janadhvani

Kannada Online News Paper

ಉನೈಸ್ ಸಖಾಫಿ ನರಿಮೊಗರು

ಕೊರೋನ ಮಹಾಮಾರಿಯ ನಂತರದಲ್ಲಿ ಮುಸ್ಲಿಂ ವಿರುದ್ಧ ದ್ವೇಷ ಪ್ರಚಾರ ಮತ್ತು ಇಸ್ಲಾಮೋಫೋಬಿಯಾ ಆಮೂಲಾಗ್ರವಾಗಿ ಬದಲಾಗಿದೆ. ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿ ಧ್ವನಿ ವರ್ಧಕದಲ್ಲಿ ಬಾಂಗ್ ಕರೆಯನ್ನು ನಿಷೇಧಿಸಲಾಗಿದ್ದ ಯುರೋಪ್ ದೇಶಗಳ ಅನೇಕ ಭಾಗಗಳಲ್ಲಿ ಕೋವಿಡ್ 19 ಉಂಟು ಮಾಡಿದ ಭiಯಾನಕತೆಯಲ್ಲಿ ಬಾಂಗ್ ಕರೆಗೆ ಅನುಮತಿಯನ್ನು ನೀಡಿಯಾಯಿತು.

ನೋವೆಲ್ ಕೊರೋನ ಇದರ ಕರಾಳ ಭಾಹುಗಳು ಜಾಗತಿಕವಾಗಿ ವ್ಯಾಪಿಸಿದ ನಂತರ, ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಪೈಪೋಟಿ, ಮತ್ತು ಸಂಘರ್ಷಗಳು, ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಮೋಫೋಬಿಯಾ ಕೊಂಚ ಮಟ್ಟಿಗೆ ಚೇತರಿಸಿ ಕೊಂಡಿದೆಯಾದರೂ, ದೇಶದ ಸಂಘಪರಿವಾರ ಅದರ ಕೋಮು ಅಜೆಂಡಾವನ್ನು ದೇಶಾದ್ಯಂತ ನಿರಂತರವಾಗಿ ನಡೆಸುತ್ತಿದೆ. ದುಬೈಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಧರ್ಮ ನಿಂದನೆ ನಡೆಸಿದ್ದಕ್ಕಾಗಿ ಕರ್ನಾಟಕದ ರಾಕೇಶ್ ಬಿ ಎಂಬಾತನನ್ನು ತನ್ನ ಕಂಪೆನಿಯಿಂದ ವಜಾಗೊಳಿಸಿದೆ ಮಾತ್ರವಲ್ಲದೆ ದುಬೈ ಪೊಲೀಸ್ ಕೇಸು ಕೂಡ ದಾಖಲಿಸಿದೆ.

ಕೊರೋನ ಹೆಸರಿನಲ್ಲಿ ಇಸ್ಲಾಂ ಮತ್ತು ಮುಸ್ಲಿಮರನ್ನು ಅತಿಯಾಗಿ ಅವಹೇಳಿಸುವ ಪೋಸ್ಟಾಗಿದೆ ‘ಎಮ್ರಿಲ್ ಸರ್ವಿಸಸ್’ ಕೆಲಸಗಾರನಾಗಿದ್ದ ರಾಕೇಶ್ ಸಾಮಾಜಿಕ ಮಾಧ್ಯಮಗಳ ಮೂಲಕ ಹರಿಯ ಬಿಟ್ಟದ್ದು.ಇದರ ‘ಸ್ಕ್ರೀನ್ ಶಾಟ್’ ಗಳು ವ್ಯಾಪಕವಾಗಿ ಹರಡಿತ್ತು. ವೈವಿಧ್ಯತೆಯನ್ನೊಳಗೊಂಡು ವಿವಿಧ ದೇಶ,ಮತ,ಭಾಷೆ ಮತ್ತು ಹಿನ್ನೆಲೆಯನ್ನು ಸ್ವಾಗತಿಸುವುದಾಗಿದೆ ನಮ್ಮ ಸಂಸ್ಥೆ. ದ್ವೇಷವನ್ನುಂಟು ಮಾಡುವ ಅಪರಾಧಗಳೊಂದಿಗೆ ನಮ್ಮ ಸಂಸ್ಥೆ ಒಮ್ಮೆಯೂ ಸಹಿಷ್ಣುತೆಯನ್ನು ತೋರುವುದಿಲ್ಲವೆಂದಾಗಿದೆ ಆತನನ್ನು ಕೆಲಸದಿಂದ ತೆಗೆದು ಹಾಕಿದ ಕಂಪನಿಯ ಸಿ. ಇ. ಒ ಸ್ಟುವಾಲ್ಟ್ ಹಾರಿಸ್ ಹೇಳಿದ್ದು.

ಫೇಸ್‌ಬುಕ್ ಪೇಜ್ ನಲ್ಲಿ ಇಸ್ಲಾಮನ್ನು ಪರಿಹಾಸ್ಯಗೈಯ್ಯುವ ಕಾರ್ಟೂನ್ ಪೋಸ್ಟ್ ಮಾಡಿದ್ದಕ್ಕಾಗಿ, ಒಂದು ವಾರ ಮುಂಚೆ ಅಬೂದಾಬಿಯಲ್ಲಿ ವಾಸಿಸುವ ಮಿತೇಶ್ ಕೂಡ ಸಂಸ್ಥೆಯನ್ನು ತೊರೆಯ ಬೇಕಾಯಿತು.ದುಬೈ ‘ಫ್ಯೂಚರ್ ವಿಶನ್ ಇವೆಂಟ್ಸ್ ಆಂಡ್ ವೆಡ್ಡಿಂಗ್ಸ್’ ನಲ್ಲಿ ಕೆಲಸ ಮಾಡುತ್ತಿದ್ದ ಷಮೀರ್ ಭಂಡಾರಿ ಇತ್ತೀಚೆಗೆ ಸಹೋದ್ಯೋಗಿಯನ್ನು ಧಾರ್ಮಿಕ ಆಧಾರದ ಮೇಲೆ ಪಾಕಿಸ್ತಾನಕ್ಕೆ ಹೋಗುವಂತೆ ಹೇಳದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಯು. ಎ. ಇ ಯಲ್ಲಿ ಧರ್ಮ ನಿಂದನೆಯ ವಿರುದ್ಧ ಕಠಿಣ ಕಾನೂನುಗಳು ಇದ್ದು, ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಕೇಸರಿ ಉಗ್ರರು ಮಾಡುವ ಧರ್ಮ ನಿಂದನೆಯ ಬಗ್ಗೆ ಅಧಿಕಾರಿಗಳಿಗೆ ದೂರುಗಳು ಬರುತ್ತಿದ್ದು,ನ್ಯಾಯಾಲಯಗಳು ಶಿಕ್ಷೆಯನ್ನು ಕೂಡ ವಿಧಿಸುತ್ತಿದೆ.
ಅದಾಗ್ಯೂ ತಮಗೆ ಕೆಲಸ ಮಾಡಲು ಅವಕಾಶವನ್ನು ನೀಡಿದ ಸರ್ಕಾರದೊಂದಿಗೆ ಒಂದಿಷ್ಟು ನಿಷ್ಠೆಯನ್ನೂ ತೋರಿಸದ ಇವರು ರಾಷ್ಟ್ರೀಯ ಕಾನೂನುಗಳ ಹೊರತಾಗಿಯೂ ಮುಸ್ಲಿಂ ವಿರೋಧಿ ಮತ್ತು ಅವಹೇಳನಕಾರಿ ಪ್ರಚಾರವನ್ನು ಮುಂದುವರಿಸುತ್ತಿದ್ದಾರೆ.

ಈ ಲಾಕ್ ಡೌನ್ ಸಮಯದಲ್ಲಿ ಕೇಸರಿಗಳ ಇಂತಹ ಚಟುವಟಿಕೆಗಳು ಭಾರತದಲ್ಲಿ ವ್ಯಾಪಕವಾಗಿ ಹರಡಿದೆ. ಕೊರೋನ ಹರಡುತ್ತಿದ್ದಾರೆ ಎಂದು ಆರೋಪಿಸಿ ದೆಹಲಿಯ ಬವಾನಾ ಪ್ರದೇಶದಲ್ಲಿ ಹಾಗೂ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಕೇಸರಿ ಗೂಂಡಾಗಳು ಗುಂಪು ಸೇರಿಕೊಂಡು ಮುಸ್ಲಿಮರನ್ನು ಥಳಿಸುವ ವಾರ್ತೆಗಳು ಫೋಟೋ ಸಹಿತ ಮಾದ್ಯಮಗಳಲ್ಲಿ ಬಂದಿದೆ. ಮೂರು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಬಿದರಿ ಗ್ರಾಮದಲ್ಲಿ ಹದಿನೈದು ಕೇಸರಿ ಉಗ್ರರು ಇಬ್ಬರು ಮುಸ್ಲಿಮರ ಮೇಲೆ ದೊಣ್ಣೆ ಮತ್ತು ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿದ್ದರು. ಲಾಕ್ ಡೌನ್ ನಿಂದಾಗಿ ಅನ್ನ ಆಹಾರವಿಲ್ಲದೆ ಪರದಾಡುತ್ತಿರುವವರಿಗೆ ಆಹಾರ ನೀಡಲು ಆ ಇಬ್ಬರು ಹೊರಟಿದ್ದರಾದರೂ ‘ಕೋಮು ಭಂಗಿ’ಕುಡಿದ ಮತ್ತಿನಲ್ಲಿದ್ದ ಆ ಕೇಸರಿಗಳು ಅವರನ್ನು ಸುಮ್ಮನೆ ಬಿಡಲಿಲ್ಲ.

ತಬ್ಲೀಗ್ ಹೆಸರಿನಲ್ಲಿ ತಬ್ಲೀಗ್ ನೊಂದಿಗೆ ಯಾವುದೇ ರೀತಿಯ ಸಂಬಂಧವಿಲ್ಲದ ಅನೇಕ ಮುಸ್ಲಿಮರಿಗೆ ದೇಶದ ಹಲವು ಭಾಗಗಳಲ್ಲಿ ದಾಳಿಗಳು ನಡೆಯುತ್ತಿದೆ. ಪಂಜಾಬಿನ ಹೋಶಿಯೋಪುರದಲ್ಲಿ ಎಂಟು ಮುಸ್ಲಿಂ ಕುಟುಂಬಗಳನ್ನು ರೋಗ ಹರಡುತ್ತಿದ್ದಾರೆಂದು ಆರೋಪಿಸಿ ಮುಸ್ಲಿಂ ವಿರೋಧಿ ಗುಂಪುಗಳು ಅವರ ಮನೆಯಿಂದ ಓಡಿಸಿದ್ದಾಗಿ ‘ದಿ ವೈರ್’ ಪತ್ರಿಕೆ ವರದಿ ಮಾಡಿದೆ. ಸಂಘಿಗಳ ಹಿಂಸಾಚಾರದ ಭಯದಿಂದ ಮನೆ ಬಿಟ್ಟು ಓಡಿ ಹೋದ ಮಹಿಳೆಯರು ಮತ್ತು ಮಕ್ಕಳನ್ನೊಳಗೊಂಡ ಈ ಕುಟುಂಬವು ಸ್ಯಾನ್ ನದಿಯ ದಂಡೆಯಲ್ಲಾಗಿದೆ ಆಶ್ರಯ ಪಡೆದದ್ದು.

ಕೊರೋನ ಮಹಾಮಾರಿಯ ನಂತರದಲ್ಲಿ ಮುಸ್ಲಿಂ ವಿರುದ್ಧ ದ್ವೇಷ ಪ್ರಚಾರ ಮತ್ತು ಇಸ್ಲಾಮೋಫೋಬಿಯಾ ಆಮೂಲಾಗ್ರವಾಗಿ ಬದಲಾಗಿದೆ. ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿ ಧ್ವನಿ ವರ್ಧಕದಲ್ಲಿ ಬಾಂಗ್ ಕರೆಯನ್ನು ನಿಷೇಧಿಸಲಾಗಿದ್ದ ಯುರೋಪ್ ದೇಶಗಳ ಅನೇಕ ಭಾಗಗಳಲ್ಲಿ ಕೋವಿಡ್ 19 ಉಂಟು ಮಾಡಿದ ಭಯಾನಕತೆಯಲ್ಲಿ ಬಾಂಗ್ ಕರೆಗೆ ಅನುಮತಿಯನ್ನು ನೀಡಿಯಾಯಿತು. ಇತಿಹಾಸದಲ್ಲಿ ಮೊದಲ ಬಾರಿಗೆ ಜಾಗತಿಕ ದೈತ್ಯ ಮಾದ್ಯಮ ಬಿ. ಬಿ. ಸಿ ಶುಕ್ರವಾರದ ಮುಸ್ಲಿಂ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ನಿರ್ಧರಿಸಿದೆ. ಖುರ್ಆನ್, ಹದೀಸ್ ವಚನಗಳು, ಮತ್ತು ವಿದ್ವಾಂಸರ ಭಾಷಣಗಳನ್ನಾಗಿದೆ ಅದು ಬಿತ್ತರಿಸುವುದು. ಈ ರೀತಿಯಲ್ಲಿ ಸಾಂಕ್ರಾಮಿಕ ಮಹಾಮಾರಿಯು ಜಾಗತಿಕವಾಗಿ ಜನರಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಸಹಿಷ್ಣುತೆಯ ಹೊಸ ಅಧ್ಯಾಯವನ್ನು ತೆರೆದಿಡುವಾಗ, ಭಾರತದ ಸಂಘಪರಿವಾರಕ್ಕೆ ಮಾತ್ರ ಇನ್ನೂ ಯಾವುದೇ ಬದಲಾವಣೆ ಕಾಣುತ್ತಿಲ್ಲ!. ಅಷ್ಟೊ ತೀವ್ರ ಮತ್ತು ಕಠಿಣವಾಗಿದೆ ಅವರ ಹಗೆತನ.

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಬುಲಂದ್ ಶಹರಿನಿಂದ ವರದಿಯಾದ ಘಟನೆಯು ಇಂತಹ ಜನರಿಗೆ ಮಾರ್ಗದರ್ಶಿಯಾಗ ಬೇಕು. ಅಲ್ಲಿ ರವಿ ಶಂಕರ್ ಎಂಬ ಗ್ರಾಮೀಣ ವ್ಯಕ್ತಿ ಸಾವನ್ನಪ್ಪಿದಾಗ ಆತನ ಸಂಬಂದಿಕರು ಮತ್ತು ಸ್ಥಳೀಯರು ಕೋವಿಡ್ ಸೋಂಕಿನ ಭಯದಿಂದ ಆತನ ಮನೆಗೆ ಬರಲು ನಿರಾಕರಿಸಿದಾಗ ಆ ಪ್ರದೇಶದ ಮುಸ್ಲಿಮರಾಗಿದ್ದರು ಆತನ ಶವ ಸಂಸ್ಕಾರದ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು.

ರವಿಶಂಕರ್ ಅವರ ಮಗ ತನ್ನ ತಂದೆಯ ದೇಹವನ್ನು ಸಮಾಧಿ ಮಾಡಲು ಸಹಾಯ ಮಾಡುವಂತೆ ಸಂಬಂದಿಕರು ಮತ್ತು ನೆರೆಕರೆಯವರಲ್ಲಿ ಅಂಗಲಾಚಿ ಬೇಡಿಕೊಂಡರೂ ಅವರಾರೂ ತಿರುಗಿ ನೋಡಲೇ ಇಲ್ಲ. ಈ ಹಂತದಲ್ಲಿ ಅಲ್ಲಿಯ ಸುತ್ತಮುತ್ತಲಿನ ಮುಸ್ಲಿಮರು ಆ ಕಾರ್ಯವನ್ನು ನಿರ್ವಹಿಸಲು ಮುಂದೆ ಬಂದರು. ಬಹುಶಃ ಆ ಸಮಯದಲ್ಲೂ ಸಂಘ ಪರಿವಾರದ ಸೈಬರ್ ವೀರರು ಹೊಸ ದ್ವೇಷ ಅಭಿಮಾನ ಮತ್ತು ಚಟುವಟಿಕೆಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿರ ಬೇಕು.

error: Content is protected !! Not allowed copy content from janadhvani.com