janadhvani

Kannada Online News Paper

ಕುವೈತ್‌ ಸಿಟಿ: ಈಜಿಪ್ಟ್ ನಾಗರಿಕರಿಗೆ ವೀಸಾ ವಿತರಣೆಯನ್ನು ಕುವೈತ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಗೃಹ ವ್ಯವಹಾರ ಇಲಾಖೆ ಪಾಸ್‌ಪೋರ್ಟ್ ಕಚೇರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಿದೆ.

ವಲಸಿಗರ ಕುಟುಂಬಗಳು, ಉದ್ಯಮಿಗಳು ಮತ್ತು ಪ್ರವಾಸಿಗರ ವೀಸಾಗಳಿಗೆ ಈ ನಿರ್ಬಂಧ ಅನ್ವಯಿಸುತ್ತದೆ. ವಸತಿ ಇಲಾಖೆಯು ದೇಶದ ಎಲ್ಲಾ ಜವಾಝಾತ್‌ಗಳಿಗೆ ವಿಸಿಟ್ ವೀಸಾ ನಿಯಂತ್ರಣ ಕುರಿತು ಸುತ್ತೋಲೆ ಕಳುಹಿಸಿದ್ದು, ಮಾರ್ಚ್ 1 ರಿಂದ ಈ ನಿಯಂತ್ರಣ ಜಾರಿಗೆ ಬಂದಿದೆ. ಅದಕ್ಕೂ ಮೊದಲು, ವೀಸಾ ಹೊಂದಿರುವವರು ದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿಲ್ಲ. ಆದಾಗ್ಯೂ, ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಪರಿಶೋಧನೆ ನಂತರ ಮಾತ್ರ ಅವರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಅವಧಿ ಮುಗಿಸಿ ಈಜಿಪ್ಟ್ ಮತ್ತು ಸಿರಿಯಾದಿಂದ ಆಗಮಿಸುವವರನ್ನು ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಲಾಗುತ್ತಿದೆ. ಈ ಹಿಂದೆ ಇರಾನ್, ಚೀನಾ, ಥೈಲ್ಯಾಂಡ್, ದಕ್ಷಿಣ ಕೊರಿಯಾ, ಇರಾಕ್ ಮತ್ತು ಇಟಲಿ ಪ್ರಜೆಗಳಿಗೆ ಕುವೈತ್ ವೀಸಾ ನಿರ್ಬಂಧ ಹೇರಿತ್ತು. ವೈರಸ್ ಮರೆಯಾದ ನಂತರ ವೀಸಾ ನಿಷೇಧವನ್ನು ತೆಗೆದುಹಾಕಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. ಅಧಿಕೃತವಾಗಿ ಘೋಷಿಸದಿದ್ದರೂ ಇತರ ರಾಷ್ಟ್ರೀಯನ್ನರಿಗೂ ವೀಸಾ ನೀಡಲಾಗುವುದಿಲ್ಲ ಎನ್ನಲಾಗಿದೆ. ನಿಶ್ಚಿತ ಮಾನ್ಯತೆ ಇದ್ದರೂ ವಿಸಾಗೆ ಅಪೇಕ್ಷೆ ಸಲ್ಲಿಸಿದವರನ್ನೂ ವಿಸಾ ನೀಡದೆ ಹಿಂದಿರುಗಿಸಲಾಗಿದೆ ಎಂದು ವರದಿಯಾಗಿದೆ.

error: Content is protected !! Not allowed copy content from janadhvani.com