janadhvani

Kannada Online News Paper

ಬೆಂಗಳೂರು ಕೆಎಂಸಿಸಿ ಸಂಘಟನೆಯಿಂದ ಬಡವರಿಗೆ ಆಹಾರ ವಿತರಣೆ

ಬೆಂಗಳೂರು: ಇಡೀ ದೇಶಕ್ಕೆ ತಗುಲಿದಂತಹ ಮಾರಕ ರೋಗ ರಾಜ್ಯಕ್ಕೂ ವ್ಯಾಪಿಸಿದೆ. ಈ ನಿಟ್ಟಿನಲ್ಲಿ ಪ್ರಾರಂಭದಿಂದಲೂ ಸೇವೆ ನೀಡುತ್ತಾ ದಿನಕ್ಕೆ ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ, ಭಿಕ್ಷುಕರಿಗೆ, ಆಹಾರವಿಲ್ಲದೆ ತೊಂದರೆ ಅನುಭವಿಸುವವರಿಗೆ ಆಹಾರ ವಿತರಿಸುತ್ತಿದೆ. ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುತ್ತಿದೆ. ಇದಕ್ಕೆ ಬೇಕಾದ ಎಲ್ಲಾ ಖರ್ಚು ವೆಚ್ಚಗಳನ್ನು ಬೆಂಗಳೂರಿನ ಕೆಎಂಸಿಸಿಯ ವ್ಯಾಪಾರಿಗಳಿಂದ, ದಾನಿಗಳಿಂದ ಹಣವನ್ನು ಸಂಗ್ರಹಿಸಿ ಆಗುವ ಖರ್ಚು ವೆಚ್ಚಗಳನ್ನು ನೀಗಿಸಲಾಗುತ್ತಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಂಗ ಸಂಸ್ಥೆಯಾದ ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ಬೆಂಗಳೂರು AIKMCC ಇಡೀ ಸಮಾಜಕ್ಕೆ ಇನ್ನೂ ಕೂಡ ಸಮಾಜದ ಸೇವೆಗೈಯಲಿದೆ.

ಸಂಘಟನೆಯ ಪರಿಚಯ: ನಿರಂತರ ಬಡವರ ಸೇವೆಯಲ್ಲೇ ಮುಳುಗಿರುವ (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್)ಅಂಗ ಸಂಸ್ಥೆಯಾದ ಬೆಂಗಳೂರು ಕೆಎಂಸಿಸಿ(ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್) ಹಲವಾರು ದಶಕಗಳ ಇತಿಹಾಸವಿರುವ ಕೆಎಂಸಿಸಿ ಬೆಂಗಳೂರಿನಲ್ಲಿ ಸೇವೆಗಿಳಿದು ಹಲವು ದಶಕಗಳು ಕಳೆದಿದೆ.

ಕೆಎಂಸಿಸಿ ಎಂಬ ಸಂಘಟನೆ ಸ್ಥಾಪನೆಗೊಂಡಾಗ ಇದರ ಉದ್ದೇಶ ಕೇರಳದಿಂದ ಹೊರ ರಾಜ್ಯಗಳಿಗೆ ಹೊರ ದೇಶಗಳಿಗೆ ತನ್ನ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ತೆರಳಿದಂತಹಾ ಬಡವರ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಂಗಸಂಸ್ಥೆಯಾದ)ಕೆಎಂಸಿಸಿ AIKMCC ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ಎಂಬ ನಾಮದೊಂದಿಗೆ ಪ್ರಾರಂಭ ಮಾಡಲಾಯಿತು. ಇದರ ನಿಯಂತ್ರಣ ಇಂದು ನಮ್ಮೊಂದಿಗಿಲ್ಲದ ನಗುಮುಖದ ವ್ಯಕ್ತಿ ಕೇರಳ ರಾಜ್ಯದಲ್ಲಿ ಸೌಹಾರ್ದತೆ ನೆಲೆಯೂರಲು ಪ್ರಮುಖ ಪಾತ್ರವಹಿಸಿದ ಪಾಣಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಙಲ್ ವರದ್ದಾಗಿತ್ತು.

ಕೆಎಂಸಿಸಿಯ ಸೇವೆಯು ಮುಂದುವರಿಯುತ್ತಾ ಮುಂದೆ ಸಾಗಿತು ಕೇರಳದಿಂದ ಹೊರ ದೇಶಕ್ಕೆ ತೆರಳಿದ ಮುಸ್ಲಿಂ ಕಾರ್ಮಿಕರಿಗೆ, ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ಥಾಪಿತಗೊಂಡ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ಸಂಘಟನೆ ಅದರ ಹೆಸರನ್ನು ಹಾಗೇ ಉಳಿಸಿಕೊಂಡು ಇಡೀ ಮನುಷ್ಯ ಜೀವಿಗಳಿಗೆ ಯಾರಿಗೆಲ್ಲಾ ಸಹಾಯ ಅವಶ್ಯಕತೆ ಇದೆಯೋ ಅವರಿಗೆಲ್ಲಾ ಸೇವೆಯನ್ನು ನೀಡುತ್ತಾ ಮುಂದುವರಿಯಿತು.
ಸಾವಿರಾರು ಮನೆಗಳು,ನೀರಿನ ತೊಂದರೆ ಅನುಭವಿಸುವವರಿಗೆ ನೀರಿನ ಸೌಲಭ್ಯಕ್ಕಾಗಿ ಬಾವಿಗಳ ನಿರ್ಮಾಣ, ಆಂಬುಲೆನ್ಸ್ ಡಯಾಲಿಸೀಸ್ ಸೆಂಟರ್ ಸಿಎಚ್ ಸೆಂಟರ್ ರೋಗಿಗಳಿಗೆ ಬಡವರಿಗೆ ಸಹಾಯ ಸಹಕಾರ ನೀಡುತ್ತಾ ಮುಂದೆ ಸಾಗಿತು ಕೆಎಂಸಿಸಿ ಸಂಘಟನೆ.

ಕೆಎಂಸಿಸಿಯ ಬಗ್ಗೆ ಹೇಳುವುದಾದರೆ ಹಲವಾರು ದಶಕಗಳಿಂದ ಬೆಂಗಳೂರಿನಲ್ಲಿ ಕೆಎಂಸಿಸಿ. 24×7 ಸೇವೆ ನೀಡುತ್ತಾ ಬಂದಿದೆ. ಬಡವರಿಗೆ ಔಷಧಿ ಹೊರ ಊರಿನಿಂದ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ಕಷ್ಟ ಅನುಭವಿಸುವವರಿಗೆ ಹೋರ ಊರಿನಿಂದ ಬೆಂಗಳೂರು ನಗರಕ್ಕೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ನಿರಂತರ ಸಲಹೆ ಸೂಚನೆಗಳು, ಆಹಾರ, ತಂಗುವ ವ್ಯವಸ್ಥೆ ಹೀಗೇ ಸೇವೆಯೊಂದಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಿರಂತರ ಮಲಗಿದ್ದಲ್ಲೇ ಇರತಕ್ಕಂತಹಾ ರೋಗಿಗಳಿಗೆ ಮನೆಮನೆಗೆ ತೆರಳಿ ಸೇವೆ ನೀಡುವುದು ಸೇರಿದಂತೆ ಅನಾಥ ಶವಗಳಿದ್ದಲ್ಲಿ ಧಫನ ಕಾರ್ಯಗಳಿಗೆ ಸಹಾಯ ಹೊರ ಊರಿನ ಶವಗಳಿದ್ದಲ್ಲಿ ಅವರ ತಾಯ್ನಾಡಿಗೆ ಆಂಬುಲೆನ್ಸ್ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಅಪಘಾತಕ್ಕೀಡಾಗಿ ತೊಂದರೆ ಅನುಭವಿಸುವ ರೋಗಿಗಳಿಗೆ ತುರ್ತು ಚಿಕಿತ್ಸೆ , ರಕ್ತದಾನದ ಅವಶ್ಯಕತೆಗೆ ಸ್ಪಂದಿಸುವುದು.
ಶಿಕ್ಷಣ ಕ್ಷೇತ್ರದಲ್ಲಿ ಸಹಕಾರ, ಮಹಿಳಾ ಸಂಘ ಎಂಮರ್ಜೆನ್ಸೀ ಟ್ರೊಮಾಕೇರ್ ಹೀಗೇ ಸಮಾಜಕ್ಕೆ ಯಾವುದೆಲ್ಲಾ ರೀತಿಯಲ್ಲಿ ಸಹಾಯ ಸಹಕಾರ ನೀಡಲು ಸಾಧ್ಯವೋ ಅದೆಲ್ಲವನ್ನೂ ಆಲ್ ಇಂಡಿಯಾ ಕೆಎಂಸಿಸಿ ಅಧ್ಯಕ್ಷರಾದ ಎಂ.ಕೆ. ನೌಶಾದ್‌ರವರ ನೇತ್ರತ್ವದಲ್ಲಿ ಬೆಂಗಳೂರು ಕೆಎಂಸಿಸಿ ಉಚಿತವಾಗಿ ಸೇವೆ ನೀಡುತ್ತಾ ಬಂದಿದೆ.

error: Content is protected !! Not allowed copy content from janadhvani.com