janadhvani

Kannada Online News Paper

ಅಭೂತಪೂರ್ವ ಯಶಸ್ಸು ಕಂಡ ತುಂಬೆ ರಕ್ತದಾನ ಶಿಬಿರ

ತುಂಬೆ: SSF ಫರಂಗಿಪೇಟೆ ಸೆಕ್ಟರ್ ಹಾಗು SYS ತುಂಬೆ ಬ್ರಾಂಚ್ ಜಂಟಿ ಅಶ್ರಯದಲ್ಲಿ ಹಾಗು ತೇಜಸ್ವಿನಿ ಅಸ್ಪತ್ರೆ ಸಹಭಾಗಿತ್ವದಲ್ಲಿ ತುಂಬೆ ಮುಹಿಯ್ಯದ್ದಿನ್ ಜುಮಾ ಮಸೀದಿಯ ಮುಂಭಾಗದ ಬಿ.ಎ ಮೈದಾನದಲ್ಲಿ ಬ್ರಹತ್ ರಕ್ತದಾನ ಶಿಬಿರ ನಡೆಯಿತು.

ಮುಹಿಯ್ಯದ್ದಿನ್ ಜುಮಾ ಮಸೀದಿ ತುಂಬೆ ಇದರ ಖತೀಬರಾದ ಬಹು!ಅಬ್ದುಲ್ ಲತೀಫ್ ಫೈಝಿ ದುಃವಾ ನೆರವೇರಿಸುವ ಮೂಲಕ ರಕ್ತದಾನ ಶಿಬಿರವನ್ನು SSF ತುಂಬೆ ಶಾಖೆ ಅಧ್ಯಕ್ಷರಾದ ಬಹು!ಮುಸ್ತಾಕ್ ಮದನಿ ಉಸ್ತಾದ್ ಉದ್ಘಾಟಿಸಿದರು , ಮುಹಿಯ್ಯದ್ದಿನ್ ಜುಮಾ ಮಸೀದಿಯ ಅಧ್ಯಕ್ಷರಾದ ಜನಾಬ್!ಇಂತಿಯಾಝ್ ಅಲ್ಫಾ ಅಧ್ಯಕ್ಷೀಯ ಭಾಷಣ ನೆರೆವೇರಿಸಿದರು, SSF ಮಂಗಳೂರು ಡಿವಿಷನ್ ಅಧ್ಯಕ್ಷರಾದ ಬಹು!ಜುನೈದ್ ಸಹದಿ ಅಲ್-ಅಪ್ಲಳಿ ವಳವೂರ್ ಪ್ರಾಸ್ತಾವಿಕ ಭಾಷಣ ನಡೆಸಿದರು ಹಾಗು SSF ದ.ಕ ಜಿಲ್ಲಾ ಬ್ಲಡ್ ಸೈಬೋ ಉಸ್ತುವಾರಿ ಕೆರೀಂ ಕಂದ್ಕರ್ ಸಂದೇಶ ಭಾಷಣಗೈದರು.

ತುಂಬೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ತುಂಬೆ ನಾಡಿನ ಹಲವು ಸಂಘ ಸಂಸ್ಥೆಯ ಕಾರ್ಯಕರ್ತರು,ನಾಯಕರು,ಊರ ಪರಊರಿನ ಶಾಖೆಯ ಕಾರ್ಯಕರ್ತರು ಸೇರಿದಂತೆ ಒಟ್ಟು ತೊಂಬತ್ತು ಮಂದಿ ರಕ್ತದಾನ ನೀಡುವ ಮೂಲಕ ತುಂಬೆಯ ಇತಿಹಾಸದಲ್ಲಿ ದಾಖಲೆಯನ್ನು ನಿರ್ಮಿಸಿದರು.

ಪ್ರಸುತ್ತ ರಕ್ತದಾನ ಶಿಬಿರದಲ್ಲಿ SSF ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಬಹು!ನವಾಝ್ ಸಖಾಫಿ ಅಡ್ಯಾರ್ ಪದವು, SSF ಫರಂಗಿಪೇಟೆ ಅಧ್ಯಕ್ಷರಾದ ಬಹು!ಅಸೀಫ್ ಸಹದಿ ಅಡ್ಯಾರ್ ಪದವು, SSF ಮಂಗಳೂರು ಡಿವಿಷನ್ ಉಪಾಧ್ಯಕ್ಷರಾದ ಸೆಯ್ಯದ್ ಇಶಾಕ್ ತಂಘಳ್ ಕಣ್ಣೂರ್, SSF ಮಂಗಳೂರು ಡಿವಿಷನ್ ಮಾಜಿ ಪ್ರ.ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಕಣ್ಣೂರ್, ಡಿವಿಷನ್ ಸದಸ್ಯರಾದ ಮನ್ಸೂರ್ ಬಜಾಲ್, ಡಿವಿಷನ್ ಪ್ರ.ಕಾರ್ಯದರ್ಶಿ ಸುಹೈಲ್ ಹತ್ತನೇ ಮೈಲು ಕಲ್ಲು, ಡಿವಿಷನ್ ಬ್ಲಡ್ ಸೈಬೋ ಉಸ್ತುವಾರಿಯಾದ ಫಯಾಝ್ ಕೊಪ್ಪಳ ಹಾಗು ಅಝ್ಮಲ್ ಕಾವೂರ್, SYS ತುಂಬೆ ಬ್ರಾಂಚ್ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಎಂ.ಎ, SSF ಫರಂಗಿಪೇಟೆ ಸೆಕ್ಟರ್ ಪ್ರ.ಕಾರ್ಯದರ್ಶಿ ಅಮೀನ್ ಟಿ.ಎ , SYS ತುಂಬೆ ಬ್ರಾಂಚ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಎಸ್.ಬಿ ಮುಂತಾದ ಹಲವಾರು ನಾಯಕರು ಉಪಸ್ಥರಿದ್ದರು.

ಕಾರ್ಯಕ್ರಮವನ್ನು SSF ತುಂಬೆ ಶಾಖೆ ಕೋಶಾಧಿಕಾರಿ ಮುಹಮ್ಮದ್ ನೌಷದ್ ಸ್ವಾಗತಿಸಿದರು,ಪ್ರ.ಕಾರ್ಯದರ್ಶಿ ಮುಹಮ್ಮದ್ ಶಾಕೀರ್ ಧನ್ಯವಾದಗೈದರು.

ವರದಿ:-
ಇರ್ಫಾಝ್ ತುಂಬೆ

error: Content is protected !! Not allowed copy content from janadhvani.com