janadhvani

Kannada Online News Paper

ಸುನ್ನತ್ ಕೆರೆ ಮತ್ತು ಗುರುವಾಯನಕೆರೆ ಏರಿಯಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ, ಸುನ್ನತ್ ಕೆರೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುನ್ನತ್ ಕೆರೆ ಏರಿಯಾ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಸುನ್ನತ್ ಕೆರೆ ಎಸ್ ಡಿ ಪಿ ಐ ಬಸ್ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಅಧ್ಯಕ್ಷ ಮುಸ್ತಫಾ ಜಿ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಧ್ವಜಾರೋಹಣಗೈದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಡ್ವಕೇಟ್ ಅಥಾವುಲ್ಲ ಪುಂಜಾಲಕಟ್ಟೆ ಸಂದೇಶ ಭಾಷಣ ನೀಡಿದರು.

ಈ ಸಂದರ್ಭದಲ್ಲಿ ಪಿ ಎಫ್ ಐ ವೇಣೂರ್ ಡಿವಿಶನ್ ಅಧ್ಯಕ್ಷರು ದಾವುದ್ ಜಿ.ಕೆ,ಪಿ ಎಫ್ ಐ ಸುನ್ನತ್ ಕೆರೆ ಏರಿಯಾ ಅಧ್ಯಕ್ಷರು ಶಬೀರ್ ಸುನ್ನತ್ ಕೆರೆ, ಜುಮ್ಮಾ ಮಸೀದಿ ಸುನ್ನತ್ ಕೆರೆ ಇದರ ಅಧ್ಯಕ್ಷರು ಅಬ್ದುಲ್ ರಹಿಮಾನ್, ವಿ.ಆರ್.ಅಬ್ದುಲ್ ರಹಿಮಾನ್, ಅಶ್ರಫ್ ಸುನ್ನತ್ ಕೆರೆ,ಹಕೀಂ ಸುನ್ನತ್ ಕೆರೆ, ಪಿ ಎಫ್ ಐ ಸುನ್ನತ್ ಕೆರೆ ಏರಿಯಾ ಕಾರ್ಯದರ್ಶಿ
ಶುಹೈಲ್ ಎಸ್ ಕೆ ಹಾಗೂ ಊರಿನ ಹಿರಿಯರು ನಾಗರಿಕರು ಮತ್ತು ಹಿತೈಶಿಗಳು ಭಾಗವಹಿಸಿದರು.

ಕಾರ್ಯಕ್ರಮವನ್ನು ನಿಸಾರ್ ಎಸ್.ಕೆ. ವಂದಿಸಿ ನಿರೂಪಿಸಿದರು.

ಗುರುವಾಯನಕೆರೆ ಏರಿಯಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ, ಗುರುವಾಯನಕೆರೆ :ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಗುರುವಾಯನಕೆರೆ ಏರಿಯಾ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಮದ್ದಡ್ಕದ ಬಂಡಿಮಟ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೊನ್ಸೊ ಫ್ರಾಂಕೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಧ್ವಜಾರೋಹಣಗೈದರು.ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಡ್ವಕೇಟ್
ಅಥಾವುಲ್ಲ ಪುಂಜಾಲಕಟ್ಟೆ ಸಂದೇಶ ಭಾಷಣ ನೀಡಿದರು.

ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ವೇಣೂರು ಡಿವಶನ್ ಅಧ್ಯಕ್ಷ
ದಾವುದ್ ಜಿ ಕೆ, ಪಿ ಎಫ್ ಐ ಗುರುವಾಯನಕೆರೆ ಏರಿಯಾ ಅಧ್ಯಕ್ಷ ಸ್ವಾಲಿ ಮದ್ದಡ್ಕ,
ರಿಯಾಝ್ ಮದ್ದಡ್ಕ (ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಕುವೆಟ್ಟು) ,ಎಸ್ ಎಸ್ ಎಫ್ ಮದ್ದಡ್ಕ ಘಟಕ ಇದರ ಅಧ್ಯಕ್ಷರು ರವೂಫ್ ಮದ್ದಡ್ಕ,
ಹೆಚ್ ಎಮ್ ಹಸನಬ್ಬ( ಮಾಜಿ ಉಪಾಧ್ಯಕ್ಷರು NHJM ಮದ್ದಡ್ಕ),
ಸಿರಾಜ್ ಚಿಲಿಂಬಿ (ಜೊತೆ ಕಾರ್ಯದರ್ಶಿ NHJM ಮದ್ದಡ್ಕ),
ಉಮರಬ್ಬ ಯು ಆರ್ (ಕೋಶಾಧಿಕಾರಿ NHJM ಮದ್ದಡ್ಕ)
ಹಾರಿಸ್ ಜಿ ಕೆ ಹಾಗೂ ಊರಿನ ಹಿರಿಯರು,ನಾಗರಿಕರು ಮತ್ತು ಹಿತೈಶಿಗಳು ಭಾಗವಹಿಸಿದರು.

ಕಾರ್ಯಕ್ರಮವನ್ನು ಅಸ್ಲಾಮ್ ವಂದಿಸಿ ನಿರೂಪಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿಗಳನ್ನು ಹಂಚಲಾಯಿತು.
________________________________
ಕ್ರೀಡಾಸಮ್ಮಿಲನ:
ಧ್ವಜಾರೋಹಣ ಕಾರ್ಯಕ್ರಮ ಮಾಡುವುದರೊಂದಿಗೆ ಸಹೋದರರ ಕ್ರೀಡಾ ಸಮ್ಮಿಲನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವು ಯೋಗಾಸನ, ವ್ಯಾಯಾಮ ಹಾಗೂ ಹಲವಾರು ಕ್ರೀಡೆಗಳನ್ನು ಆಡುವ ಮೂಲಕ ಯಶಸ್ವಿಯಾಗಿ ಮೂಡಿತು.
ಕ್ರೀಡಕೂಟವನ್ನು
ಇರ್ಫಾನ್ ಕಾವಳಕಟ್ಟೆ ನೆರವೇರಿಸಿ ಕೊಟ್ಟರು.

error: Content is protected !! Not allowed copy content from janadhvani.com