janadhvani

Kannada Online News Paper

ನೆಲ್ಯಾಡಿ,ಮಾ.25: ಜಗತ್ತಿನಾದ್ಯಂತ ಕೋವಿಡ್ 19 ಕೊರೋನ ವೈರಸ್ ಮಾರಕವಾಗಿ ವ್ಯಾಪಿಸುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಪ್ರಿಲ್ 14ರ ವರೆಗೆ ಭಾರತಾದ್ಯಂತ 21ದಿನ ಲಾಕ್ ಡೌನ್ ಘೊಷಿಸಲಾಗಿದೆ.

ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ನೆಲ್ಯಾಡಿ ಸೆಕ್ಟರ್ ಸಾರ್ವಜನಿಕ ಸೇವೆಗಿಳಿದಿದೆ. ತುರ್ತು ವಾಹನ ಸೌಕರ್ಯ, ಆಹಾರ ಧಾನ್ಯ , ಔಷಧಿ ಸೌಲಭ್ಯ, ಕೊಂಡುಕೊಳ್ಳಲು ಸಾಧ್ಯವಿಲ್ಲದವರಿಗೆ ಧನ ಸಹಾಯ ಹಸ್ತ ನೀಡಲು ಸೇವೆಗೆ ತಂಡ ರಚಿಸಿ ಸನ್ನದ್ದವಾಗಿದೆ.

ನೆಲ್ಯಾಡಿ ಹಿದಾಯತ್ ನಗರ, ಹೊಸಮಜಲು, ಮಣ್ಣಗುಂಡಿ, ದೊಂತಿಲ, ಪಟ್ಟೆ, ಪಡುಬೆಟ್ಟು, ಕೊಕ್ಕಡ, ಪಟ್ಟೂರು, ಪಟ್ರಮೆ, ಮೊರಂಕಲ, ವಲಾಲು, ನೀರಕಟ್ಟೆ ವ್ಯಾಪ್ತಿಯಲ್ಲಿ ತಂಡ ರಚಿಸಲಾಗಿದೆ ಎಂದು ಸೆಕ್ಟರ್ ಅಧ್ಯಕ್ಷ ಶಾಹುಲ್ ಹಮೀದ್ ಸಖಾಫಿ, ಕಾರ್ಯದರ್ಶಿ ಇರ್ಶಾದ್ ಮಾಸ್ಟರ್ ಜನಧ್ವನಿಗೆ ತಿಳಿಸಿದ್ದಾರೆ.

9972454313/9980951265 ಎಂಬ ನಂಬರಿಗೆ ತುರ್ತ ಸಂದರ್ಭ ಕರೆ ಮಾಡಬಹುದೆಂದು ತಿಳಿಸಲಾಗಿದೆ.

error: Content is protected !!
%d bloggers like this: