janadhvani

Kannada Online News Paper

7ನೇ ಅಲ್ಲ, 5ನೇ ತರಗತಿಯವರೆಗೆ ಆನ್​ಲೈನ್ ತರಗತಿ ರದ್ದು- ಶಿಕ್ಷಣ ಸಚಿವ ಸ್ಪಷ್ಟನೆ

ಬೆಂಗಳೂರು: ಏಳನೇ ತರಗತಿಯವರೆಗಿನ ಮಕ್ಕಳಿಗೆ ಆನ್​ಲೈನ್ ಕ್ಲಾಸ್ ಮಾಡುವಂತಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಎಂಬಂತಹ ಸುದ್ದಿಯನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಳ್ಳಿಹಾಕಿದ್ದಾರೆ. ಪ್ರೀಸ್ಕೂಲ್ ಮತ್ತು ಒಂದರಿಂದ ಐದನೇ ತರಗತಿಯವರೆಗೆ ಆನ್​ಲೈನ್ ತರಗತಿಗಳನ್ನ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಇವತ್ತು ಟ್ವೀಟ್ ಮಾಡಿದ್ದಾರೆ.

ಏಳನೇ ತರಗತಿಯವರೆಗೆ ಆನ್​ಲೈನ್ ಪಾಠಕ್ಕೆ ಅವಕಾಶ ನೀಡಬಾರದು ಎಂಬುದು ಕೆಲ ಸಂಪುಟ ಸದಸ್ಯರ ಸಲಹೆ ಮಾತ್ರವಾಗಿದೆ. ಅನೌಪಚಾರಿಕವಾಗಿ ನಡೆದ ಚರ್ಚೆಯ ವೇಳೆ ಬಂದ ಸಲಹೆ ಇದಾಗಿದೆ. ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಮ್ಮ ಟ್ವೀಟ್​ನಲ್ಲಿ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅಂದರೆ ಆರನೇ ತರಗತಿಯಿಂದ ಆನ್​ಲೈನ್ ಕ್ಲಾಸ್​ಗಳನ್ನ ನಡೆಸಲು ಅನುಮತಿ ಇದ್ದಂತಾಗಿದೆ. ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಏಳನೇ ತರಗತಿಯವರೆಗೆ ಆನ್​ಲೈನ್ ಕ್ಲಾಸ್ ರದ್ದು ಮಾಡಲಾಗಿದೆ ಎಂದು ಕೆಲ ಮುಖಂಡರು ಹೇಳಿದ್ದರು. ಇವತ್ತು ಸಚಿವ ಮಾಧು ಸ್ವಾಮಿ ಕೂಡ ಇದನ್ನೇ ಪುನರುಚ್ಚರಿಸಿದ್ದರು. ಅದಾದ ಬೆನ್ನಲ್ಲೇ ಶಿಕ್ಷಣ ಸಚಿವರೇ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.

error: Content is protected !! Not allowed copy content from janadhvani.com