janadhvani

Kannada Online News Paper

ಅರಂತೋಡು: ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ರೋಟರಿ ಕ್ಲಬ್ ಸುಳ್ಯ ಇದರ ಸಹಯೋಗದೊಂದಿಗೆ ಅನಾರೋಗ್ಯ ಪೀಡಿತ ದೇರಾಜೆ ಗುಂಡ್ಲ ದಿ।ವಿಲಾಸ್ ಎಂಬವರ ಪುತ್ರ ಕೌಶಿಕ್ ರವರಿಗೆ ಧನ ಸಹಾಯ ನೀಡಲಾಯಿತು. ರೋಟರಿ ವತಿಯಿಂದ ರೂಪಾಯಿ 15000 ಮತ್ತು ಸಹಕಾರಿ ಸಂಘದ ವತಿಯಿಂದ ರೂಪಾಯಿ 5000 ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ವಹಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ನ ಶ್ರೀಮತಿ ಲತಾಮಧುಸೂದನ, ಜೋನಲ್ ಲೆಫ್ಟಿನೆಂಟ್ ಜಿತೇಂದ್ರ, ಸಹಕಾರಿ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ ಭಾಗವಹಿಸಿದ್ದರು. ರೋಟರಿ ಕ್ಲಬ್‌ ಸುಳ್ಯ ಇದರ ಖಜಾಂಜಿ ಆನಂದ ಖಂಡಿಗ, ಸದಸ್ಯರುಗಳಾದ ಮಧುಸೂಧನ, ರಮಾ Y A ,ಲಿಂಗಪ್ಪ ಮಾಸ್ಟರ್, ಪ್ರಭಾಕರ ನಾಯರ್, ಸಂಘದ ನಿರ್ದೇಶಕರುಗಳಾದ ವಿನೋದ್ ಉಳುವಾರು, ಕುಸುಮಾಧರ ಅಡ್ಕಬಳೆ, ಕೇಶವ ಅಡ್ತಲೆ, ನಿಧೀಶ್ ಅರಂತೋಡು, ಚಿತ್ರಾ ಶಶಿಧರ್, ಶಶಿಧರ್ ದೇರಾಜೆ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com