janadhvani

Kannada Online News Paper

ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ 30 ಲಕ್ಷ ರೂ. ಸುಪಾರಿ- ಶೂಟರ್ ರವಿ

ಮೀರತ್ :ಎನ್ಕೌಂಟರ್ ನಲ್ಲಿ ಬಂಧಿಯಾಗಿರುವ ಮತ್ತು ಶಕ್ತಿ ನಾಯ್ಡು ಗ್ಯಾಂಗ್ ನಲ್ಲಿ ಬಂಧಿಯಾಗಿರುವ ಶೂಟರ್ ರವಿ ಭೂರಾನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಚಾರಣೆಯ ವೇಳೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಚೇರಿಯಿಂದ 8 ಕೋಟಿ ರೂ.ಹಣ ಲೂಟಿ ಮಾಡಿರುವುದಾಗಿ ಹಾಗೂ ರಾಜಸ್ಥಾನದ ಸಂಪತ್ ನೆಹ್ರಾ ಗ್ಯಾಂಗ್ ಜೊತೆ ಸೇರಿ ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ 30 ಲಕ್ಷ ರೂ. ಸುಪಾರಿ ಪಡೆದಿರುವುದಾಗಿ ಭೂರಾ ಒಪ್ಪಿಕೊಂಡಿದ್ದಾನೆ.

ಜನವರಿ 5, 2018 ರಲ್ಲಿ ಜೋಧ್ಪುರ್ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ವಿಚಾರಣೆಗೆ ಹಾಜರಾಗಿದ್ದ ವೇಳೆ ಲಾರೆನ್ಸ್ ವಿಷ್ನೋಯಿ ಸಲ್ಮಾನ್ ಗೆ ಹತ್ಯೆಮಾಡುವುದಾಗಿ ಧಮ್ಕಿ ನೀಡಿದ್ದ. ರವಿ ಭೂರಾ ನೀಡಿರುವ ಈ ಹೇಳಿಕೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮೀರತ್ ಝೋನ್ ನ ಅಪರ್ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ADG ಕುಮಾರ್, ಕಳೆದ ಮಂಗಳವಾರ ಕಂಕರ್ ಖೇಡಾ ಬಳಿ ಒಂದುವರೇ ಲಕ್ಷ ರೂ. ಬಹುಮಾನ ಘೋಷಿಸಲ್ಪಟ್ಟ ಗ್ಯಾಂಗಸ್ಟರ್ ಶಿವಶಕ್ತಿ ನಾಯ್ಡುನನ್ನು ಹತ್ಯೆಗೈಯಲಾಗಿತ್ತು. ಆದರೆ, ಆತನ ಸಹಪಾಟಿ ರವಿ ಮಲಿಕ್ ಉರ್ಫ್ ಭೂರಾ ತಪ್ಪಿಸಿಕೊಂಡು ಪರಾರಿಯಾಗಿದ್ದ. ರವಿ ಮುಜಫ್ಫರ್ ನಗರ್ ಬಳಿ ಇರುವ ರಾಯಷಿ ನಿವಾಸಿಯಾಗಿದ್ದು, ದೆಹಲಿಯ ಜೀವನ ಪಾರ್ಕ್ ಕಾಲೋನಿಯಲ್ಲಿ ವಾಸವಾಗಿದ್ದ. ಆದರೆ, ಶುಕ್ರವಾರ ಆತ ಪುಷ್ಪ್ ವಿಹಾರ್ ನಲ್ಲಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಆತನನ್ನು ಸುತ್ತುವರೆದಿದ್ದಾರೆ.

ಈ ವೇಳೆ ರೇಲ್ವೆ ರೋಡ್ ಮೂಲಕ ಆತ ಪರಾರಿಯಾಗಲು ಯತ್ನಿಸಿದ್ದು, ಆತನ ಸಹಪಾಟಿಗಳು ಪೊಲೀಸರ ಮೇಲೆ ಗುಂಡುಗಳನ್ನು ಹಾರಿಸಿದ್ದಾರೆ. ಈ ವೇಳೆ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ರವಿ ಕಾಲಿಗೆ ಗುಂಡು ತಗುಲಿದೆ. ಇದನ್ನು ನೆಪವಾಗಿಸಿಕೊಂಡ ಆತನ ಮೂವರು ಸಹಪಾಟಿಗಳಾದ ಪಿಂಟು ಬಂಗಾಳಿ, ನಿತಿನ್ ಸೈದ್ಪುರಿಯಾ ಹಾಗೂ ಇನ್ನೋರ್ವ ಹಂತಕ ಪರಾರಿಯಾಗಿದ್ದಾರೆ.

ADG ನೀಡಿರುವ ಮಾಹಿತಿ ಪ್ರಕಾರ, ರಾಜಸ್ಥಾನದ ಸಂಪತ್ ನೆಹ್ರಾ ಜೊತೆ ಸೇರಿ ರವಿ 2018ರಲ್ಲಿ ಹೈದರಾಬಾದ್ ನಲ್ಲಿ ನಟ ಸಲ್ಮಾನ್ ಖಾನ್ ಹತ್ಯೆಗೆ ಸುಪಾರಿ ಪಡೆದಿರುವುದು ಆತ ಒಪ್ಪಿಕೊಂಡಿದ್ದಾನೆ. 5 ಲಕ್ಷ ರೂ. ಇನಾಮು ಘೋಷಿಸಲ್ಪಟ್ಟ ಸಂಪತ್ ನನ್ನು ಹೈದ್ರಾಬಾದ್ ಪೊಲೀಸರು ಸಂಪತ್ನನ್ನು ಬಂಧಿಸಿದ್ದಾರೆ. ಸದ್ಯ ಆತ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

error: Content is protected !! Not allowed copy content from janadhvani.com