janadhvani

Kannada Online News Paper

‘ಫಿಟ್ ಇಂಡಿಯಾ’ ರೈಲು ನಿಲ್ದಾಣದಲ್ಲಿ ಬಸ್ಕಿ ಹೊಡೆದರೆ ಉಚಿತ ಟಿಕೆಟ್

ಬೆಂಗಳೂರು(ಫೆ. 22): ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಯೋಜನೆಯ ಅಂಗವಾಗಿ ಈಗ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೊಸ ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ರೈಲು ಪ್ರಯಾಣಿಕರಿಗೆ ಬಂಫರ್ ಆಫರ್ ನೀಡಿದ್ದಾರೆ.

ನಿಮ್ಮ ಆಪ್ತರನ್ನು ರೈಲಿಗೆ ಹತ್ತಿಸಲು ನಿಲ್ದಾಣಕ್ಕೆ ಹೋದ ವೇಳೆ ನೀವು ಪ್ಲಾಟ್ ಫಾರಂ ಟಿಕೆಟ್ ಕೊಳ್ಳುವುದು ಅನಿವಾರ್ಯ. ಒಂದು ವೇಳೆ ಪ್ಲಾಟ್ ಫಾರಂ ಟಿಕೆಟ್ ಇಲ್ಲದೇ ನೀವು ರೈಲು ನಿಲ್ದಾಣದಲ್ಲಿದ್ದರೆ, ದಂಡ ತೆರಬೇಕಾಗಿರುವುದು ಅನಿವಾರ್ಯ.

ಈ ರೈಲ್ವೆ ಟಿಕೆಟ್ನ್ನು ಇನ್ಮುಂದೆ ನೀವು ಉಚಿತವಾಗಿ ಪಡೆಯಬಹುದು. ಅದು ಫಿಟ್ ಇಂಡಿಯಾ ಯೋಜನೆ ಮೂಲಕ. ರೈಲು ನಿಲ್ದಾಣದಲ್ಲಿ 3 ನಿಮಿಷದಲ್ಲಿ 30 ಬಸ್ಕಿ ಹೊಡೆದರೆ ಇನ್ಮುಂದೆ ಉಚಿತವಾಗಿ ಈ ಪ್ಲಾಟ್ ಫಾರಂ ಟಿಕೆಟ್ ಪಡೆಯಬಹುದು.

ಈಗಾಗಲೇ ದೆಹಲಿಯಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಶೀಘ್ರದಲ್ಲಿಯೇ ದೇಶದ ಇತರೆ ರೈಲ್ವೆ ನಿಲ್ದಾಣದಲ್ಲಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಟ್ವೀಟ್ ಮೂಲಕ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ.

180 ಸೆಕೆಂಡ್ಗಳಲ್ಲಿ 30 ಬಸ್ಕಿ ಹೊಡೆಯುವುದರಿಂದ ಉಚಿತ ಟಿಕೆಟ್ ಜೊತೆ ಆರೋಗ್ಯಕ್ಕೆ ಕೂಡ ಒಳಿತಾಗಲಿದೆ. ಈ ಮೂಲಕ ನಾವು ಇಂಡಿಯಾವನ್ನು ಫಿಟ್ ಆಗಿಡಬಹುದು ಎಂಬುದು ಕೇಂದ್ರ ಸಚಿವರ ಆಂಬೋಣ.

error: Content is protected !! Not allowed copy content from janadhvani.com