janadhvani

Kannada Online News Paper

ಸೌದಿ ಅರೇಬಿಯಾಕೆ ಆಗಮಿಸುವ ಪ್ರಯಾಣಿಕರು ತಪ್ಪು ಮಾಹಿತಿ ನೀಡಿದ್ದಲ್ಲಿ ಕಠಿಣ ಕ್ರಮ

ರಿಯಾದ್: ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳಿಗೆ ಬರುವ ಪ್ರಯಾಣಿಕರು ತಮ್ಮ ಪ್ರಯಾಣದ ಮಾಹಿತಿಯನ್ನು ತಪ್ಪಾಗಿ ನೀಡಿದರೆ ಕಠಿಣ ದಂಡ ವಿಧಿಸಲಾಗುತ್ತದೆ. ಪ್ರಯಾಣಿಕರು ಒದಗಿಸಿದ ಮಾಹಿತಿಯು ಸುಳ್ಳು ಎಂದು ಕಂಡುಬಂದಲ್ಲಿ ಅವರಿಗೆ 5 ಲಕ್ಷ ರಿಯಾಲ್ ವರೆಗೆ ದಂಡ ವಿಧಿಸಲಾಗುವುದು ಎಂದು ಪಬ್ಲಿಕ್ ಪ್ರಾಸಿಕ್ಯೂಷನ್ ಹೇಳಿದೆ. ಕರೋನ ಹರಡುವಿಕೆಯನ್ನು ತಡೆಗಟ್ಟುವ ಭಾಗವಾಗಿ ಈ ಕ್ರಮ ಎನ್ನಲಾಗಿದೆ.

ಆರೋಗ್ಯ ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರವು ಅಂತರ್‌ರಾಷ್ಟ್ರೀಯ ವಿಮಾನಗಳಲ್ಲಿ ದೇಶಕ್ಕೆ ಬರುವ ಪ್ರಯಾಣಿಕರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ಈ ಹಂತದಲ್ಲಿ, ಪ್ರಯಾಣಿಕರು ಸುಳ್ಳು ಮಾಹಿತಿಯನ್ನು ನಮೂದಿಸುವುದು ಅಥವಾ ಮಾಹಿತಿ ನೀಡದಿರುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಮಾಹಿತಿಯನ್ನು ಪ್ರಯಾಣದ ಆರಂಭದಲ್ಲಿಯೇ ವಿಮಾನಯಾನ ಅಧಿಕಾರಿಗಳಿಗೆ ರವಾನಿಸಬೇಕು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.

ಅನಾರೋಗ್ಯದಿಂದ ಬಳಲುತ್ತಿರುವವರನ್ನು ಪ್ರಾಸಿಕ್ಯೂಷನ್ ಕ್ರಮಕ್ಕೆ ಒಳಪಡಿಸಲಾಗುತ್ತದೆ. ಸಾರ್ವಜನಿಕ ಅಭಿಯೋಜನೆಯ ಪ್ರಕಾರ 5 ಲಕ್ಷ ಲಿಯಾಲ್ ಗಳವರೆಗೆ ದಂಡ ವಿಧಿಸಬಹುದು. ಕೋವಿಡ್ 19 ದೃಢಪಡಿಸಿದ ದೇಶಗಳ ಮೂಲಕ ಸೌದಿಗೆ ಆಗಮಿಸುವವರು ಮಾಹಿತಿಯನ್ನು ನೀಡಬೇಕು ಮತ್ತು ದೇಶದ ಭದ್ರತೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರರು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.

error: Content is protected !! Not allowed copy content from janadhvani.com