janadhvani

Kannada Online News Paper

ಫುಡ್ ಕಿಟ್‌ನಲ್ಲಿ ಚಿನ್ನದುಂಗುರ: ಹಿಂದಿರುಗಿಸಿದ ಬಾಲಕ- ಶಾಸಕರಿಂದ ಸನ್ಮಾನ

ಪುತ್ತೂರು : ಪುತ್ತೂರು ಸಮೀಪದ ಬನ್ನೂರು ಕರ್ಮಲ ನಿವಾಸಿ ಹನೀಫ್ ಎಂಬವರ ಪುತ್ರ ಮುಹಮ್ಮದ್ ಹುಕ್ಕಾಶ್, ಹನ್ನೆರಡರ ಹರೆಯದ ಬಾಲಕ ಪ್ರಾಮಾಣಿಕತೆ ಮೆರೆದು ಸುದ್ದಿಯಾಗಿದ್ದಾನೆ.

ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಇವರ ಕಛೇರಿಯ ವಾರ್ ರೂಮ್ ಮೂಲಕ ಪುತ್ತೂರು ಬಂಟರ ಸಂಘದ ವತಿಯಿಂದ ಕಿಟ್ ವಿತರಿಸಲಾಗಿತ್ತು.

ಉಕ್ಕಾಶ್ ಮನೆಗೆ ನೀಡಲಾಗಿದ್ದ ಆಹಾರ ಸಾಮಾಗ್ರಿಗಳ ಕಿಟ್‌ನಲ್ಲಿ ಪ್ಯಾಕ್ ಮಾಡಿದ ವ್ಯಕ್ತಿಯ ಚಿನ್ನದುಂಗುರ ಉದುರಿ ಬಿದ್ದಿತ್ತು. ತನಗೆ ಕಿಟ್‌ನಲ್ಲಿ ಬಿದ್ದು ಸಿಕ್ಕಿದ ಚಿನ್ನದುಂಗುರವನ್ನು ಉಕ್ಕಾಶ್ ಸ್ಥಳೀಯ ನಗರ ಸಭಾ ಸದಸ್ಯೆ ಪ್ರೇಮಲತಾ ಅವರಿಗೆ ಹಿಂದುರಿಗಿಸಿದ್ದ. ಉಂಗುರವು ಕಿಟ್ ಪ್ಯಾಕಿಂಗ್ ಮಾಡಿದ್ದ ರಾಮಚಂದ್ರ ಘಾಟೆ ಎಂಬವರಿಗೆ ಸೇರಿತ್ತು.

ಬಾಲಕ ಹುಕ್ಕಾಶ್‌ನ ಪ್ರಾಮಾಣಿಕತೆ ಮನಗಂಡ ಶಾಸಕರು ಬಾಲಕನ ಮನೆಗೆ ತೆರಳಿ ಶಾಲು ಹೊದಿಸಿ, ಹೂಗುಚ್ಛ ನೀಡಿ, ಮತ್ತೊಂದು ಕಿಟ್ ನೀಡಿ ಸನ್ಮಾನಿಸಿದ್ದಾರೆ.

ಶಾಸಕರ ಈ ನಡೆ ಎಲ್ಲೆಡೆ ಪ್ರಶಂಸನೀಯವಾಗಿದ್ದು, ಬಾಲಕನ ಪ್ರಾಮಾಣಿಕತೆಗೆ ಎಲ್ಲರೂ ಬೇಷ್ ಅಂದಿದ್ದಾರೆ.ಮುಹಮ್ಮದ್ ಹುಕಾಶ್ ಬೆಳಂದೂರಿನ ಈಡನ್ ಗ್ಲೋಬಲ್ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿ.

error: Content is protected !! Not allowed copy content from janadhvani.com