janadhvani

Kannada Online News Paper

ಹತ್ತು ವರ್ಷಕ್ಕಿಂತ ಮೇಲ್ಪಟ್ಟ ವಲಸಿಗ ಮಕ್ಕಳಿಗೆ ರೆಸಿಡೆಂಟ್ ಕಾರ್ಡ್ ಕಡ್ಡಾಯ

ವಿವಿಧ ಕಾರಣಗಳಿಂದ 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ರೆಸಿಡೆಂಟ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಸ್ಕತ್: ಒಮಾನ್‌ನಲ್ಲಿ ಹತ್ತು ವರ್ಷಕ್ಕಿಂತ ಮೇಲ್ಪಟ್ಟ ವಲಸಿಗ ಮಕ್ಕಳಿಗೆ ರೆಸಿಡೆಂಟ್ ಕಾರ್ಡ್ ಕಡ್ಡಾಯವಾಗಿದೆ ಎಂದು ರಾಯಲ್ ಒಮಾನ್ ಪೊಲೀಸರು ಘೋಷಿಸಿದ್ದಾರೆ. ರೆಸಿಡೆಂಟ್ ಕಾರ್ಡ್ ತೆಗೆದುಕೊಳ್ಳದಿದ್ದರೆ ಪೋಷಕರಿಗೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಮಾನ್‌ನಲ್ಲಿ ನೆಲೆಸಿರುವ ಪ್ರತಿಯೊಬ್ಬ ವಲಸಿಗರು ದೇಶಕ್ಕೆ ಆಗಮಿಸಿದ 30 ದಿನಗಳೊಳಗೆ ರೆಸಿಡೆಂಟ್ ಕಾರ್ಡ್ ಅನ್ನು ಪಡೆಯಬೇಕು. ಇದು 10 ವರ್ಷಕ್ಕಿಂತ ಮೇಲ್ಪಟ್ಟ ಅನಿವಾಸಿ ಮಕ್ಕಳಿಗೂ ಅನ್ವಯಿಸುತ್ತದೆ. ಪ್ರತಿ ತಿಂಗಳ ವಿಳಂಬಕ್ಕೆ ಹತ್ತು ರಿಯಾಲ್‌ಗಳ ದಂಡವನ್ನು ವಿಧಿಸಲಾಗುತ್ತದೆ.

ಒರ್ಜಿನಲ್ ಪಾಸ್‌ಪೋರ್ಟ್, ಉದ್ಯೋಗ ಕಂಪನಿಯಿಂದ ಪತ್ರ, ವೈದ್ಯಕೀಯ ಪರೀಕ್ಷೆಯ ನಂತರ ಕಾರ್ಮಿಕ ಸಚಿವಾಲಯದ ಫಾರ್ಮ್‌ನ ಮೂಲ ಮತ್ತು ಪೋಟೋಕಾಪಿಗಳೊಂದಿಗೆ ವಿದೇಶೀ ಇಲಾಖೆಗೆ ಭೇಟಿ ನೀಡುವ ಮೂಲಕ ಹೊಸ ರೆಸಿಡೆಂಟ್ ಕಾರ್ಡ್ ಅನ್ನು ಪಡೆಯಬಹುದು.

ನಿಗದಿತ ಅವಧಿಯೊಳಗೆ ರೆಸಿಡೆಂಟ್ ಕಾರ್ಡ್‌ಗಳನ್ನು ಪಡೆಯದ ಮಕ್ಕಳಿಗೂ ದಂಡ ಅನ್ವಯಿಸುತ್ತದೆ. ವಿವಿಧ ಕಾರಣಗಳಿಂದ 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ರೆಸಿಡೆಂಟ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೆಸಿಡೆಂಟ್ ಕಾರ್ಡ್ ಹೊಂದಿರುವುದು ವಿಮಾನ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಪ್ರಕ್ರಿಯೆಗಳನ್ನು ಸುಲಭಗೊಳಿಸುತ್ತದೆ. ಒಮಾನ್‌ನಲ್ಲಿ ಎಲ್ಲಾ ಇತರ ಅಧಿಕೃತ ಉದ್ದೇಶಗಳಿಗಾಗಿ ರೆಸಿಡೆಂಟ್ ಕಾರ್ಡ್ ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com