janadhvani

Kannada Online News Paper

ಕೋವಿಡ್-19: ಅನಿವಾಸಿ ಕನ್ನಡಿಗರ ಕಣ್ಣೀರೊರೆಸಿದ ಕೆಸಿಎಫ್ ಒಮಾನ್

ಮಸ್ಕತ್:ಕೊರೋನಾ ವೈರಸ್ ಎಂಬ ಮಾಹಾಮಾರಿ ರೋಗದಿಂದ ಮತ್ತು ಲಾಕ್ ಡೌನ್ ನಿಂದಾಗಿ ತತ್ತರಿಸಿದ ಅನಿವಾಸಿಗರಿಗೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ನಿರ್ದೇಶನದಂತೆ “ನೆರವಿಗೆ ನಾವಿದ್ದೇವೆ” ಎಂಬ ಶೀರ್ಷಿಕೆಯಲ್ಲಿ ಸಾಂತ್ವನ ವಿಭಾಗದಲ್ಲಿ ಕೆಸಿಎಫ್ ಒಮಾನ್ ಮಾಡಿದ ಸೇವೆಯು ಶ್ಲಾಘನೀಯವಾಗಿದೆ.

ಸಾದಾತುಗಳು, ಉಲಮಾಗಳ ಆಶಿರ್ವಾದ ಹಾಗೂ ಮೇಲ್ನೋಟದಲ್ಲಿ ಮತ್ತು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ನಾಯಕರ ಸತತ ಪರಿಶ್ರಮದಿಂದ ಕೆಸಿಎಫ್ ಸಂಘಟನೆ ಹಲವಾರು ಸಾಂತ್ವನ ಸೇವೆಗಳು ನಡೆಸುತ್ತಾ ಬರುತ್ತಿದೆ.

1.ಜಾತಿ ಧರ್ಮ ವಿತ್ಯಾಸವಿಲ್ಲದೆ ಸುಮಾರು ಮುನ್ನೂರೈವತ್ತಕಿಂತಲೂ ಹೆಚ್ಚು ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಒಮಾನಿನಲ್ಲಿರುವ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಕೆಲಸವಿಲ್ಲದೆ ಕಷ್ಟ ಅನುಭವಿಸುತ್ತಿದ್ದ ಬ್ಯಾಚುಲರ್ ಹಾಗೂ ನಲುವತ್ತರಷ್ಟು ಫ್ಯಾಮಿಲಿಯರಿಗೆ ನೀಡಲಾಯಿತು.

2.ತುರ್ತಾಗಿ ಮೆಡಿಸನ್ ಆವಶ್ಯಕತೆ ಇದ್ದವರಿಗೆ ಔಷಧ ಹಾಗೂ ತೀರಾ ಸಂಕಷ್ಟದಲ್ಲಿದ್ದ ಮೂರ್ನಾಲ್ಕು ಫ್ಯಾಮಿಲಿಗಳಿಗೆ ICF ಚಾರ್ಟೆಡ್ ವಿಮಾನದಲ್ಲಿ ಊರಿಗೆ ಮರಳಿ ಹೋಗುವ ವ್ಯವಸ್ಥೆ ಮಾಡಿ ಕೊಡಲಾಯಿತು.

3.ಇತ್ತೀಚೆಗೆ ಒಮಾನ್ ನ ಮುಲದ್ದ ಮುಸನ್ನದಲ್ಲಿ ವಿಸಿಟಿಂಗ್ ವಿಸಾದಲ್ಲಿ ಬಂದ ಸುಮಾರು ಒಂಬತ್ತು ಮಂದಿಯನ್ನೊಳಗೊಂಡ ಫ್ಯಾಮಿಲಿಯವರು ತಂಗಿರುವ ಸ್ಥಳಕ್ಕೆ ಕೆ ಸಿ ಎಫ್ ನಾಯಕರು ತೆರಳಿ ಅವರನ್ನು ಸಾಂತ್ವನ ಪಡಿಸಿ,ಊರಿಗೆ ಮರಳುವ ಸೌಲಭ್ಯಗಳನ್ನು ಮಾಡಿ ಕೊಡಲಾಯಿತು.

4.ವಿಸಿಟ್ ವಿಸಾ ಹಾಗೂ ಇನ್ನಿತರ ವೀಸಾದಲ್ಲಿ ಬಂದು ಸಂಕಷ್ಟದಲ್ಲಿರುವ ಹಲವಾರು ಮಂದಿಗೆ ಇಂಡಿಯನ್ ಎಂಬಸ್ಸಿ ಯಲ್ಲಿ ಸಿಗುವ ಸಹಾಯ ಸಹಕಾರದ ಬಗ್ಗೆ ಸ್ಪಷ್ಟವಾದ ಮಾಹಿತಿ ಪಡೆದು, ಬೇಕಾದ ಪರಿಹಾರವನ್ನು ಮಾಡಿ ಕೊಡಲಾಯಿತು

5.ಕೋವಿಡ್ ಕಾಲದಲ್ಲಿ ಕರ್ನಾಟಕಕ್ಕೆ ಮರಳಿದ ಹಲವಾರು ಯಾತ್ರಿಗಳಿಗೆ ಮಾಸ್ಕ್ ಗ್ಲೌಸ್ ಹಾಗೂ ಮುಖ್ಯವಾಗಿ ಬೇಕಾದ ಮಾಹಿತಿಗಳ ವಿವರಗಳನ್ನು ವಿಮಾನ ನಿಲ್ದಾಣದಲ್ಲಿ ನೀಡಿ ಕಳಿಸಲಾಯಿತು

6.ಬಡತನ ಅನುಭವಿಸುವವರಿಗೆ ರಂಝಾನ್ ಮತ್ತು ಈದ್ ದಿನ ಕಿಟ್’ಗಳನ್ನು ಕೊಟ್ಟು ಸಹಾಯ ಮಾಡಲಾಯಿತು.

ಅನಿವಾಸಿ ಕನ್ನಡಿಗರ ಅತಿ ದೊಡ್ಡ ಸಂಘಟನೆಯಾಗಿದೆ ಕರ್ನಾಟಕ ಕಲ್ಚರ್ ಫೌಂಡೇಶನ್, ಕೆಸಿಎಫ್.

ತಾಜುಲ್ ಉಲಮಾ ಮತ್ತು ಸುಲ್ತಾನುಲ್ ಉಲಮಾರವರ ದಿವ್ಯ ಹಸ್ತದಿಂದ ಭದ್ರವಾಗಿ ಬೇರೂರಿದ ಸುನ್ನತ್ ಜಮಾಅತಿನ ಕರ್ನಾಟಕದ ಅನಿವಾಸಳಿಗೆ ವಿದೇಶ ನಾಡಿನಲ್ಲಿ ಧಾರ್ಮಿಕ ಸೇವೆಗೈಯಲು ಸಿಕ್ಕಿದ ಸುವರ್ಣಾವಕಾಶವಾಗಿದೆ ಕೆಸಿಎಫ್ ಎಂಬ ಸಂಘಟನೆ. ಕರ್ನಾಟಕದ ಅನಿವಾಸಿ ಕನ್ನಡಿಗರು ಕೆ ಸಿ ಎಫ್ ಅನ್ನು ತಮ್ಮ ಹೃದಯದಿಂದ ಅಪ್ಪಿ ಹಿಡಿದು ಉತ್ತಮ ಸೇವೆ ಗೈಯ್ಯುತ್ತಿದ್ದಾರೆ.

ಸಾಂತ್ವನದ ಹಲವಾರು ಪದ್ಧತಿಗಳನ್ನಿಟ್ಟು ಕೊಂಡು KCF ಎಂಬ ಅತ್ಯುತ್ತಮ ಸಂಘಟನೆಯು ಒಮಾನಿನಲ್ಲಿ ಮಸ್ಕತ್,ಬೌಶರ್ ಸೀಬ್, ಸಲಾಲ, ಸೊಹಾರ್, ಸೂರ್, ನಿಝ್ವ, ಇಬ್ರಾ, ಹಿಬ್ರಿ, ಬುರೈಮಿ, ಮುಂತಾದ ಎಲ್ಲಾ ಕಡೆಗಳಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ನಿರತರಾಗಿ ಮುನ್ನುಗ್ಗುತ್ತಾ ಇದೆ.

ಮುಂದಿನ ದಿನಗಳಲ್ಲಿ ಕೆಸಿಎಫ್ (KCF) ಒಮಾನ್ ಕರ್ನಾಟಕಕ್ಕೆ ಚಾರ್ಟರ್ಡ್ ವಿಮಾನ ಏರ್ಪಡಿಸುವ ಬಗ್ಗೆ ವ್ಯವಸ್ಥೆಗಳು ನಡೆಯುತ್ತಿದೆ. ಸಂಕಷ್ಟ ಎದುರಿಸುತ್ತಿರುವಂತಹ ಕನ್ನಡಿಗರಾದ ಅನಿವಾಸಿಗಳು, ಗರ್ಭಿಣಿಯರು, ವಯಸ್ಕರು, ತುರ್ತು ಚಿಕಿತ್ಸೆ ಅಗತ್ಯವಿರುವವರು, ಕೆಲಸ ಕಳೆದುಕೊಂಡವರು, ವೀಸಾ ಕಾಲಾವಧಿ ಮುಗಿದವರು ಕೆಸಿಎಫ್ ನೀಡಿರುವ ಲಿಂಕ್ ಬಳಸಿ ಸಂಪೂರ್ಣ ವಿವರಗಳನ್ನು ದಾಖಲಿಸಿ ನೋಂದಣಿ(ರಿಜಿಸ್ಟರ್) ಮಾಡಬಹುದು ಎಂದು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com