ರಿಯಾದ್: ಸೌದಿಯಾದ್ಯಂತ ಕೋವಿಡ್ ಹಿನ್ನೆಲೆಯಲ್ಲಿ ಆಹಾರ ಪಡೆಯಲು ಹೆಣಗಾಡುತ್ತಿರುವ ವ್ಯಕ್ತಿಗಳು ಮತ್ತು ಕುಟುಂಬಗಳಿಗಾಗಿ ಟೋಲ್ ಫ್ರೀ ಸಂಖ್ಯೆ ಮತ್ತು ಆ್ಯಪ್ ಅನ್ನು ಸಚಿವಾಲಯ ಬಿಡುಗಡೆ ಮಾಡಿದೆ.
ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡ ಮತ್ತು ಹೆಣಗಾಡುತ್ತಿರುವವರನ್ನು ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಅಂತವರು ಸಚಿವಾಲಯದ ಟೋಲ್ ಫ್ರೀ ಸಂಖ್ಯೆ 19911 ಗೆ ಕರೆ ಮಾಡಬಹುದು. ಅಥವಾ https://mlsd.gov.sa/ar/node/555642 ನಲ್ಲಿ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು.
ದೇಶದ ವಿವಿಧ ಎನ್‌ಜಿಒಗಳ ಮೂಲಕ ರೂಪಿಸಲಾದ ಈ ಯೋಜನೆಯ ಮೇಲ್ವಿಚಾರಣೆಯನ್ನು ಸಚಿವಾಲಾಯ ನೋಡುತ್ತಿದೆ. ಸುಮಾರು ಒಂದೂವರೆ ಲಕ್ಷ ಆಹಾರ ಕಿಟ್‌ಗಳನ್ನು ಈಗಾಗಲೇ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ವಿತರಿಸಲಾಗಿದೆ. ಒನ್ ಫುಡ್ ಎಂಬ ಈ ಯೋಜನೆಗೆ 500 ಮಿಲಿಯನ್ ರಿಯಾಲ್ ಮೀಸಲಿಡಲಾಗಿದೆ. ವಿವಿಧ ಸೇವಾ ಸಂಘಟನೆಗಳ ನೇತೃತ್ವದಲ್ಲೂ ಆಹಾರ ಪೂರೈಕೆ ಮುಂದುವರೆದಿದೆ.