janadhvani

Kannada Online News Paper

ಸರ್ಕಾರದ ಆದೇಶಗಳನ್ನು ಪಾಲಿಸಿ ಮಸೀದಿಗಳನ್ನು ತೆರೆಯಿರಿ- ಸಮಸ್ತ

ಕಲ್ಲಿಕೋಟೆ : ಮಸೀದಿಗಳನ್ನು ತೆರೆದು ಆರಾಧನೆ ನಿರ್ವಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಅನುಮತಿ ಕೊಟ್ಟಿರುವ ಈ ಸಂದರ್ಭದಲ್ಲಿ, ಸರ್ಕಾರದ ಆದೇಶಗಳನ್ನು ಪಾಲಿಸಿ ಮಸೀದಿಗಳನ್ನು ತೆರೆದು ಕಾರ್ಯಾಚರಿಸಬೇಕು ಎಂದು ಸಮಸ್ತ.

ಜುಮುಅ (ಶುಕ್ರವಾರ) ನಮಾಝ್ ನಿರ್ವಹಣೆಗಾಗಿ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಮತ್ತು ಪ್ರಧಾನ ಕಾರ್ಯದರ್ಶಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ರವರು ಪ್ರಸ್ತಾಪಿಸಿದ್ದಾರೆ.

ಅಪರಿಚಿತರು ಭಾಗವಹಿಸಲು ಸಾಧ್ಯತೆಯಿರುವ ಪಟ್ಟಣಗಳ ಮಸೀದಿಗಳನ್ನು ತೆರೆಯದೆ ಕೆಲವು ವಾರಗಳಿಗೆ ಮುಂದೂಡುವುದಾಗಿದೆ ಉತ್ತಮ. ಅದೇ ಸಂದರ್ಭದಲ್ಲಿ ಸರ್ಕಾರದ ಆದೇಶಗಳನ್ನು ಪಾಲಿಸಿ ಹಳ್ಳಿ ಪ್ರದೇಶಗಳ ಮಸೀದಿಗಳಲ್ಲಿ ಜುಮುಅಃ ನಮಾಝ್ ಪುನರಾರಂಭಿಸಬೇಕು. ಕಾರಣ ಜುಮುಅ ನಮಾಝ್ ಅತ್ಯಂತ ಮಹತ್ವವುಳ್ಳದ್ದೂ ಕಡ್ಡಾಯ ಆರಾಧನೆಯೂ ಆಗಿರುತ್ತದೆ.

ಆರಾಧನಾಲಯಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸರಕಾರವು ಆಜ್ಞಾಪಿಸಿದಾಗ ಮುಸ್ಲಿಮರು ಸರ್ಕಾರದ ಆಜ್ಞೆಯನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಮತಿ ನೀಡಿರುವುದರಿಂದ ತೊಂದರೆಯಾಗದಂತೆ ಜುಮುಅಃ ಆರಂಭಿಸಲು ಪ್ರಯತ್ನಿಸಬೇಕೆಂದು ಸಮಸ್ತ ನಾಯಕರು ಹೇಳಿದರು.

ಕನ್ನಡಕ್ಕೆ : mkm ಕಾಮಿಲ್ ಕೊಡಂಗಾಯಿ

error: Content is protected !! Not allowed copy content from janadhvani.com