ನೆಕ್ಕಿಲು: ಭವ್ಯ ಭಾರತದ 74 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಧ್ವಜಾರೋಹಣ ದೊಂದಿಗೆ ಚಾಲನೆ ನೀಡಿ, ಬಳಿಕ ನೆಕ್ಕಿಲು – ಕುಪ್ಪೆಟ್ಟಿ ಮುಖ್ಯ ರಸ್ತೆಯುದ್ದಕ್ಕೂ ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಹಾಗೂ ಸುನ್ನೀ ಯುವಜನ ಸಂಘ (SYS) ನ ನೆಕ್ಕಿಲು ಶಾಖಾ ಕಾರ್ಯಕರ್ತರು, ಎಲ್ಲರಿಗೂ ಮಾದರಿಯಾಗುವ ರೂಪದಲ್ಲಿ ಆಚರಿಸಿದರು.
ರಸ್ತೆಗಳ ಇಕ್ಕೆಲಗಳಲ್ಲಿ ತುಂಬಿದ್ದ ಹುಲ್ಲು ಗಿಡಗಳನ್ನು ತೆಗೆಯುವುದರೊಂದಿಗೆ, ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆಯನ್ನು ಮಾಡಲಾಯಿತು. ಈ ಸ್ವಚ್ಚತಾ ಕಾರ್ಯಕ್ರಮವನ್ನು ಸರ್ವ ಧರ್ಮೀಯರು ಕೊಂಡಾಡಿ, ಆಶಿರ್ವದಿಸಿದರು. ಬೆಳಿಗ್ಗೆಯಿಂದ ಆರಂಭವಾದ ಸ್ವಚ್ಚತಾ ಕಾರ್ಯಕ್ರಮವನ್ನು ಸಂಜೆಯವರೆಗೂ ನಡೆಸಲಾಯಿತು.
SYS ಬ್ರಾಂಚ್ ಅಧ್ಯಕ್ಷರಾದ ಆದಂ ಮಾವಿನಗುಳಿ, ನಾಯಕರಾದ ಕೆ.ಪಿ ರಮ್ಲಾನ್ ಹಾಜಿ, ಬಶೀರ್, ಕಾಸಿಂ, ಅಬೂಬಕರ್, ಬಶೀರ್ ಮುಸ್ಲಿಯಾರ್, ನಝೀರ್, ಇಸಾಬ ಕಾರ್ಯದರ್ಶಿ NM ಶರೀಫ್ ಸಖಾಫಿ ಮತ್ತು SSF ಶಾಖಾಧ್ಯಕ್ಷ ಅಬ್ದುಲ್ ಮಜೀದ್, ನಾಯಕರಾದ ಅಶ್ರಫ್ ಮದನಿ,ಹಂಝ ಮದನಿ, ಹಾರಿಸ್, ನೌಶಾದ್,ಬಾತಿಶ್ ಮುಸ್ಲಿಯಾರ್, ಸಫ್ವಾನ್ ಮುಸ್ಲಿಯಾರ್, ಇರ್ಫಾನ್,ಶಿಹಾಬ್ ಮೊದಲಾದವರು ಕಾರ್ಯಕರ್ತರು ಸಹಕರಿಸಿದರು.
ವರದಿ: ಯನ್ನೆಮ್ಮೆಸ್ ಸಖಾಫಿ















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್