ನವದೆಹಲಿ: ಗಲ್ಫ್ ರಾಷ್ಟ್ರಗಳು ಹಾಗೂ ಅಮೆರಿಕಾ ಯೂರೋಪ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ಭಾರತಕ್ಕೆ ವಾಪಾಸಾಗಲು ಬಯಸಿ ಲಕ್ಷಾಂತರ ಮಂದಿ ಈಗಾಗಲೇ ಆನ್ ಲೈನ್ ನೋಂದಣಿಯನ್ನು ಮಾಡಿರುತ್ತಾರೆ.
ಮೇ 7ರಿಂದ ಅನಿವಾಸಿ ಭಾರತೀಯರನ್ನು ವಾಪಾಸ್ ಕರೆತರುವ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಗಲ್ಫ್ ,ಅಮೆರಿಕಾ ಹಾಗೂ ಯೂರೋಪ್ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ವಿಮಾನಗಳ ಮತ್ತು ನೌಕಾಸೇನೆಯ ನೌಕೆಗಳ ಮೂಲಕವೂ ಕರೆತರಲು ಈಗಾಗಲೇ ವ್ಯವಸ್ಥೆಗಳು ಭರದಿಂದ ಸಾಗುತ್ತಿದೆ.
ಹೀಗೆ ಭಾರತಕ್ಕೆ ಬರಲು ಸಿದ್ಧರಾಗಿರುವ ಅನಿವಾಸಿಗಳಿಗೆ ಕೆಲವು ನಿರ್ದೇಶಗಳನ್ನು ಕೇಂದ್ರ ಸರಕಾರವು ನೀಡಿದೆ. ಅದನ್ನು ತಿಳಿದುಕೊಳ್ಳಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ.
1. ವಿಮಾನವೇರುವ ಮೊದಲು ಭಾರತಕ್ಕೆ ಬರಲು ಸಿದ್ಧರಾಗಿರುವ ಪ್ರತಿಯೋರ್ವನ ಸ್ಕ್ರೀನ್ ಟೆಸ್ಟ್ ಮಾಡಲಾಗುವುದು. ಜ್ವರ ಅಥವಾ ಕೊವಿಡ್ ನ ರೋಗ ಲಕ್ಷಣಗಳು ಕಂಡು ಬಂದರೆ ಅಂತವರಿಗೆ ಪ್ರಯಾಣಿಸಲು ಅವಕಾಶವಿರುವುದಿಲ್ಲ.
2. ಭಾರತಕ್ಕೆ ಹಿಂದಿರುಗಿದವರನ್ನು ವಿಮಾನ ನಿಲ್ದಾಣದಿಂದಲೇ ಸರಕಾರ ನಿಗದಿ ಪಡಿಸಿದ ಆಸ್ಪತ್ರೆ ಯಾ ಕಟ್ಟಡಗಳಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗುವುದು.
3. ಎಲ್ಲರೂ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ನಲ್ಲಿರ ಬೇಕಾಗುತ್ತದೆ. 14ದಿನ ಕಳೆದ ನಂತರ ಕೊವಿಡ್ ಟೆಸ್ಟ್ ಮಾಡಿಸಲಾಗುವುದು. ಅದರಲ್ಲಿ ರೋಗ ಲಕ್ಷಣ ಪತ್ತೆಯಾದರೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗುವುದು.
4. ಪ್ರಯಾಣದ ಹಾಗೂ ಕ್ವಾರೆಂಟೈನ್ ಖರ್ಚನ್ನು ಅವರವರೇ ಭರಿಸಬೇಕಾಗುತ್ತದೆ.
5. ಅನಿವಾಸಿಗಳ ಕ್ವಾರೆಂಟೈನ್ ಜವಾಬ್ಧಾರಿಯನ್ನು ಆಯಾಯ ರಾಜ್ಯ ಸರಕಾರಗಳೇ ವಹಿಸುತ್ತದೆ.
ಉತ್ತಮ ವರದಿಗಾರಿಕೆ