್ ಮಾಡುವಂತಿಲ್ಲ.
  • ಒಂದು ವೇಳೆ ಮಾಡಬೇಕಾದರೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಮಾಡಬೇಕು.

error: Content is protected !! Not allowed copy content from janadhvani.com