janadhvani

Kannada Online News Paper

ಕೊರೋನಾ ವೈರಸ್ ಬೀರುತ್ತಿರುವ ದುಷ್ಪರಿಣಾಮಗಳಿಂದಾಗಿ ಇಂದು ಇಡೀ ಜಗತ್ತೇ ಭಯಭೀತಿಯಲ್ಲಿದೆ.
ನಮ್ಮ ದೇಶವೂ ಒಳಗೊಂಡಂತೆ ಇಡೀ ಜಗತ್ತಿನಲ್ಲೇ ಇಂದು ಬಂದ್ ಘೋಷಿಸಲಾಗಿದೆ. ಭಾರತ ಸರ್ಕಾರ ಮುಂದಿನ ಎಪ್ರಿಲ್ 15ರ ವರೆಗೆ ಮನೆಗಳಿಂದ ಯಾರೂ ಕದಲದಂತೆ ಆದೇಶವನ್ನೂ ಹೊರಡಿಸಿದೆ.

ನಮ್ಮ ಖಾಝಿಗಳು,ಉಲಮಾಗಳು ಕೂಡ ಈ ವಿಷಯದಲ್ಲಿ ಅತ್ಯಂತ ಪ್ರಬುದ್ಧತೆಯೊಂದಿಗೆ ಸಮುದಾಯಕ್ಕೆ ಮಾರ್ಗದರ್ಶನ ನೀಡಿದ್ದಾರೆ.
ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಸಮಿತಿಯು ಖಾಝಿ ಪಿ.ಎಮ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಉಸ್ತಾದರ ನಿರ್ದೇಶನದಂತೆ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ .

ಕೊರೋನ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಆದೇಶವನ್ನು ಪಾಲಿಸುವಂತೆಯೂ ಮಸೀದಿಗಳಲ್ಲಿ ಐದು ಹೊತ್ತಿನ ನಮಾಝ್ ಮನೆಗಳಲ್ಲೇ ನಿರ್ವಹಿಸುವಂತೆಯೂ ಶುಕ್ರವಾರ ಜುಮುಅ ನಮಾಝ್ ನ ಬದಲು ಮನೆಯಲ್ಲಿ 4 ರಕಅತ್ ಲುಹರ್ ನಮಾಝ್ ನಿರ್ವಹಿಸಬೇಕಾಗಿಯೂ ಕೋರಲಾಗಿದೆ.

ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಒಟ್ಟು ಸೇರುವ ಯಾವುದೇ ಕಾರ್ಯಗಳನ್ನು ಮಾಡಬಾರದಾಗಿ ವಿನಂತಿಸಿದೆ.

ತಮ್ಮತಮ್ಮ ಜಮಾಅತ್ ಗೆ ಒಳಪಟ್ಟ ಹಾಗೂ ಆಯಾ ಮೊಹಲ್ಲಾಗಳಲ್ಲಿ ಕಷ್ಟದಲ್ಲಿರುವ ಕುಟುಂಬಗಳನ್ನು ಅರಿತು ಅವರಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ವಿತರಿಸಲು ಮುಂದಾಗಬೇಕು.

ತಮ್ಮ ತಮ್ಮ ಮೊಹಲ್ಲಾಗಳಲ್ಲಿ ಔಷಧಿ ಮುಂತಾದ ತುರ್ತು ಅಗತ್ಯಗಳಿಗೆ ತಕ್ಷಣ ಸ್ಪಂದಿಸಬೇಕು.

ಜನರ ಆರೋಗ್ಯದ ಬೇಡಿಕೆಗಳು,ಸರ್ಕಾರದ ನಿರ್ದೇಶನಗಳು ಹಾಗೂ ಉಲಮಾಗಳ ಸಲಹೆಗಳನ್ನು ಸಂಪೂರ್ಣವಾಗಿ ತಪ್ಪದೆ ಪಾಲಿಸಬೇಕು.

ಈ ಸೇವೆಯಲ್ಲಿ ಜಾತಿ-ಮತ ನೋಡದೆ ಎಲ್ಲರಿಗೂ ಸಹಕರಿಸಬೇಕು.

✍ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ
ಸಂ.ಕಾರ್ಯದರ್ಶಿ ಜಿಲ್ಲಾ ಸಂಯುಕ್ತ ಜಮಾಅತ್.

error: Content is protected !! Not allowed copy content from janadhvani.com