ಸುಳ್ಯ: ಅಂಡರ್ -18 ಫುಟ್ಬಾಲ್ ತಂಡಕ್ಕೆ ಆರಂತೋಡಿನ ಯುವಕ ಅದ್ನಾನ್ ಪಟೇಲ್ ಅರಂತೋಡು ಆಯ್ಕೆ ಅಗಿದ್ದಾರೆ. ಇತ್ತೀಚೆಗೆ ಮಂಗಳೂರು ಎಫ್ ಸಿ ಮಂಗಳೂರು ಅಕಾಡೆಮಿಗೆ ನಡೆದ ಅಂಡರ್18 ಆಯ್ಕೆ ಟ್ರಯಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಹೀರೊ ಹೈ ಲೀಗ್ ಪಂದ್ಯಾಟದಲ್ಲಿ ಎಫ್ ಸಿ ಮಂಗಳೂರು ಫುಟ್ಬಾಲ್ ಅಸ್ಸೋಸಿಯೇಷನ್ ತಂಡದ ಪರವಾಗಿ ಅದ್ನಾನ್ ಪಟೇಲ್ ಪಾಲ್ಗೊಳ್ಳಲಿದ್ದಾರೆ.
ಆಲ್ ಇಂಡಿಯಾ ಫುಟ್ಬಾಲ್ ಅಸ್ಸೋಸಿಯೇಷನ್ ಗೆ ತನ್ನನ್ನು ನೋಂದಾಯಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಲವಾರು ಜಿಲ್ಲಾ ಮತ್ತು ತಾಲೂಕು ಮಟ್ಟದ ಪಂದ್ಯಾವಳಿಯನ್ನು ಪ್ರತಿನಿಧಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಪ್ರಸ್ತುತ ರೋಟರಿ ಇಂಗ್ಲಿಷ್ ಮೀಡಿಯಂ ಸುಳ್ಯ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅದ್ನಾನ್ ಅವರು ಸಹರಾ ಯುನೈಟೆಡ್ ಸುಳ್ಯ ಫುಟ್ಬಾಲ್ ತಂಡದ ಖಾಯಂ ಸದಸ್ಯ ಹಾಗೂ ಈ ಹಿಂದೆ ಸಹರಾ ಯುನೈಟೆಡ್ ಫುಟ್ಬಾಲ್ ಅಸ್ಸೋಸಿಆಶನ್ ಸುಳ್ಯ ಇದರ ತರಬೇತುದಾರರಾದ ಮುನಾಫರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಆರಂತೋಡು ಜುಮಾ ಮಸ್ಜಿದ್ ಇದರ ಮಾಜಿ ಅಧ್ಯಕ್ಷರಾದ ಅಬ್ದುಲ್ ಕಾದರ್ ಪಟೇಲ್ ಹಾಗೂ ಜೈನಾಬಿ ದಂಪತಿಯ ಪುತ್ರ.
ಯುವ ಪ್ರತಿಭೆಗಳನ್ನು ಹುಡುಕಿ ಅವರಲ್ಲಿರುವ ಸಾಮರ್ಥ್ಯ ಹೊರಗೆಡವಲು ವೇದಿಕೆ ಕಲ್ಪಿಸುವ ಕಾರ್ಯವನ್ನು ಸಹರಾ ಫುಟ್ಬಾಲ್ ಅಸ್ಸೋಸಿಯೇಷನ್ ಸುಳ್ಯ ಮಾಡುತ್ತಿದೆ. ಯುವ ಆಟಗಾರರನ್ನು ಪೋಷಿಸಲು ಮತ್ತು ಬೆಳೆಸಲು ಎಲ್ಲ ರೀತಿಯ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ,ಇದರಿಂದ ಭಾರತ ತಂಡಕ್ಕೆ ಉತ್ತಮ ಆಟಗಾರರನ್ನು ಕಾಣಿಕೆಯಾಗಿ ನೀಡಲು ಸಾಧ್ಯವಾದರೆ ನಮ್ಮ ಕೆಲಸ ಸಾರ್ಥಕವಾದಂತೆಯೇ ಎಂದು ಸಹರಾ ತಂಡದ ವ್ಯವಸ್ಥಾಪಕ ರು ಹೇಳುತ್ತಾರೆ.















ಇನ್ನಷ್ಟು ಸುದ್ದಿಗಳು
ಅಲ್ ಕಸೀಮ್ ನಲ್ಲಿ ದಾರುಲ್ ಹಿಕ್ಮ ಪ್ರಚಾರ ಸಮಾವೇಶ ಮತ್ತು ಕಾಜೂರ್ ತಂಗಳ್ ಅವರಿಗೆ ಸನ್ಮಾನ
ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ- ನೂತನ ಅಧ್ಯಕ್ಷರಾಗಿ ಕಾಜೂರ್ ತಂಙಳ್ ಆಯ್ಕೆ
ಸುಳ್ಯದಲ್ಲಿ ಅಪರಿಚಿತ ತಂಡದಿಂದ ಸಂಪತ್ ಹತ್ಯೆ
ಗೂನಡ್ಕದಲ್ಲಿ “ನಮ್ಮೂರ ಹೆಮ್ಮೆ” ಕಾರ್ಯಕ್ರಮ ಕ್ಕೆ ಚಾಲನೆ
ಸುಳ್ಯ – ಆನಾರೋಗ್ಯ ಪೀಡಿತ ಬಾಲಕನಿಗೆ ಧನಸಹಾಯ
ರಾಷ್ಟ್ರೀಯ ಯೂತ್ ಕಾಂಗ್ರೆಸ್ ನಾಯಕರು ತೆಕ್ಕಿಲ್ ಗೆ ಭೇಟಿ
SSF ದ.ಕ ಜಿಲ್ಲಾ ವೆಸ್ಟ್ ಝೋನ್: ತುರ್ತು ಸೇವೆಗೆ ಸನ್ನದ್ದವಾದ Q ಟೀಮ್ ತಂಡ
ಸುಳ್ಯ ಜಾನುವಾರು ಸಾಗಾಟ ಪ್ರಕರಣ: ಗೂಂಡಾಗಿರಿ ವಿರುದ್ದ ಕೇಸ್ ದಾಖಲಿಸಲು ಆಗ್ರಹ
ಪಿಯುಸಿ ಫಲಿತಾಂಶ: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸುಳ್ಯದ ತಸ್ರೀಫ
ಕಾಲೇಜಿಗೆ ಕೀರ್ತಿ ತಂದ ಮರಿಯಮ್ ರಫ್ಹಾನಾ- ಪಿಸಿಎಂಬಿ 98.25 ಶೇ. ಫಲಿತಾಂಶ