ಕೋರೋಣ ಸೋಂಕು ವಿಷಯದಲ್ಲಿ ದೇಶದ ದೃಶ್ಯ ಮಾಧ್ಯಮಗಳು ತಬ್ಲೀಗ್ ಸಂಘಟನೆಯ ನೆಪವೊಡ್ಡಿ ದೇಶದ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯ ವ ನ್ನು ಗುರಿಯಾಗಿಸಿ ಪೂರ್ವಗ್ರಹ ಪೀಡಿತ ವಾಗಿ ಅವಹೇಳನ ಗೊಳಿ ಸಿ ಸೋಂಕು ಹರಡುವಿಕೆ ಗೆ ಮುಸ್ಲಿಂ ಸಮುದಾಯ ವೆ ಕಾರಣವೆಂಬಂತೆ ಹತ್ತು ಹಲವು ಸುಳ್ಳು ಸುದ್ದಿ , ದೃಶ್ಯಗಳನ್ನು ಪ್ರದರ್ಶಿಸಿ,ಪ್ರಕಟಿಸಿ ಇಂದು ಮುಸ್ಲಿಮೇತರ ಸಮುದಾಯ ಮುಸ್ಲಿಂ ಜನರನ್ನು ಸಂಶಯದಿಂದ ದೃಷ್ಟಿ ಸುವಂತಹ ವಾತಾವರಣವನ್ನು ಸೃಷ್ಟಿಸಿದ ಕೆಲವು ಮಾಧ್ಯಮ ಗಳ ಬಿತ್ತರಿಕೆಯಿಂದಾಗಿ ದೇಶದ, ರಾಜ್ಯದ ಮತ್ತು ಜಿಲ್ಲೆಯ ವಿವಿಧೆಡೆ ದುಷ್ಕರ್ಮಿಗಳು ಮುಸ್ಲಿಮ್ ಸಮುದಾಯದ ಜನರ ಚಲನೆ,ವ್ಯವಹಾರ, ಸಂವಹನ ಕ್ಕೇ ತಡೆಯೊಡ್ಡು ವುದು ಮುಸ್ಲಿಮರ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕುವುದು, ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನ ಕಾರಿ ಮತ್ತು ನಿಂದನಾತ್ಮಕ ಬರಹಗಳು ಮತ್ತು ಪೋಸ್ಟ್ ಗಳನ್ನು ಪ್ರಕಟಿಸುವುದು ಕಂಡು ಬರುತ್ತಿದೆ.
ಕೋರೋಣ ಸೋಂಕು ನಿಯಂತ್ರಣಕ್ಕಾಗಿ ಮುಸ್ಲಿಮರು ಇಂದು ಜಾಗತಿಕ ವಾಗಿ , ದೇಶೀಯವಾಗಿ ಮತ್ತು ಸ್ಥಳೀಯವಾಗಿ ತಮ್ಮ ಜೀವನದಲ್ಲಿ ಎಂದೂ ಕೂಡ ಮಸೀದಿ ಆಧಾರಿತ ಸಾಮೂಹಿಕ ನಮಾಝ್ ಪ್ರಕ್ರಿಯೆ ಯನ್ನೂ ನಿಲುಗಡೆ ಗೊಳಿಸ ಲು ರಾಜಿ ಹೊಂದ ದ ಮನಸ್ಥಿತಿಯಿಂದ ಹೊರಬಂದು ದೇಶದ ಸರ್ವತೋಮುಖ ಆರೋಗ್ಯದ ದೃಷ್ಟಿಯಿಂದ ಅನುಷ್ಠಾನ ಗೊಂಡ ಲಾಕ್ ಡೌನ್ ನು ಗೌರವಿಸಿ ಇಂದು ಸರ್ವರೂ ಜಮಾತ್ ಮತ್ತು ಜುಮ್ಮಾ ನಮಾಝ್ ಪ್ರಕ್ರಿಯೆ ಯ ನ್ನೂ ನಿಲುಗಡೆ ಗೊಲಿಸಿ ಕೋರೋಣ ಸೋಂಕು ನಿಯಂತ್ರಣಕ್ಕೆ ಸರ್ವ ತೋಮುಖ ವಾಗಿ ಸಹಕರಿಸುತ್ತಿದ್ದಾರೆ.
ಈ ಬಗ್ಗೆ ಈ ಹಿಂದೆ ಈ ರಾಜ್ಯ ದ ಮುಖ್ಯ ಮಂತ್ರಿಗಳಾದ ಶ್ರೀ ಬೀ. ಎಸ್. ಯಡಿಯೂರಪ್ಪ ರವರು ಶ್ಲಾಘಿಸಿ ಹೇಳಿಕೆ ಕೂಡ ನೀಡಿರುತ್ತಾರೆ. ಆದರೂ ಕೆಲವು ದುಷ್ಕರ್ಮಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಮುಸ್ಲಿಮ್ ಸಮುದಾಯವನ್ನು ನಿಂದಿಸುವ ಪ್ರಕ್ರಿಯೆ ಮುಂದುವರಿದಿರುವುದು ಖೇದಕರ.
ಇಂದು ಸನ್ಮಾನ್ಯ ಮುಖ್ಯಮಂತ್ರಿ ಯಾವ ಶ್ರೀ ಬೀ.ಎಸ್. ಯಡಿಯೂರಪ್ಪ ನವರು ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಕುರಿತು ಹೇಳಿಕೆ ನೀಡಿ ರುತ್ತಾರೆ. ಈ ಬಗ್ಗೆ ಸ್ವಾಗತವಿದೆ ಮತ್ತು ಮುಂದಿನ ದಿನಗಳಲ್ಲಿ ದುಷ್ಕರ್ಮಿ ಗಳು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಪೂರ್ವಗ್ರಹ ಬರಹ, ಪೊಸ್ಟ್ ಪ್ರಕಟಣೆ ಮತ್ತು ಸಾಮಾಜಿಕ ಬಹಿಷ್ಕಾರ ದಂತಹ ಕೃತ್ಯಗಳಿಗೆ ಕಡಿವಾಣ ಸೃಷ್ಟಿಯಾ ಗ ಬಹುದೆಂದು ನಂಬುತ್ತೇವೆ.
ಕೆ.ಅಶ್ರಫ್
(ಮಾಜಿ ಮೇಯರ್)
ಅಧ್ಯಕ್ಷ ರು
ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ