janadhvani

Kannada Online News Paper

ಪ್ರವಾದಿ ನಿಂದಕ ಮಧುಗಿರಿ ಮೋದಿ ಯಾನೆ ಅತುಲ್ ಕುಮಾರ್ ವಿರುದ್ದ SSF ಉಪ್ಪಿನಂಗಡಿ ಡಿವಿಷನ್ ವತಿಯಿಂದ ದೂರು ದಾಖಲು

ಉಪ್ಪಿನಂಗಡಿ: ಪ್ರವಾದಿ ಸ.ಅ ರವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿ ಧರ್ಮ ನಿಂದನೆ ಮತ್ತು ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಕೋಮುವಾದಿ ಅತುಲ್ ಕುಮಾರ್ ಯಾನೆ ಮಧುಗಿರಿ ಮೋದಿ ಎಂಬವನ ವಿರುದ್ಧ SSF ಉಪ್ಪಿನಂಗಡಿ ಡಿವಿಷನ್ ವತಿಯಿಂದ ಇಂದು ಉಪ್ಪಿನಂಗಡಿ ಠಾಣೆಯಲ್ಲಿ ‌ದೂರು ದಾಖಲಿಸಲಾಯಿತು.

ಠಾಣಾಧಿಕಾರಿ ಈರಯ್ಯ D. N ಅವರನ್ನು ಭೇಟಿ‌ ಮಾಡಿದ ನಿಯೋಗ ಮನವಿ ಸಲ್ಲಿಸಿ, ಕಠಿಣ ಕಾನೂನುಕ್ರಮ‌ಕ್ಕೆ ಒತ್ತಾಯಿಸಿತು.

ಈ ಸಂಧರ್ಭ SSF ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷರಾದ ಮಸೂದ್ ಸಅದಿ ಪದ್ಮುಂಜ, ಪ್ರ. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪದ್ಮುಂಜ, SSF ಈಸ್ಟ್ ಝೋನ್ ಕೋಶಾಧಿಕಾರಿ ಮುಹಮ್ಮದ್ ರಫೀಕ್ ಅಹ್ಸನಿ ಬೋವು, ಡಿವಿಷನ್ ಸದಸ್ಯರಾದ ಅಶ್ರಫ್ ಉಜಿರ್ ಬೆಟ್ಟು,ಸಲಾಂ ಮದನಿ ಉರುವಲು ಪದವು,ಶರೀಫ್ ಸ.ಅದಿ ಜೊತೆಗಿದ್ದರು.

error: Content is protected !! Not allowed copy content from janadhvani.com