janadhvani

Kannada Online News Paper

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮತ್ತು ಕ್ರೀಡಾ ಸಮ್ಮಿಲನ ಕಾರ್ಯಕ್ರಮ

ಬೆಳ್ತಂಗಡಿ-ಬಳ್ಳಮಂಜ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಳ್ಳಮಂಜ ಏರಿಯಾ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಕಲ್ಲೇರಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಪಿ ಎಫ್ ಐ ಬಳ್ಳಮಂಜ ಏರಿಯಾ ಅಧ್ಯಕ್ಷರು ವಝೀರ್ ಬಂಗೇರಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪಿ ಎಫ್ ಐ ಝೋನಲ್ ಅಧ್ಯಕ್ಷ ಇಕ್ಬಾಲ್ ಧ್ವಜಾರೋಹಣಗೈದರು. ಫಿ ಎಫ್ ಐ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯ ಟಿ.ಎಸ್ ಹನೀಫ್ “ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂರ ಕೊಡುಗೆಗಳು ಅಪಾರವಾದದ್ದು, ಮತ್ತು ಹೋರಾಟದ ಸಂದರ್ಭದಲ್ಲಿ ಜಾತಿ ಮತ ಧರ್ಮಗಳನ್ನು ನೋಡದೆ ಹಲವಾರು ಮಂದಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ್ದಾರೆ, ಅವರನ್ನು ಈ ಸಂದರ್ಭದಲ್ಲಿ ನೆನಸುವುದು ಅಗತ್ಯವಾಗಿದೆ.” ಎಂದು ಸಂದೇಶ ಭಾಷಣ ನೀಡಿದರು.

ಈ ಸಂದರ್ಭದಲ್ಲಿ ಪಿ ಎಫ್ ಐ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯ ನಿಸಾರ್ ಕುದ್ರಡ್ಕ, ಎಸ್ ಡಿ ಪಿ ಐ ಪಾರೆಂಕಿ ಬ್ರಾಂಚ್ ಅಧ್ಯಕ್ಷ ಇಕ್ಬಾಲ್ ಸಾಲ್ಮರ, ಎಸ್ ಡಿ ಪಿ ಐ ಮಚ್ಚಿನ ಬ್ರಾಂಚ್
ಅಧ್ಯಕ್ಷ ಕಾಸಿಂ ಬಳ್ಳಮಂಜ, ಎಸ್ ಡಿ ಪಿ ಐ ಬಾರ್ಯ ಬ್ರಾಂಚ್ ಅಧ್ಯಕ್ಷ ಪೈಝಲ್ ಮುರುಗೋಳಿ ಉಪಸ್ಥಿತರಿದ್ದರು.

ಯಾಸೀನ್ ಬಂಗೇರಕಟ್ಟೆ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರವನ್ನು ನೀಡಲಾಯಿತು.

_________________________________
ಕ್ರೀಡಾಸಮ್ಮಿಲನ:
ಧ್ವಜಾರೋಹಣ ಕಾರ್ಯಕ್ರಮ ಮಾಡುವುದರೊಂದಿಗೆ ಸಹೋದರರ ಕ್ರೀಡಾ ಸಮ್ಮಿಲನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವು ಯೋಗಾಸನ, ವ್ಯಾಯಾಮ ಹಾಗೂ ಹಲವಾರು ಕ್ರೀಡೆಗಳನ್ನು ಆಡುವ ಮೂಲಕ ಯಶಸ್ವಿಯಾಗಿ ಮೂಡಿತು.
ಕ್ರೀಡಕೂಟವನ್ನು ವಝೀರ್ ಬಂಗೇರಕಟ್ಟೆ ಮತ್ತು ನವಾಝ್ ಕುದ್ರಡ್ಕ ನೆರವೇರಿಸಿ ಕೊಟ್ಟರು.

error: Content is protected !! Not allowed copy content from janadhvani.com