janadhvani

Kannada Online News Paper

ರಿಯಾದ್: ಸೌದಿ ಅರೇಬಿಯಾದಲ್ಲಿ ಕೊರೋನಾ ವೈರಸ್ ಕೋವಿಡ್ 19 ಗೆ ಸಂಬಂಧಪಟ್ಟ ಮತ್ತೊಂದು ಪ್ರಕರಣಗಳು ಪತ್ತೆಯಾಗಿದೆ. ಇರಾನ್‌ನಿಂದ ಬಹ್ರೈನ್ ಮೂಲಕ ಬಂದ ವ್ಯಕ್ತಿಗೆ ಕೊರೋನ ದೃಢಪಟ್ಟಿದೆ. ಮೊದಲ ಕರೋನಾ ದೃಢೀಕರಿಸಿದ ವ್ಯಕ್ತಿ ಮತ್ತು ಇದೀಗ ಪತ್ತೆಹಚ್ಚಿದ ವ್ಯಕ್ತಿ ಒಟ್ಟಿಗೆ ಸೌದಿಗೆ ಬಂದಿದ್ದರು ಎನ್ನಲಾಗಿದೆ.

ಇರಾನ್‌ನಿಂದ ಬಂದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸದೆ ಇಬ್ಬರೂ ಸೌದಿ ಪ್ರವೇಶಿಸಿದ್ದರು. ಈ ಮೊದಲು ಮೊದಲ ಕರೋನಾ ದೃಢೀಕರಿಸಿದ ವ್ಯಕ್ತಿಯ ಸಂಪರ್ಕ ಹೊಂದಿದ್ದ 70 ಜನರಲ್ಲಿ 51 ಜನರು ನಕಾರಾತ್ಮಕ ಫಲಿತಾಂಶಗಳನ್ನು ಹೊಂದಿದ್ದರು. ಹೊಸ ಕರೋನ ದೃಢೀಕರಣದೊಂದಿಗೆ ದೇಶವು ಇನ್ನಷ್ಟು ಎಚ್ಚರ ವಹಿಸಿದೆ.

ಏತನ್ಮಧ್ಯೆ, ಕೋವಿಡ್ 19 ಪ್ರತಿರೋಧದ ಭಾಗವಾಗಿ ದೇಶೀಯ ಯಾತ್ರಿಕರನ್ನು ಕೂಡ ಮಕ್ಕಾ ಪ್ರವೇಶಿಸುವುದನ್ನು ಗೃಹ ಸಚಿವಾಲಯ ನಿಷೇಧಿಸಿದೆ. ಕಳೆದ ವಾರದಿಂದ ದೇಶದ ಹೊರಗಿನ ಉಮ್ರಾ ಯಾತ್ರಿಕರಿಗೆ ಮಕ್ಕಾ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇದರೊಂದಿಗೆ, ವಿದೇಶಿಯರು ಮತ್ತು ಸ್ಥಳೀಯರು ಉಮ್ರಾಕಾಗಿ ಮಕ್ಕಾ ಮತ್ತು ಸಂದರ್ಶನಕ್ಕಾಗಿ ಮದೀನಾಕ್ಕೆ ತೆರಳುವುದು ಸಾಧ್ಯವಿಲ್ಲ. ಅದೇ ಸಮಯದಲ್ಲಿ, ಮಕ್ಕಾ ಮತ್ತು ಮದೀನಾ ನಿವಾಸಿಗಳಿಗೆ ಯಾವುದೇ ಅಡೆತಡೆಗಳು ಇರುವುದಿಲ್ಲ.ಗೃಹ ಸಚಿವಾಲಯವು ನಿಯಂತ್ರಣದ ಕುರಿತು ಹೇಳಿಕೆ ನೀಡಿದೆ.

ಜುಮಾ ನಮಾಝಿಗಾಗಿ ಲಕ್ಷಗಟ್ಟಲೆ ಜನರು ಭಾಗವಹಿಸುವ ಮಸೀದಿಗಳ ಪ್ರವೇಶವನ್ನು ಕೋವಿಡ್ ಅನ್ನು ಪ್ರತಿರೋಧಿಸುವ ಭಾಗವಾಗಿ ನಿರ್ಬಂಧಿಸಲಾಗಿದೆ. ಆದಾಗ್ಯೂ, ಎಷ್ಟು ದಿನಗಳವರೆಗೆ ಈ ನಿಷೇಧ ಮುಂದುವರಿಯಲಿದೆ ಎಂಬುದನ್ನು ನಿರ್ದಿಷ್ಟಪಡಿಸಲಾಗಿಲ್ಲ. ನಿರೀಕ್ಷಿತ ಕಾಲದ ಬಳಿಕ ನಿಯಂತ್ರಣವನ್ನು ತೆಗೆದುಹಾಕಲಾಗುವುದು ಎಂದು ಗೃಹ ಸಚಿವಾಲಯ ಹೇಳಿದೆ.

ಮಕ್ಕಾ ಮತ್ತು ಮದೀನಾದಲ್ಲಿ ಪ್ರಸ್ತುತ 2 ಲಕ್ಷಕ್ಕೂ ಹೆಚ್ಚು ಯಾತ್ರಿಕರಿದ್ದಾರೆ. ಅವರು ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸಿ ಹಿಂತಿರುಗಬಹುದು. ಅದೇ ಸಮಯದಲ್ಲಿ ಹೊಸತಾಗಿ ಯಾವುದೇ ವ್ಯಕ್ತಿಗೆ ಅನುಮತಿ ನೀಡಲಾಗುವುದಿಲ್ಲ.

error: Content is protected !!
%d bloggers like this: