janadhvani

Kannada Online News Paper

ಕಿಟ್ ವಿತರಣೆ ಮತ್ತು ಮತಾಂಧರ ಅಟ್ಟಹಾಸ.

ಇಸ್ಹಾಕ್ ಸಿ.ಐ.ಫಜೀರ್

ದ.ಕ.ಎಂಬ ಬುದ್ದಿವಂತರ ಜಿಲ್ಲೆ ಅಕ್ಷರಶಃ ‘ಬುದ್ದಿವಂತೆ’ಯರ ಜಿಲ್ಲೆಯಾಗಿದೆ’
ಕೊರೋನದಿಂದ ಮನುಜ ಸಂಕುಲ ಕುಗ್ಗಿ ಕೊರಗಿ ಹೋದರೂ ನಮ್ಮ ದ‌.ಕ.ಜಿಲ್ಲೆಯಲ್ಲಿ ಕೊರೋನ ವೈರಸ್‌ಗಿಂತ ಕ್ಷಿಪ್ರವಾಗಿ ಹಿಂದುತ್ವ ವೈರಸ್ ಹರಡಿಕೊಂಡಿದೆ.

ಧರ್ಮದಮಲು ನೆತ್ತಿಗೇರಿಸಿಕೊಂಡ ಹಿಂದೂ ಮತಾಂಧರು ಥೇಟ್ ಸೊಳ್ಳೆಯಂತೆ ವರ್ತಿಸುತ್ತಾರೆ.

‘ಸೊಳ್ಳೆ ತಾನಾಗಿ ನಿದ್ರೆ ಮಾಡಲ್ಲ,ನಿದ್ರೆ ಮಾಡುವವರನ್ನು ಬಿಡಲ್ಲ’
ಅದೇ ರೀತಿ ಈ ಹಿಂದುತ್ವವಾದಿಗಳು ತಾವಾಗಿ ಸಮಾಜಕ್ಕಾಗಲಿ,ಸಮುದಾಯಕ್ಕಾಗಲಿ ಕಿಂಚಿತ್ತೂ ಸೇವೆ ಮಾಡಿದ್ದು ಇಲ್ಲ.
ಏನಿದ್ದರೂ ಹೊಡೆ,ಬಡಿ,ದರೋಡೆ ಲೂಟಿ ಮಾತ್ರ.

ಕೊರೋನವನ್ನು ಎದುರಿಸಲು ಜಗತ್ತು ಸನ್ನದ್ಧಗೊಂಡಿರುವಾಗ.
ನಮ್ಮ ಜಿಲ್ಲೆಯ ಮತಾಂಧರಿಗೆ ಕೊರೋನದ ಭೀಕರತೆ ಇನ್ನೂ ಅರ್ಥವಾಗಿಲ್ಲ.
ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟುಗಳು ಸ್ತಬ್ಧಗೊಂಡಿದೆ,ಜನಸಾಮಾನ್ಯರು
ಕೆಲಸಗಳಿಲ್ಲದೆ ಗೃಹಬಂಧನದಲ್ಲಿದ್ದು,
ಅನ್ನಾಹಾರಕ್ಕಾಗಿ ಪರದಾಡುತ್ತಿರುವಾಗ ಜಿಲ್ಲೆಯ ಹಿಂದುತ್ವವಾದಿಗಳಿಗೆ ಇನ್ನೂ ಪ್ರಜ್ಞೆ ಬಂದಿಲ್ಲ.

ಮತಾಂಧರಿಗೆ ಜಿಲ್ಲೆಯ ಮುಸ್ಲಿಮರನ್ನು ಕಂಡರೆ ಅದೇನೋ ಹೊಟ್ಟೆ ಉರಿ ಗೊತ್ತಾಗುತ್ತಿಲ್ಲ.
ಕೊರೋನದಿಂದ ಜನಜೀವನ ಅಸ್ತವ್ಯಸ್ತತಗೊಂಡು ದುಡಿಮೆ ಇಲ್ಲದೆ ಕಂಗಲಾಗಿರುವ ಈ ವಿಷಮ ಪರಿಸ್ಥಿತಿಯಲ್ಲಿ ಈಗಾಗಲೇ ಜಿಲ್ಲೆಯ ಮುಸ್ಲಿಂ ಉದಾರಿಗಳು ಎಲ್ಲಾ ವರ್ಗದ ಜನರನ್ನು ಹುಡುಕಿ ದಿನ ಬಳಕೆಯ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಿಸುತ್ತಿದ್ದಾರೆ.

ಅದು ಗುಣ ಧರ್ಮವೂ ಹೌದು.
“ನೆರೆ ಮನೆಯವ ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ” ಎಂಬ ಪ್ರವಾದಿ ಸಂದೇಶವನ್ನು ಸಾಕ್ಷಾತ್ಕರಿಸವವರೇ ನಿಜವಾದ ಮುಸ್ಲಿಮರು.
ಈ ವಿಷಮ ಪರಿಸ್ಥಿತಿಯಲ್ಲಿ ಶ್ರೀಮಂತ,ಮಧ್ಯಮವರ್ಗದ ಮುಸ್ಲಿಮರು ಜಾತಿ ಬೇಧ ಮರೆತು ಬಡವರಿಗೆ,ನಿರ್ಗತಿಕರಿಗೆ ಪ್ರಚಾರ ಬಯಸದೆ ಕಿಟ್ ವಿತರಿಸುವಾಗ ಅವರನ್ನು ತಡೆದು ನಿಲ್ಲಿಸಿ ಆವಾಜ್ ಹಾಕುವುದು,ಅವಾಚ್ಯ ಶಬ್ದದಿಂದ ಬೈಯ್ಯುವುದು ಮತ್ತು ಕೆಲವು ಕಡೆ ‘ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶವಿಲ್ಲ’ ಎಂಬ ಭಿತ್ತಿ ಪತ್ರ ಪ್ರದರ್ಶಿಸುವುದನ್ನು ಕಾಣುವಾಗ ಜಿಲ್ಲೆಯ ಹಿಂದುತ್ವವಾದಿಗಳಿಗೆ ಇನ್ನು ಸಾರ್ಸ್,ಪ್ಲೇಗ್,ನಿಫಾ ಮತ್ತು ಕೊರೋನ ಒಟ್ಟೊಟ್ಟಿಗೆ ಬಂದಿಳಿದರೂ ಇವರಂತೂ ಈ ಜನ್ಮದಲ್ಲಿ ಸರಿಯಾಗಲು ಸಾದ್ಯವೇ ಇಲ್ಲ ಎಂದು ಗೋಚರಿಸುತ್ತದೆ.
ಅಷ್ಟಕ್ಕೆ ಅವರಲ್ಲಿ ಧರ್ಮಾಂಧತೆಯ ವಿಷ ದೇಹದ ನರನಾಡಿಗಳನ್ನು ಪ್ರವೇಶಿಸಿ ಬಿಟ್ಟಿದೆ.

ಈ ಮೂಲಕ ಜಿಲ್ಲೆಯ ಮುಸ್ಲಿಮರೊಂದಿಗೆ ನಾನು ಹೇಳ ಬಯಸುವುದಿಷ್ಟೆ.
‘ಒಮ್ಮೆ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರವರು ನೀರಿನಲ್ಲಿ ಮುಳುಗುತ್ತಿದ್ದ ಚೇಳನ್ನು ಕೈಯಲ್ಲಿ ಎತ್ತಿ ದಡಕ್ಕೆ ಹಾಕುತ್ತಾರೆ,ಆದರೆ ಅದು ಪ್ರವಾದಿವರ್ಯರ ಕೈಗೆ ಕುಟುಕುತ್ತದೆ. ಪ್ರವಾದಿ ವರ್ಯರು ನೀರಲ್ಲಿ ಮುಳುಗಿದ ಚೇಳನ್ನು ಮತ್ತೆ ಅದೇ ರೀತಿ ಕೈ ಬೆರಳಿನಿಂದ ಎತ್ತಿ ದಡಕ್ಕೆ ಬಿಡುತ್ತಾರೆ.

ಇದನ್ನು ಕಂಡ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಶಿಷ್ಯಂದಿರು ಕೇಳುತ್ತಾರೆ.
ಪ್ರವಾದಿವರ್ಯರೇ,ಚೇಳು ತಮ್ಮ ಕೈಗೆ ಮತ್ತೆ ಮತ್ತೆ ಕುಟುಕುತ್ತಿದ್ದರೂ ತಾವ್ಯಾಕೆ ನೀರಿನಿಂದ ಎತ್ತಿ ದಡಕ್ಕೆ ಬಿಟ್ಟಿದ್ದೀರಿ.?
ಎಂದು ಕೇಳಿದಾಗ ಪ್ರವಾದಿ ಹೇಳಿದ್ದು ಕುಟುಕುವುದು ಚೇಳಿನ ಧರ್ಮ,ಅದನ್ನು ನೀರಿನಿಂದ ಎತ್ತಿ ದಡಕ್ಕೆ ಬಿಡಬೇಕಾಗಿರುವುದು ಮನುಷ್ಯ ಧರ್ಮ ಎಂದಾಗಿತ್ತು.’ ಹಿಂದುತ್ವವಾದಿಗಳು ಅವರು ಹಿಂದುಗಳಲ್ಲ,
ಅವರು ಮನುಷ್ಯ ರೂಪದ ಮೃಗೀಯರು.
ಹಿಂದೂಗಳು ನಮ್ಮ ಸಹೋದರರು, ಸಹೋದರ ಧರ್ಮದ ಗೆಳೆಯರು ಅವರು.
ಕಿರುಕುಳ,ದೌರ್ಜನ್ಯ ಮತ್ತು ದಬ್ಬಾಳಿಕೆ ಹಿಂದುತ್ವದ ಪ್ರಮುಖ ಅಜೆಂಡಗಳಲ್ಲಿ ಪ್ರಮುಖವಾದವುಗಳು.
ಹಿಂಸೆ ನಡೆಸುವುದು ಹಿಂದುತ್ವ ಧರ್ಮ. ನಾವು ಅದನ್ನು ಪ್ರೀತಿಯಿಂದ ಎದುರಿಸಬೇಕು.
ಸೇಡಿಗೆ ಸೇಡು ತೀರಿಸುವ ಹೇಡಿಗಳಂತಾಗ ಬಾರದು.

ದೇಶದ ಕಾನೂನು ಮತ್ತು ಧರ್ಮ ನಿಯಮದ ಚೌಕಟ್ಟಿನಲ್ಲಿ ನಾವು ನಮ್ಮ ಸೇವೆಯನ್ನು ಭಾರತದ ಕಟ್ಟ ಕಡೆಯ ಬಡ,ನಿರ್ಗತಿಕರಿಗೆ ತಲುಪುವವರೆಗೂ ಮಾಡುತ್ತಲೇ ಇರೋಣ.
ಹಿಂದುತ್ವ,ಅದು ಕೊರೋನ ವೈರಸ್‌ಗಿಂಲೂ ಅಪಾಯ.

error: Content is protected !! Not allowed copy content from janadhvani.com