janadhvani

Kannada Online News Paper

ಸುಳ್ಯ :ಕರ್ನಾಟಕ ರಾಜ್ಯ ಎನ್.ಎಸ್.ಯು.ಐ.ವತಿಯಿಂದ ಎಸ್.ಎಸ್.ಎಲ್.ಸಿ.ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸುವ ನಿಟ್ಟಿನಲ್ಲಿ ನಡೆಯುತ್ತಿರುವ “ನಮ್ಮೂರ ಹೆಮ್ಮೆ “ಕಾರ್ಯಕ್ರಮಕ್ಕೆ ಸೆ.8 ರಂದು ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನಡೆಯಿತು.

ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಾಲನೆಯನ್ನು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗಮಿಸಿ ಚಾಲನೆ ನೀಡಿದರು.ಅಧ್ಯಕ್ಷ ತೆಯನ್ನು ಸೋಮಶೇಖರ ಕೈೂಂಗಾಜೆ ವಹಿಸಿದರು.

ಸಮಾರಂಭದಲ್ಲಿ ಕುಶಾಲನಗರ ಉಸ್ತುವಾರಿ, ಪ್ರದೀಪ್ ಕುಮಾರ್ ರೈ ಪಾಂಬಾರ್, ಸಂಪಾಜೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಕುಂಞ ಗೂನಡ್ಕ, ಸುಳ್ಯ ವಿಧಾನ ಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೊ, ಕಾಂಗ್ರೆಸ್ ಮುಖಂಡರು ಗಳಾದ ಜಿ.ಕೆ.ಹಮೀದ್,ಕೆ.ಆರ್.ಜಗದೀಶ್ ,ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣ ಸಂಯೋಜಕ ಸೂರಜ್ ಹೊಸೂರ್,ಶರೀಫ್ ಕಂಥಿ,ಕಿರಣ್ ಬುಡ್ಲೆಗುತ್ತು ,ದಿನಕರ ಸಣ್ಣಮನೆ, ಸವಾದ್ ಸುಳ್ಯ ,ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯಗಳಾದ ಅಬುಶಾಲಿ,ಲೂಕಾಸ್,ಮುಂತಾದವರು ಉಪಸ್ಥಿತರಿದ್ದರು .

ಕಾರ್ಯಕ್ರಮ ದಲ್ಲಿ ಪಿ.ಯು.ಸಿ.ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು .ಶವಾದ್ ಗೂನಡ್ಕ ಸ್ವಾಗತಿಸಿ ಅಬೂಸಾಲಿ ವಂದಿಸಿದರು.

error: Content is protected !!
%d bloggers like this: