janadhvani

Kannada Online News Paper

ಕೊರೋನ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಒಮಾನ್ ಸರಕಾರದ ಆದೇಶವನ್ನು ಪಾಲಿಸಿ ಕೆಸಿಎಫ್ ಒಮಾನ್

ಕೋವಿಡ್ – 19 ಕೊರೋನ ವೈರಸ್ ಎಂಬ ಮಾರಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅತೀವ ಜಾಗ್ರತೆಯಿಂದ ಇರಬೇಕೆಂದು ಹಾಗೂ
ಕೊರೋಣ ವೈರಸ್ ಭೀತಿಯಿಂದ ಒಮಾನ್ ಸರಕಾರ ಹೊರಡಿಸಿದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ಹಾಗೂ
ಅವರವರ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್ ಅಧ್ಯಕ್ಷ ರಾದ ಜನಾಬ್ ಅಯ್ಯೂಬ್ ಕೋಡಿ ಅವರು ಕೆಸಿಎಫ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಆದ್ದರಿಂದ ಅವರವರ ಮನೆಯಲ್ಲಿ ಕಡ್ಡಾಯ ನಮಾಜನ್ನು ನಿರ್ವಹಿಸಿ, ಕುರ್ ಆನ್ ಪಠಿಸಿ, ಸಾಧ್ಯವಾದಷ್ಟು ಇಸ್ತಿಗ್ ಫಾರ್‌, ಝಿಕ್ರ್ , ಸ್ವಲಾತ್ ನಲ್ಲಿ ತಲ್ಲೀನರಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಬೇಕಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

error: Content is protected !! Not allowed copy content from janadhvani.com