janadhvani

Kannada Online News Paper

ಉಡುಪಿ ನಿವಾಸಿ ದಮ್ಮಾಮ್ ನಲ್ಲಿ ಮರಣ- ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್

ಸೌದಿ ಅರೇಬಿಯಾ: ದಮ್ಮಾಮ್ ನಲ್ಲಿ ವಾಸವಾಗಿದ್ದ ಉಡುಪಿ ಜಿಲ್ಲೆಯ ಮಂಚಿಕಲ್ಲು ನಿವಾಸಿ ಉಸ್ಮಾನ್ ಮುಹಿಯುದ್ದೀನ್ ಎಂಬುವವರು ರೌದ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮರಣ ಹೊಂದಿರುತ್ತಾರೆ. ಇವರು ಬಾಫ್ಕೊ ಕಂಪನಿಯೊಂದರಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸೌದಿಯಲ್ಲಿ ಸುಮಾರು 30 ವರ್ಷಗಳಿಂದ ವಾಸವಾಗಿದ್ದರು .

ಮರಣೋತ್ತರ ಕ್ರೀಯೆಗೆ ಬೇಕಾದ ಕೆಲಸ ಕಾರ್ಯಗಳ ಬಗ್ಗೆ ಹೈದರ್ ಮಂಚಿಯವರು ಕೆ.ಸಿ.ಎಫ್ INC ಇಹ್ಸಾನ್ ಚೇರ್ಮಾನ್ ಅಬೂಬಕ್ಕರ್ ರೈಸ್ಕೊ ಯವರಿಗೆ ವಿಷಯ ತಿಳಿಸಿದಾಗ ಕೂಡಲೆ ಕಾರ್ಯ ಪ್ರವರ್ತರಾಗಿ ಕೆ.ಸಿ.ಎಫ್ ದಮ್ಮಾಮ್ ಝೋನ್ ರಿಲೀಫ್ ಕನ್ವೀನರ್ ಬಾಷಾ ಗಂಗಾವಳಿಯರ ಸಹಕಾರದೊಂದಿಗೆ ಬೇಕಾಗುವ ಎಲ್ಲಾ ದಾಖಲೆ ಪತ್ರಗಳನ್ನು ಸರಿಪಡಿಸಿ ಕೆಲವೇ ದಿನಗಳಲ್ಲಿ ದಮ್ಮಾಮ್ 91 ನಲ್ಲಿ ಕುಟುಂಬಿಕರ ಸಹಕಾರದೊಂದಿಗೆ ಅಂತ್ಯಕ್ರೀಯೆ ನಡೆಸಲಾಯಿತು.

ಕೆ.ಸಿ.ಎಫ್ ದಮ್ಮಾಮ್ ಝೋನಲ್ ಅಧ್ಯಕ್ಷರಾದ ರಶೀದ್ ಸಖಾಫಿ, ಹಾಗು ಹಲವು ನಾಯಕರು ಅಂತ್ಯಕ್ರೀಯೆಯಲ್ಲಿ ಭಾಗಯಾಗಿ ಮ್ರತರಿಗಾಗಿ ದುಆ ನೆರೆವೇರಿಸಲಾಯಿತು. ಮ್ರತರು ಹೆಂಡತಿ ಹಾಗು ಒಂದು ಮಗನನ್ನು ಅಗಲಿದ್ದಾರೆ.

ಸಾಂತ್ವನ ವಿಭಾಗ
KCF ದಮ್ಮಾಮ್ ಝೋನ್

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!