janadhvani

Kannada Online News Paper

ಶಾರ್ಜಾದ ಬಹುಮಹಡಿ ಕಟ್ಟಡದಲ್ಲಿ ಭೀಕರ ಅಗ್ನಿ ಅನಾಹುತ

ಶಾರ್ಜಾ: ಇಲ್ಲಿನ ಅಲ್ ನಹ್ದಾ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಇಂದು ರಾತ್ರಿ 9 ಗಂಟೆ ಸುಮಾರಿಗೆ 50 ಅಂತಸ್ತಿನ ಅಬ್ಕೊ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಫ್ಲ್ಯಾಟ್‌ಗಳು ಸೇರಿದಂತೆ ಅನೇಕ ಜನರು ವಾಸಿಸುವ ಕಟ್ಟಡವಾಗಿದೆ.

ಲಾಕ್ ಡೌನ್ ಸಮಯವಾದ್ದರಿಂದ ಹೆಚ್ಚಿನ ನಿವಾಸಿಗಳು ಕಟ್ಟಡದೊಳಗೆ ಇರುವ ಸಂದರ್ಭದಲ್ಲೇ ಬೆಂಕಿ ಹೊತ್ತಿಕೊಂಡಿದ್ದು, ಕಟ್ಟಡದೊಳಗಿದ್ದ ಹಲವರು ಹೊರಗಡೆ ಓಡಿದ್ದಾರೆ. ಉಳಿದವರನ್ನು ಸ್ಥಳಾಂತರಿಸಲಾಗಿದೆ. ಯಾವುದೇ ಸಾವು,ನೋವಿನ ಬಗ್ಗೆ ವರದಿಯಾಗಿಲ್ಲ.

ಸಮೀಪದ ಕಟ್ಟಡಗಳಿಗೆ ಬೆಂಕಿ ಹರಡುವ ಸಾಧ್ಯತೆ ಇದ್ದು, ಅಲ್ಲಿನ ನಿವಾಸಿಗಳನ್ನೂ ಸ್ಥಳಾಂತರಿಸಲಾಗಿದೆ.ವಿವಿಧ ಎಮಿರೇಟ್‌ಗಳ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮುಂದುವರಿಸಿದ್ದಾರೆ.

error: Content is protected !! Not allowed copy content from janadhvani.com