ಸುಳ್ಯ: ಕನಕಮಜಲಿನಿಂದ ಜಾನುವಾರುಗಳನ್ನು ಸಾಗಿಸಿಕೊಂಡು ಹೋಗುತ್ತಿದ್ದ ಪಿಕಪ್ ವಾಹನವನ್ನು ಕರ್ತವ್ಯದಲ್ಲಿದ್ದ ಪೋಲಿಸರು ಸುಳ್ಯದಲ್ಲಿ ನಿಲ್ಲಿಸಲು ಸೂಚಿಸಿದಾಗ ಕಾನೂನು ಬಾಹಿರ ವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾದ ಸಂದರ್ಭದಲ್ಲಿ ಪೋಲಿಸರು ಕೈಗೊಳ್ಳಬೇಕಾದ ಕಾನೂನು ಕ್ರಮಕ್ಕೆ ವಿರುದ್ಧವಾಗಿ ಸಂಘಪರಿವಾರದ ಗೂಂಡಾಗಳು ವಾಹನವನ್ನು ಹಿಂಬಾಲಿಸಿ ತಡೆದು ನಿಲ್ಲಿಸಿ ವಾಹನವನ್ನು ಪುಡಿಗಟ್ಟಿ ಗೂಂಡಾಗಿರಿ ನಡೆಸಿದ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರ ವಾಗಿ ಖಂಡಿಸುತ್ತದೆ.
ಜಾನುವಾರು ಸಾಗಾಟ ಅಕ್ರಮವಾಗಿದ್ದರೆ ಕಾನೂನು ಕ್ರಮ ಕೈಗೊಳ್ಳುವುದು ಪೋಲಿಸ್ ಇಲಾಖೆಯ ಜವಾಬ್ದಾರಿ ಯಾಗಿರುತ್ತದೆ.ಈ ಕೆಲಸವನ್ನು ಪೋಲಿಸರ ಸಮ್ಮುಖದಲ್ಲೇ ಅತಿರೇಕವಾಗಿ ವರ್ತಿಸಿ ಗೂಂಡಾಗಿರಿ ನಡೆಸಿರುವುದು ಪೋಲಿಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ.
ಸಂಘಪರಿವಾರದ ಇಂತಹ ಗೂಂಡಾಗಿರಿ ಪ್ರಕರಣಗಳು ತಾಲ್ಲೂಕಿನಲ್ಲಿ ಮರುಕಳಿಸುತ್ತಿದೆ.
ಹಾಗಾಗಿ ಭಜರಂಗದಳದ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ.
ಅದೇ ರೀತಿಯಲ್ಲಿ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಪೋಲಿಸರ ಕರ್ತವ್ಯಕ್ಕೆ ಬೆಲೆ ನೀಡದೆ ಪರಾರಿಯಾಗಲು ಯತ್ನಿಸಿದವರ ಮೇಲೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಅಲ್ ಕಸೀಮ್ ನಲ್ಲಿ ದಾರುಲ್ ಹಿಕ್ಮ ಪ್ರಚಾರ ಸಮಾವೇಶ ಮತ್ತು ಕಾಜೂರ್ ತಂಗಳ್ ಅವರಿಗೆ ಸನ್ಮಾನ
ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ- ನೂತನ ಅಧ್ಯಕ್ಷರಾಗಿ ಕಾಜೂರ್ ತಂಙಳ್ ಆಯ್ಕೆ
ಸುಳ್ಯದಲ್ಲಿ ಅಪರಿಚಿತ ತಂಡದಿಂದ ಸಂಪತ್ ಹತ್ಯೆ
ಗೂನಡ್ಕದಲ್ಲಿ “ನಮ್ಮೂರ ಹೆಮ್ಮೆ” ಕಾರ್ಯಕ್ರಮ ಕ್ಕೆ ಚಾಲನೆ
ಸುಳ್ಯ – ಆನಾರೋಗ್ಯ ಪೀಡಿತ ಬಾಲಕನಿಗೆ ಧನಸಹಾಯ
ರಾಷ್ಟ್ರೀಯ ಯೂತ್ ಕಾಂಗ್ರೆಸ್ ನಾಯಕರು ತೆಕ್ಕಿಲ್ ಗೆ ಭೇಟಿ
ಬೆಂಗಳೂರಿನಲ್ಲಿ ನಡೆಯುವ ಹೀರೊ ಹೈ ಲೀಗ್ ತಂಡಕ್ಕೆ ಆರಂತೋಡಿನ ಯುವಕ ಆಯ್ಕೆ
SSF ದ.ಕ ಜಿಲ್ಲಾ ವೆಸ್ಟ್ ಝೋನ್: ತುರ್ತು ಸೇವೆಗೆ ಸನ್ನದ್ದವಾದ Q ಟೀಮ್ ತಂಡ
ಪಿಯುಸಿ ಫಲಿತಾಂಶ: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸುಳ್ಯದ ತಸ್ರೀಫ
ಕಾಲೇಜಿಗೆ ಕೀರ್ತಿ ತಂದ ಮರಿಯಮ್ ರಫ್ಹಾನಾ- ಪಿಸಿಎಂಬಿ 98.25 ಶೇ. ಫಲಿತಾಂಶ