ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ನಡೆಸಲು ಎಲ್ಲರೂ ಆನ್ ಲೈನ್ ವೇದಿಕೆಗಳ ಮೊರೆ ಹೋಗುತ್ತಿದ್ದು, ಝೂಮ್, ವಿಬೆಕ್ಸ್ ಮುಂತಾದ ಆಪ್ ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದೀಗ ಗೂಗಲ್‌ನ ವಿಡಿಯೊ ಕಾನ್ಫರೆನ್ಸ್ ವೇದಿಕೆ ‘ಮೀಟ್’ (Meet) ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಜಿಮೇಲ್ ಬಳಸುತ್ತಿರುವವರಿಗೆ ಲಭಿಸಲಿದೆ. ಕಳೆದ ವಾರದಿಂದಲೇ ಐಫೋನ್ ಬಳಕೆದಾರರಿಗೆ ಲಭ್ಯಗೊಳಿಸಲಾತ್ತು.
ಜಿಮೇಲ್ ಜೊತೆಗೆ ಮೀಟ್ ಸಂಯೋಜಿಸುವುದಾಗಿ ಕಳೆದ ತಿಂಗಳು ಗೂಗಲ್ ಪ್ರಕಟಿಸಿತ್ತು. ವಿಡಿಯೊ ಕಾನ್ಫರೆನ್ಸಿಂಗ್ ವೇದಿಕೆಯನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಗೂಗಲ್ ಪ್ರಯತ್ನಿಸುತ್ತಿದೆ. ಜಿ ಸ್ಯೂಟ್ ಬಳಕೆದಾರರಿಗೆ (ಶುಲ್ಕ ಪಾವತಿಸಿ ಬಳಸುವ ಜಿಮೇಲ್) ಮಾತ್ರವೇ ಗೂಗಲ್ ಮೀಟ್ ಬಳಕೆಗೆ ಅವಕಾಶವಿತ್ತು. ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಮನೆಯಿಂದಲೇ ಕಾರ್ಯನಿರ್ವಹಣೆ, ಆನ್‌ಲೈನ್ ತರಗತಿಗಳು, ವಿಡಿಯೊ ಮೀಟಿಂಗ್ ಹೆಚ್ಚಿದ ಪರಿಣಾಮ ಗೂಗಲ್ ತನ್ನ ಎಲ್ಲ ಜಿಮೇಲ್ ಬಳಕೆದಾರರಿಗೆ ಮೀಟ್ ಬಳಸುವ ಅವಕಾಶ ನೀಡಿದೆ.
ಮೀಟ್ ಸಂಯೋಜನೆಯಾಗಿರುವುದು ಮೊದಲಿಗೆ ಜಿ ಸ್ಯೂಟ್ ಗ್ರಾಹಕರ ಆ್ಯಂಡ್ರಾಯ್ಡ್ ಸಾಧನಗಳಲ್ಲಿರುವ ಜಿಮೇಲ್ ಅಪ್ಲಿಕೇಷನ್‌ನಲ್ಲಿ ಕಾಣಸಿಗಲಿದೆ. ಜಿಮೇಲ್‌ನಲ್ಲಿ ‘ಮೇಲ್’ ಮತ್ತು ‘ಮೀಟ್’ ಎರಡು ಆಯ್ಕೆಗಳು ಗೋಚರಿಸಲಿವೆ. ಮೀಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ, ಹೊಸ ಪುಟ ತೆರೆದುಕೊಳ್ಳುತ್ತದೆ; ಅಲ್ಲಿ ಹೊಸ ಮೀಟಿಂಗ್ ಶುರು ಮಾಡುವುದು ಅಥವಾ ನಡೆಯುತ್ತಿರುವ ಮೀಟಿಂಗ್‌ಗೆ ಸೇರಿಕೊಳ್ಳುವುದು ಸಾಧ್ಯವಾಗುತ್ತದೆ.
ಮೀಟ್ ಆಯ್ಕೆ ನಿಮ್ಮ ಜಿಮೇಲ್‌ಗೂ ಸಂಯೋಜನೆಯಾದರೆ ಟ್ಯಾಬ್ ಗೋಚರಿಸುತ್ತದೆ. ಪ್ರಸ್ತುತ ಗೂಗಲ್ ಮೀಟ್ ಆ್ಯಪ್ ಮೂಲಕ ಒಮ್ಮೆಗೆ 250 ಜನ ವಿಡಿಯೊ ಕಾನ್ಫೆರೆನ್ಸ್‌ನಲ್ಲಿ ಭಾಗಿಯಾಗಬಹುದು.
ಕೋವಿಡ್ ಹೆಚ್ಚಳದೊಂದಿಗೆ ಜಗತ್ತಿನಾದ್ಯಂತ ಜನಪ್ರಿಯವಾದ ಅಪ್ಲಿಕೇಷನ್ ಝೂಮ್. ಅದಕ್ಕೆ ಪ್ರತಿಸ್ಪರ್ಧಿಯಾಗಿ ಗೂಗಲ್ ವಿಡಿಯೊ ಕಾನ್ಫರೆನ್ಸ್ ವೇದಿಕೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಪ್ರಯತ್ನದಲ್ಲಿದೆ. ಗೂಗಲ್‌ನ ಮತ್ತೊಂದು ಆ್ಯಪ್ ಡುಯೊದಲ್ಲಿ ಈಗ 32 ಜನರು ಭಾಗಿಯಾಗಬಹುದು.















ಇನ್ನಷ್ಟು ಸುದ್ದಿಗಳು
ವಾಟ್ಸ್ಆ್ಯಪ್ನಲ್ಲಿ ಬರಲಿದೆ ಬಹುನಿರೀಕ್ಷಿತ ‘ಶೆಡ್ಯೂಲ್ ಮೆಸೇಜ್’ ಫೀಚರ್!
ಹೊಸ ರೂಪದಲ್ಲಿ ಆನ್‌ಲೈನ್ ವಂಚನೆ- ಗ್ರಾಹಕರಿಗೆ ಎಚ್ಚರಿಕೆ ನೀಡಿದ ಎಸ್ಬಿಐ
ಅಡ್ಮಿನ್ಗಳಿಗೆ ಸುಪರ್ ಪವರ್ ನೀಡಿದ ವ್ಯಾಟ್ಸ್ಆ್ಯಪ್- ಅನಗತ್ಯ ಸಂದೇಶಗಳಿಗೆ ಕಡಿವಾಣ
ವಾಟ್ಸಾಪ್: ಡಿಲೀಟ್ ಮಾಡಿದ ಮೆಸೇಜ್ ಮರಳಿ ಪಡೆಯುವ ಹೊಸ ಅಪ್ಡೇಟ್
ಏರ್ಟೆಲ್ ಗ್ರಾಹಕರ ಕಿಸೆಗೆ ಕತ್ತರಿ: ಶೇ.25ರಷ್ಟು ಟ್ಯಾರಿಫ್ ಹೆಚ್ಚಳ- ನ. 26ರಿಂದ ಜಾರಿ
ಫೋನ್ಪೇ ಬಳಕೆದಾರರಿಗೆ ಶಾಕ್- ಇನ್ಮುಂದೆ ಯುಪಿಐ ಸೇವೆಗೆ ಶುಲ್ಕ
ವಾಟ್ಸ್ಆ್ಯಪ್ನಲ್ಲಿ ನಿಮ್ಮೊಂದಿಗೆ ನೀವೇ ಚಾಟ್ ಮಾಡುವ ವಿಧಾನ- ಈ ಫೀಚರ್ ಬಹಳ ಉಪಯುಕ್ತ
ವಾಟ್ಸಾಪ್, ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಡೌನ್- ಬಳಕೆದಾರರ ಪರದಾಟ
ಕೇಂದ್ರದ ಹೊಸ ಐಟಿ ಮಾರ್ಗಸೂಚಿ: ನಿಯಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ವಾಟ್ಸಾಪ್
ಚುನಾವಣಾ ಗುರುತಿನ ಚೀಟಿ: ಡಿಜಿಟಲ್ ಆವೃತಿ ನಾಳೆಯಿಂದ ಲಭ್ಯ